ಸಿಂಪಲ್ ಹಣ ನಿರ್ವಹಣೆ (Money management) ಸೂತ್ರವೆಂದರೆ ಹಣ ಸಂಪಾದನೆ, ಹಣ ಉಳಿತಾಯ ಮತ್ತು ಹೂಡಿಕೆ. ಈ ಮೂರಂಶಗಳ ಕಾರ್ಯಕ್ರಮ ಸಮರ್ಪಕವಾಗಿ ಜಾರಿಯಾದರೆ ಜೀವನಕ್ಕೆ ಹಣಕಾಸು ಭದ್ರತೆ ಬಹಳ ಗಟ್ಟಿಯಾಗಿರುತ್ತದೆ. ಇವತ್ತು ನಾವು ಸಂಪಾದಿಸಿ ಕೂಡಿಟ್ಟ 10 ಲಕ್ಷ ರೂ ಹಣ ಇದ್ದರೆ ಎಲ್ಲಿ ಹೂಡಿಕೆ ಮಾಡಬಹುದು ಎಂದು ಯಾರಿಗಾದರೂ ಅನಿಸಬಹುದು. ಇವತ್ತು ಬಹಳಷ್ಟು ಹೂಡಿಕೆ ಆಯ್ಕೆಗಳಿವೆ. ರಿಸ್ಕ್ ಕಡಿಮೆ ಇರುವ ಮತ್ತು ರಿಟರ್ನ್ ಹೆಚ್ಚು ನಿರೀಕ್ಷಿಸಬಹುದಾದ ನಾಲ್ಕು ಹೂಡಿಕೆ ಸ್ಥಳಗಳನ್ನು ತಜ್ಞರು ಶಿಫಾರಸು ಮಾಡುತ್ತಾರೆ.
ಚಿನ್ನ ಯಾವತ್ತಿದ್ದರೂ ಸುರಕ್ಷಿತ ಹೂಡಿಕೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 18ರಷ್ಟು ಬೆಳೆದಿದೆ. ಬೇರೆ ಹೂಡಿಕೆಗಳಿಗಿಂತ ಇದು ಸರಾಸರಿಯಾಗಿ ಹೆಚ್ಚು ರಿಟರ್ನ್ ಕೊಡಬಲ್ಲುದು. ಇವತ್ತು ಚಿನ್ನ ಖರೀದಿಸಬೇಕೆಂದರೆ ಒಡವೆಯೋ, ಚಿನ್ನದ ಗಟ್ಟಿಗಳನ್ನೋ ಖರೀದಿಸಬೇಕೆಂದೇನೂ ಇಲ್ಲ. ಗೋಲ್ಡ್ ಇಟಿಎಫ್, ಸಾವರೀನ್ ಗೋಲ್ಡ್ ಬಾಂಡ್ ಇತ್ಯಾದಿ ಸ್ಕೀಮ್ಗಳನ್ನು ಪಡೆಯಬಹುದು.
ಇದನ್ನೂ ಓದಿ: ಮ್ಯೂಚುವಲ್ ಫಂಡ್ನಲ್ಲಿ ಹಣ ಹಾಕಿದರೆ ಗ್ಯಾರಂಟಿ ಲಾಭ ಬರುತ್ತದೆಂಬುದು ಭ್ರಮೆ; ಹೂಡಿಕೆಗೆ ಮುಂಚೆ ಕೆಲ ವಿಚಾರಗಳು ತಿಳಿದಿರಲಿ
ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಷೇರುಗಳ ಮೇಲೆ ನಿಮ್ಮ ಹಣ ಹಾಕಬಹುದು. ಈ ದೀಪಾವಳಿಯಲ್ಲಿ ವಾಹನ, ಎಫ್ಎಂಸಿಜಿ, ಪೇಂಟ್, ಗೃಹೋಪಕರಣ, ಆಭರಣ ಇತ್ಯಾದಿ ಕ್ಷೇತ್ರಗಳ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ ನಿರೀಕ್ಷಿಸಬಹುದು ಎನ್ನುತ್ತಾರೆ ತಜ್ಞರು.
ಮ್ಯುಚುವಲ್ ಫಂಡ್ಗಳ ಎಸ್ಐಪಿ ಈಗ ಬಹಳ ಟ್ರೆಂಡಿಂಗ್ನಲ್ಲಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗಳು ನಿಮಗೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹೂಡಿಕೆ ಮಾಡಲು ಅವಕಾಶ ಒದಗಿಸುತ್ತವೆ. ಉತ್ಪಾದನೆ, ಕಟ್ಟಡ ನಿರ್ಮಾಣ ಇತ್ಯಾದಿ ಎಂಜಿನಿಯರಿಂಗ್ ಕ್ಷೇತ್ರ ಕಂಪನಿಗಳ ಷೇರುಗಳ ಮೇಲೆ ಹೆಚ್ಚು ತೊಡಗಿಸಿಕೊಂಡಿರುವ ಈಕ್ವಿಟಿ ಮ್ಯುಚುವಲ್ ಫಂಡ್ಗಳಲ್ಲಿ ಎಸ್ಐಪಿ ಪಡೆದರೆ ಹೆಚ್ಚು ಲಾಭ ಮಾಡಬಹುದು.
ಇದನ್ನೂ ಓದಿ: Share Market Or Gold?: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?
ಎಲ್ಲಾ ಹೂಡಿಕೆಯನ್ನು ಈಕ್ವಿಟಿಗಳ ಮೇಲೆ ಹಾಕಿದರೆ ಬಹಳ ರಿಸ್ಕಿ ಎನಿಸಬಹುದು. ನಿಮ್ಮ ಹೂಡಿಕೆಯ ಒಂದಷ್ಟು ಭಾಗವು ಫಿಕ್ಸೆಡ್ ಡೆಪಾಸಿಟ್ಗಳಲ್ಲಿ ಇರುವುದು ಉತ್ತಮ. ಕಡಿಮೆ ಬಡ್ಡಿಯಾದರೂ ಅವು ನಿಶ್ಚಿತವಾಗಿ ಬರುವ ಆದಾಯವಾಗಿರುತ್ತವೆ.
ಒಟ್ಟಾರೆ, ನಿಮ್ಮ ಹೂಡಿಕೆಯು ಚಿನ್ನ, ಷೇರು, ಎಸ್ಐಪಿ ಮತ್ತು ಎಫ್ಡಿಗಳಲ್ಲಿ ಹಂಚಿಕೆ ಆಗುವುದು ಒಳ್ಳೆಯದು ಎನ್ನುತ್ತಾರೆ ಹೂಡಿಕೆ ತಜ್ಞ ರಾಜೇಶ್ ಚೆರುವು.
ಚಿನ್ನ, ಈಕ್ವಿಟಿ ಮತ್ತು ಎಫ್ಡಿಗಳಲ್ಲಿ (ಡೆಟ್ ಫಂಡ್) ಹೂಡಿಕೆ ಮಾಡುವ ಮ್ಯುಚುವಲ್ ಫಂಡ್ಗಳು ಹಲವಿವೆ. ಅವುಗಳಲ್ಲಿ ಎಸ್ಐಪಿ ತೆರೆಯುವುದೂ ಕೂಡ ಉತ್ತಮ ಆಲೋಚನೆಯೇ.
ಇದನ್ನೂ ಓದಿ: ಹೆಚ್ಚುತ್ತಿದೆ ಎಸ್ಐಪಿಗಳ ಜನಪ್ರಿಯತೆ; ಈ ವರ್ಷ 1 ಲಕ್ಷ ಕೋಟಿ ರೂ ಮೈಲಿಗಲ್ಲು ಮುಟ್ಟಿದ ಹೂಡಿಕೆ
ಹಾಗೆಯೆ, ಈಕ್ವಿಟಿಗಿಂತಲೂ ಇನ್ನೂ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಾಮರ್ಥ್ಯ ಇರುವವರು ಪ್ರೈವೇಟ್ ಈಕ್ವಿಟಿಗಳಲ್ಲಿ ಹೂಡಕೆ ಮಾಡಬಹುದು. ಇವು ಹೆಚ್ಚು ರಿಟರ್ನ್ ಕೊಡಬಲ್ಲುವಾದರೂ ಅಪಾಯ ಸಾಧ್ಯತೆ ಹೆಚ್ಚು. ಎಲ್ಲಾ ಹೂಡಿಕೆಗಳಾಗಿ, ಹೆಚ್ಚುವರಿ ಹಣ ಇದ್ದರೆ ಇಂಥ ಸಾಹಸಗಳಿಗೆ ಕೈ ಹಾಕಬಹುದು ಎಂಬುದು ತಜ್ಞರು ನೀಡುವ ಎಚ್ಚರಿಕೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ