ಬೆಂಗಳೂರು: ದಿನೇ ದಿನೇ ದುಬಾರಿಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಸತತವಾಗಿ 6ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆ ಹಾಗೂ ಲೀಟರ್ ಡೀಸೆಲ್ ಬೆಲೆ 32 ಪೈಸೆಯಷ್ಟು ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 91.40 ರೂ ಆಗಿದೆ. ಹಾಗೂ ಡೀಸೆಲ್ ಬೆಲೆ 83.47 ರೂ.ಆಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 88.73 ರೂ. ಹಾಗೂ ಡೀಸೆಲ್ 79.06 ರೂ. ಇದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಂತೆ, ದೇಶೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆದಲ್ಲಿ ಏರಿಕೆಯಾಗುವುದು ಸಾಮಾನ್ಯ ಸಂಗತಿ. ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದರ ಇಳಿಕೆಯತ್ತ ಮುಖ ಮಾಡಿದರೆ ದೇಶಿಯ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯತ್ತ ಮುಖ ಮಾಡುತ್ತದೆ. ಆದರೆ ಅಂತರಾಷ್ಟೀಯ ಮಟ್ಟದಲ್ಲಿ ತೈಲದ ಬೆಲೆ ದರ ಹೆಚ್ಚಳವಾಗದಿದ್ದರೂ, ದೇಶಿಯ ಮಾರುಕಟ್ಟೆಯಲ್ಲಿ ದರ ಏರುತ್ತಲೇ ಇದೆ.
ಕೊರೊನಾ ಸಂಕಷ್ಟದಿಂದ ಜನರು ಬೇಸತ್ತಿದ್ದಾರೆ. ಜೊತೆಗೆ ತೈಲದ ದರ ಏರಿಕೆಯತ್ತ ಮುಖ ಮಾಡುತ್ತಲೇ ಇದೆ. ಇದರಿಂದ ಜನರು ಕುಂಠಿತಗೊಳ್ಳುತ್ತಿದ್ದಾರೆ. ಅದಷ್ಟೋ ಸಂಘಟನೆಗಳು ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಪ್ರತಿಭಟನೆಯನ್ನು ಕೈಗೊಂಡರೂ ಈ ಕುರಿತಂತೆ ಸರ್ಕಾರ ಯಾವುದೇ ಗಮನ ಹರಿಸುತ್ತಿಲ್ಲ. ಸರ್ಕಾರಿ ಒಡೆತನದ ತೈಲ ಕಂಪನಿಗಳು ದರದಲ್ಲಿ ಏರಿಕೆ ಮಾಡುತ್ತಲೇ ಇದೆ. ಇದೇ ರೀತಿ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದ್ದರೆ, ಪ್ರತಿ ಲೀ. ಪೆಟ್ರೋಲ್ ದರ 100 ರೂ ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇದನ್ನೂ ಓದಿ: Petrol Price Today: ಸತತವಾಗಿ 4ನೇ ದಿನವೂ ಏರಿದ ಪೆಟ್ರೋಲ್ ದರ
ಮೆಟ್ರೋ ನಗರಗಳಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ:
ನಗರ ಪೆಟ್ರೋಲ್ ಡೀಸೆಲ್
ದೆಹಲಿ ₹88.73 ₹79.06
ಚೆನ್ನೈ ₹90.96 ₹84.16
ಕೊಲ್ಕತ್ತಾ ₹90.01 ₹82.65
ಮುಂಬೈ ₹95.21 ₹86.04