ಮ್ಯುಚುವಲ್ ಫಂಡ್ಗಳು ಒಂದು ಉತ್ತಮ ಹೂಡಿಕೆ ಆಯ್ಕೆ. ಆದರೆ, ಕೆಲವಿಷ್ಟು ಪ್ರಮುಖ ವಿಚಾರಗಳು ತಿಳಿಯದೇ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿಯೂ ಹೌದು. ಭಾರತದಲ್ಲಿ 44 ನೊಂದಾಯಿತ ಮ್ಯುಚುವಲ್ ಫಂಡ್ ಕಂಪನಿಗಳು (Mutual Funds) 2,500ಕ್ಕೂ ಹೆಚ್ಚು ಫಂಡ್ಗಳನ್ನು ನಿಭಾಯಿಸುತ್ತಿವೆ. ಇವುಗಳಲ್ಲಿ ಹಲವು ಮ್ಯುಚುವಲ್ ಫಂಡ್ಗಳು ವಾರ್ಷಿಕವಾಗಿ ಶೇ. 7ರಿಂದ 15ರಷ್ಟು ಲಾಭ ತಂದಿರುವುದು ಹೌದು. ಆದರೆ, ಶೇ. 15ಕ್ಕಿಂತ ಹೆಚ್ಚು ರಿಟರ್ನ್ ತಂದಿರುವ ಫಂಡ್ಗಳು ತೀರಾ ಹೆಚ್ಚೇನಿಲ್ಲ. ಮತ್ತೆ ಕೆಲ ಫಂಡ್ಗಳು ನಷ್ಟ ತಂದಿರುವುದೂ ಉಂಟು. ಹೀಗಾಗಿ, ಮ್ಯೂಚುವಲ್ ಫಂಡ್ ಎಂಬ ಸಾಗರದಲ್ಲಿ ಈಜುವ ಮುನ್ನ ಕೆಲ ಮುನ್ನೆಚ್ಚರಿಕೆಗಳನ್ನು ತಿಳಿದಿರಬೇಕು. ಇಲ್ಲದಿದ್ದರೆ ರಿಸ್ಕ್ ಸಾಧ್ಯತೆ ಹೆಚ್ಚಿರುತ್ತದೆ.
ರಿಸ್ಕ್ ವಿಚಾರ: ಮ್ಯುಚುವಲ್ ಫಂಡ್ಗಳು ಷೇರುಮಾರುಕಟ್ಟೆ, ಡೆಟ್ ಇತ್ಯಾದಿ ಕಡೆ ಹಣ ಹೂಡುತ್ತವೆ. ಇವು ಹೂಡಿಕೆ ಮಾಡುವ ಷೇರು ಹಿನ್ನಡೆ ಕಂಡರೆ ನಷ್ಟ ಆಗುತ್ತದೆ. ಈ ವಿಚಾರ ಬಹಳ ಸ್ಪಷ್ಟವಾಗಿ ಗೊತ್ತಿರಬೇಕು.
ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?
ಶುಲ್ಕ ಮತ್ತಿತರ ವೆಚ್ಚ: ಮ್ಯುಚುವಲ್ ಫಂಡ್ ಸೇವೆ ಬಳಸಲು ವಿವಿಧ ಶುಲ್ಕಗಳಿರುತ್ತವೆ. ಕೆಲವೊಮ್ಮೆ ನಿಮಗೆ ಬರುವ ಲಾಭದಲ್ಲಿ ಹೆಚ್ಚಿನ ಭಾಗವು ಈ ವೆಚ್ಚಕ್ಕೆ ಸಂದಾಯವಾಗಬಹುದು. ಫಂಡ್ನ ನಿಯಮಗಳನ್ನು ಓದಿ ಇದನ್ನು ತಿಳಿಯಬಹುದು.
ಹಿಂದಿನ ಸಾಧನೆ ಮುಖ್ಯವಲ್ಲ: ಹಲವು ಮ್ಯುಚುವಲ್ ಫಂಡ್ಗಳು ಹಿಂದೆಲ್ಲಾ ಶೇ. 15ಕ್ಕಿಂತ ಹೆಚ್ಚು ಲಾಭ ತಂದಿರಬಹುದು. ಅವು ಮುಂದೆಯೂ ಅಷ್ಟೇ ದರದಲ್ಲಿ ಹೂಡಿಕೆ ಬೆಳೆಸುತ್ತವೆ ಎಂದು ನಿಶ್ಚಿತವಾಗಿ ಹೇಳಲು ಆಗಲ್ಲ. ಯಾಕೆಂದರೆ ಮಾರುಕಟ್ಟೆ ಸ್ಥಿತಿ ಒಂದೇ ತೆರನಾಗಿರುವುದಿಲ್ಲ.
ನಷ್ಟಕ್ಕೆ ಸಿದ್ಧವಾಗಿ: ಮ್ಯುಚುವಲ್ ಫಂಡ್ನಲ್ಲಿ ಅಥವಾ ನೇರವಾಗಿ ಷೇರಿನಲ್ಲಿ ಮಾಡಿದ ಹೂಡಿಕೆಯಿಂದ ಲಾಭ ಬಂದೇ ಬರುತ್ತದೆ ಎಂದು ಭಾವಿಸಿದ್ದರೆ ಅದು ಶುದ್ಧ ತಪ್ಪು ಕಲ್ಪನೆ. ಸಾಕಷ್ಟು ಬಾರಿ ನಷ್ಟಗಳು ಆಗುವುದುಂಟು. ಹೀಗಾಗಿ, ನಿಮ್ಮ ಜೀವನ ನಿರ್ವಹಣೆಗೆ ತುರ್ತು ಹಣ ಇರಿಸಿದ ಬಳಿಕ ಹೆಚ್ಚುವರಿಯಾಗಿರುವ ಹಣವನ್ನು ಮಾತ್ರ ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿ.
ಇದನ್ನೂ ಓದಿ: ಎಚ್ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್ಎಲ್ಎಲ್ನತ್ತ
ಸುಲಭ ಗಳಿಕೆ ಸಾಧ್ಯವಿಲ್ಲ: ಒಂದು ವರ್ಷದಲ್ಲಿ ಹಣ ಹಾಕಿ ಇಷ್ಟಿಷ್ಟು ಲಾಭ ಮಾಡುತ್ತೇನೆಂದು ಹೊರಟರೆ ಉಪಯೋಗವಿಲ್ಲ. ದೂರಗಾಮಿಯಾಗಿ ಮಾತ್ರ ಮಾರುಕಟ್ಟೆ ಸ್ಥಿರವಾಗಿ ಇರುತ್ತದೆ.
ಸರಿಯಾದ ಫಂಡ್ ಆರಿಸಿ: ಹೂಡಿಕೆ ಮಾಡುವ ಮುನ್ನ ವಿವಿಧ ಮ್ಯುಚುವಲ್ ಫಂಡ್ಗಳನ್ನು ಅಧ್ಯಯನ ಮಾಡಿ. ಅವುಗಳು ಎಲ್ಲೆಲ್ಲಿ ಹೂಡಿಕೆ ಮಾಡಿವೆ ಎಂಬಿತ್ಯಾದಿ ಸಂಗತಿ ನಿಮಗೆ ತಿಳಿದಿರಲಿ. ಭವಿಷ್ಯದಲ್ಲಿ ಉತ್ತಮವಾಗಿ ಬೆಳೆಯಬಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿರುವ ಫಂಡ್ಗಳನ್ನು ಹುಡುಕಿ. ಆದರೆ, ಫಂಡ್ ಆಯ್ಕೆ ವಿಚಾರದಲ್ಲಿ ಅತುರ ಬೇಡ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ