ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

|

Updated on: Nov 12, 2023 | 10:50 AM

Investment Option: ಕಳೆದ ವರ್ಷದ ದೀಪಾವಳಿ ಮತ್ತು ಈ ವರ್ಷದ ದೀಪಾವಳಿ ಮಧ್ಯೆ ಷೇರುಗಳು ಮತ್ತು ಚಿನ್ನ ಹೇಗೆ ಬೆಲೆ ಹೆಚ್ಚಳ ಕಂಡಿವೆ ಎಂಬುದರತ್ತ ಒಂದು ನೋಟ ಇಲ್ಲಿದೆ. ವಿವಿಧ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳಿಗಿಂತ ಚಿನ್ನದ ಬೆಲೆ ಬಹಳಷ್ಟು ಮೌಲ್ಯವೃದ್ಧಿ ಕಂಡಿರುವುದು ವೇದ್ಯವಾಗಿದೆ. ಈ ಹೂಡಿಕೆಗಳು ಎಷ್ಟೆಷ್ಟು ಲಾಭ ತಂದಿವೆ ಎಂಬ ವಿವರ ಈ ಲೇಖನದಲ್ಲಿದೆ.

ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?
ಚಿನ್ನ
Follow us on

ಬೆಂಗಳೂರು, ನವೆಂಬರ್ 12: ಹೂಡಿಕೆಗೆ ಇರುವ ಸ್ಥಳಗಳಲ್ಲಿ ಷೇರುಪೇಟೆ (share market) ಮತ್ತು ಚಿನಿವಾರಪೇಟೆ (MCX) ಪ್ರಮುಖವಾದುವು. ಇವೆರಡರ ಮಧ್ಯೆ ಹೋಲಿಕೆ ಮಾಡಿದರೆ ಕೆಲ ಕುತೂಹಲದ ಸಂಗತಿ ಬೆಳಕಿಗೆ ಬರುತ್ತದೆ. ಭಾರತದಲ್ಲಿ ಚಿನ್ನಕ್ಕೆ ಸಾಂಪ್ರದಾಯಿಕ ಸ್ಥಾನವಿದೆ. ಕೇವಲ ಹೂಡಿಕೆಯಾಗಿ ಚಿನ್ನ ಖರೀದಿಸುವವರು ಇದ್ದಾರೆ. ಆದರೆ, ಆಭರಣಕ್ಕಾಗಿ ಚಿನ್ನ ಖರೀದಿಸುವವರು ಹೆಚ್ಚಿದ್ದಾರೆ. ಇನ್ನು, ಈಕ್ವಿಟಿ ಅಥವಾ ಷೇರುಗಳ ಮೇಲೆ ಹೂಡಿಕೆ ಮಾಡುವವರದ್ದು ಶುದ್ಧ ಹೂಡಿಕೆ. ಷೇರುಗಳ ಮೇಲೆ ಹೂಡಿಕೆ ಮಾಡಿ ಒಂದು ವರ್ಷದಲ್ಲಿ ಹತ್ತಾರು ಪಟ್ಟು ಲಾಭ ಮಾಡಿರುವವರು ಇದ್ದಾರೆ. ಹಾಗೆಯೇ, ಸಾಕಷ್ಟು ನಷ್ಟ ಕಂಡಿರುವವರೂ ಇದ್ದಾರೆ.

ಷೇರುಪೇಟೆ ಎಷ್ಟು ಗತಿಯಲ್ಲಿ ಓಡಿದೆ ಎಂಬುದನ್ನು ಅದರ ವಿವಿಧ ಸೂಚ್ಯಂಕಗಳು ತೋರ್ಪಡಿಸುತ್ತವೆ. ಸೆನ್ಸೆಕ್ಸ್, ನಿಫ್ಟಿ 50 ಸೇರಿದಂತೆ ವಿವಿಧ ಸೂಚ್ಯಂಕಗಳು ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಇವೆ. ಹಲವು ಮ್ಯೂಚುವಲ್ ಫಂಡ್​ಗಳು ಈ ಸೂಚ್ಯಂಕಗಳನ್ನು ಅನುಸರಿಸುತ್ತವೆ. ಹೀಗಾಗಿ, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳ ಸಾಧನೆಯು ಒಟ್ಟಾರೆ ಷೇರುಪೇಟೆಯ ಗತಿಯನ್ನು ಬಿಂಬಿಸುತ್ತದೆ.

ಇದನ್ನೂ ಓದಿ: ಕೇವಲ 10,000 ರೂ ಲಂಪ್ಸಮ್ ಹೂಡಿಕೆ ತರುತ್ತದೆ 30 ಲಕ್ಷ ರಿಟರ್ನ್; ಈ ಮಲ್ಟಿ ಅಸೆಟ್ ಫಂಡ್ ಅಚ್ಚರಿ

ಒಂದು ವರ್ಷದಲ್ಲಿ ಷೇರುಪೇಟೆ ಸೂಚ್ಯಂಕಗಳು ಹೇಗೆ ಬೆಳದಿವೆ?

ಕಳೆದ ದೀಪಾವಳಿಯಿಂದೀಚೆ ಸೂಚ್ಯಂಕಗಳ ಬೆಳವಣಿಗೆಯನ್ನು ಅವಲೋಕಿಸಿ ನೋಡಬಹುದು. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಒಂದು ವರ್ಷದಲ್ಲಿ ಶೇ. 9.4ರಷ್ಟು ಹೆಚ್ಚಿದೆ. ನಿಫ್ಟಿ50 ಸೂಚ್ಯಂಕ 17,730ರಿಂದ 19,425 ಅಂಕಗಳ ಮಟ್ಟ ತಲುಪಿದೆ. ಅಂದರೆ, ಶೇ. 9.50ರಷ್ಟು ಹೆಚ್ಚಿದೆ. ಇನ್ನು, ನಿಫ್ಟಿ ಬ್ಯಾಂಕ್ ಸೂಚ್ಯಂಕ ಕೇವಲ ಶೇ. 6ರಷ್ಟು ಮಾತ್ರ ಹೆಚ್ಚಳ ಕಂಡಿದೆ.

ಚಿನ್ನದ ಬೆಳವಣಿಗೆ ಹೇಗೆ?

ಇನ್ನು, ಚಿನ್ನದ ಬೆಲೆ ಕಳೆದ ವರ್ಷದ ದೀಪಾಳಿಯಲ್ಲಿ 10 ಗ್ರಾಂಗೆ 50,580 ರೂ ಇತ್ತು. ಈ ದೀಪಾವಳಿ ಹಬ್ಬದಲ್ಲಿ ಅದರ ಬೆಲೆ 59,654 ರೂ ತಲುಪಿದೆ. ಅಂದರೆ ಒಂದು ವರ್ಷದಲ್ಲಿ ಶೇ. 18ರಷ್ಟು ಬೆಲೆ ಹೆಚ್ಚಳವಾಗಿದೆ.

ಇದನ್ನೂ ಓದಿ: ಮ್ಯುಚುವಲ್ ಫಂಡ್​ನಲ್ಲಿ ಯಾವಾಗ ಹೂಡಿಕೆ ಆರಂಭಿಸಬೇಕು? ಷೇರು ಮಾರುಕಟ್ಟೆಯ ಸ್ಥಿತಿ ಪ್ರಕಾರ ನಿಮ್ಮ ಹೂಡಿಕೆ ಶುರು ಆಗಬೇಕಾ? ಇಲ್ಲಿದೆ ಡೀಟೇಲ್ಸ್

ಇನ್ನು, ಬೆಳ್ಳಿ ಬೆಲೆ ಚಿನ್ನವನ್ನೂ ಮೀರಿಸಿ ಹೆಚ್ಚಿದೆ. ಕಿಲೋಗೆ 57,748 ರೂ ಇದ್ದ ಬೆಳ್ಳಿ ಬೆಲೆ ಈ ವರ್ಷ 70,000 ರೂ ಮಟ್ಟ ದಾಟಿದೆ. ಅಂದರೆ, ಶೇ. 21ರಷ್ಟು ಬೆಲೆ ಹೆಚ್ಚಳ ಕಂಡಿದೆ.

ತಜ್ಞರ ಪ್ರಕಾರ, ಇನ್ನೊಂದು ವರ್ಷದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 68,000 ರೂ ಮಟ್ಟ ದಾಟುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ ಕಿಲೋಗೆ 95,000 ರೂ ಮಟ್ಟ ಮೀರಿ ಬೆಳೆಯಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Sun, 12 November 23