Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ

|

Updated on: Feb 13, 2023 | 9:53 AM

Petrol and Diesel Rate Today in Bangalore; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.

Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳ ಇಂದಿನ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ
ಪೆಟ್ರೋಲ್, ಡೀಸೆಲ್
Follow us on

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ದೇಶದ ತೈಲ ಕಂಪನಿಗಳು ಪ್ರತಿ ದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡುತ್ತವೆ. ಆದರೆ, ಮೇ 22 ರಿಂದ ದೇಶದಲ್ಲಿ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ (diesel price) ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ ಇಂದೂ (ಫೆಬ್ರವರಿ 13) ಸಹ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಆದಾಗ್ಯೂ, ಆಯಾ ರಾಜ್ಯಗಳು ವಿಧಿಸುವ ಸೆಸ್, ಸ್ಥಳೀಯ ತೆರಿಗೆಗಳಿಗೆ ಅನುಗುಣವಾಗಿ ಇಂಧನ ದರದಲ್ಲಿ ಪ್ರತಿ ದಿನ ಬದಲಾವಣೆಯಾಗುತ್ತವೆ. ಹಿಂದಿನ ದಿನಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ದರ ಇಂದು ಸ್ಥಿರವಾಗಿದೆ. ಕಳೆದ ವಾರವಷ್ಟೇ ನೆರೆ ರಾಜ್ಯ ಕೇರಳ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು 2 ರೂ. ಹೆಚ್ಚಿಸಿತ್ತು ಪರಿಣಾಮವಾಗಿ ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಕರ್ನಾಟಕದ ಪೆಟ್ರೋಲ್​ ಬಂಕ್​ಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂದಿದೆ.

ಕೇರಳ ಮತ್ತು ಕರ್ನಾಟಕದಲ್ಲಿ ಪೆಟ್ರೋಲ್ ದರದಲ್ಲಿ ಸುಮಾರು 6 ರೂ. ವ್ಯತ್ಯಾಸವಿದೆ. ಹೀಗಾಗಿ ಗಡಿ ಭಾಗಗಳ ಕೇರಳೀಯರು ಕರ್ನಾಟಕದ ಬಂಕ್​ಗಳಿಗೆ ಬಂದು ಪೆಟ್ರೋಲ್ ಪಡೆಯುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರಗಳ ಪೆಟ್ರೋಲ್, ಡೀಸೆಲ್ ದರ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 101.94 ರೂ. ಇದ್ದರೆ, ಡೀಸೆಲ್ ದರ 87.89 ರೂ. ಇದೆ. ಚೆನ್ನೈಯಲ್ಲಿ ಪೆಟ್ರೋಲ್ ದರ 102.63 ರೂ, ಡೀಸೆಲ್ ಬೆಲೆ 94.24 ರೂ, ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ 106.03 ರೂ, ಡೀಸೆಲ್ ದರ 92.76 ರೂ, ಮುಂಬೈಯಲ್ಲಿ ಪೆಟ್ರೋಲ್ ದರ 106.03 ರೂ, ಡೀಸೆಲ್ ದರ 94.27 ರೂ, ದೆಹಲಿಯಲ್ಲಿ ಪೆಟ್ರೋಲ್​​ ಬೆಲೆ 96.72 ರೂ, ಡೀಸೆಲ್ ದರ 89.62 ರೂ. ಇದೆ.

ಕೇರಳದ ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 107.71 ರೂ, ಡೀಸೆಲ್ ದರ 96.52 ರೂ. ಇದೆ.

ಪೆಟ್ರೋಲ್ ಬೆಲೆ ತಿಳಿಯುವುದು ಹೇಗೆ?

ಇಂದು ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು? ನೀವು ಇದನ್ನು ತುಂಬಾ ಸುಲಭವಾಗಿ ಪರಿಶೀಲಿಸಬಹುದು. ಇತ್ತೀಚಿನ ಬೆಲೆಯನ್ನು ಪರಿಶೀಲಿಸಲು, ಒಬ್ಬರು ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಅಥವಾ SMS ಕಳುಹಿಸಬೇಕು. ಇಂಡಿಯನ್ ಆಯಿಲ್ ಗ್ರಾಹಕರು RSP ಜೊತೆಗೆ 9224992249 ಗೆ ಸಿಟಿ ಕೋಡ್‌ನೊಂದಿಗೆ SMS ಕಳುಹಿಸಬಹುದು ಮತ್ತು BPCL ಗ್ರಾಹಕರು RSP ಅನ್ನು 9223112222 ಗೆ ಕಳುಹಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:53 am, Mon, 13 February 23