Petrol Price on December 3: ಉತ್ತರ ಕನ್ನಡದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಕುಸಿತ; ನಿಮ್ಮ ಊರಿನ ಇಂಧನದ ಬೆಲೆ ಹೀಗಿದೆ

Fuel Price Today: ಕರ್ನಾಟಕದ ಇಂಧನದ ಬೆಲೆಯನ್ನು ಗಮನಿಸುವುದಾದರೆ ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೊಂಚ ಕುಸಿತವಾಗಿದೆ.

Petrol Price on December 3: ಉತ್ತರ ಕನ್ನಡದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೊಂಚ ಕುಸಿತ; ನಿಮ್ಮ ಊರಿನ ಇಂಧನದ ಬೆಲೆ ಹೀಗಿದೆ
ಪೆಟ್ರೋಲ್, ಡೀಸೆಲ್ ಬೆಲೆಗಳು
Follow us
| Updated By: ಸುಷ್ಮಾ ಚಕ್ರೆ

Updated on: Dec 03, 2022 | 8:39 AM

Fuel Price on December 3: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಆದರೆ, ದೇಶದ ವಿವಿಧ ನಗರಗಳ ಪೆಟ್ರೋಲ್ (Petrol Price) ಮತ್ತು ಡೀಸೆಲ್ (Diesel Price) ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿ-ಮುಂಬೈನಂತಹ ದೇಶದ ಎಲ್ಲಾ 4 ಮಹಾನಗರಗಳಲ್ಲಿ ಇಂಧನದ ಬೆಲೆ (Fuel Price) ಸ್ಥಿರವಾಗಿದೆ. ಕರ್ನಾಟಕದ ಇಂಧನದ ಬೆಲೆಯನ್ನು ಗಮನಿಸುವುದಾದರೆ ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೊಂಚ ಕುಸಿತವಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇ 21ರಂದು ಪೆಟ್ರೋಲ್ ಮೇಲೆ ಲೀಟರ್​ಗೆ 8 ರೂ. ಮತ್ತು ಡೀಸೆಲ್ ಮೇಲೆ 6 ರೂ. ಅಬಕಾರಿ ಸುಂಕ ಕಡಿತ ಮಾಡುವುದಾಗಿ ಘೋಷಿಸಿದ್ದರು.ಸುಮಾರು 6 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಮಾಡದೇ ಇರುವುದು ಇದೇ ಮೊದಲು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಆ ದಿನದ ಹೊಸ ದರಗಳು ಬೆಳಿಗ್ಗೆ 6 ಗಂಟೆಯಿಂದಲೇ ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಬಕಾರಿ ಸುಂಕ, ಡೀಲರ್ ಕಮಿಷನ್, ವ್ಯಾಟ್ ಮತ್ತು ಇತರ ವಸ್ತುಗಳ ಸೇರ್ಪಡೆಯಿಂದಾಗಿ ಅದರ ಬೆಲೆ ಮೂಲ ಬೆಲೆಗಿಂತ ದ್ವಿಗುಣಗೊಳ್ಳುತ್ತದೆ. ಇದರಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ತುಂಬಾ ಹೆಚ್ಚಾಗಿತ್ತು.

ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. OPEC ರಾಷ್ಟ್ರಗಳು ಕಚ್ಚಾ ಉತ್ಪಾದನೆಯಲ್ಲಿ ಕಡಿತದ ಘೋಷಣೆ ಮಾಡಿದ ನಂತರ ಕಚ್ಚಾ ತೈಲದಲ್ಲಿ ಏರಿಳಿತಗಳಾಗಿತ್ತು. ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ, ಕಂಪನಿಗಳು ಇದನ್ನು ಮಾಡಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 6 ತಿಂಗಳಿನಿಂದ ಪೆಟ್ರೋಲ್ -ಡೀಸೆಲ್ ಬೆಲೆ ಸ್ಥಿರವಾಗಿದೆ. ಇದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.

ಇದನ್ನೂ ಓದಿ: Petrol Price on December 1: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಹೆಚ್ಚಳ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ: ಬಾಗಲಕೋಟೆ – ರೂ. 102.50, ಬೆಂಗಳೂರು – ರೂ. 101.94, ಬೆಂಗಳೂರು ಗ್ರಾಮಾಂತರ – ರೂ. 101.58, ಬೆಳಗಾವಿ – ರೂ. 102.15, ಬಳ್ಳಾರಿ – ರೂ. 103.90, ಬೀದರ್ – ರೂ. 102.58, ವಿಜಯಪುರ – ರೂ. 102.12, ಚಾಮರಾಜನಗರ – ರೂ. 102.13, ಚಿಕ್ಕಬಳ್ಳಾಪುರ – ರೂ. 101.69, ಚಿಕ್ಕಮಗಳೂರು – ರೂ. 103.32, ಚಿತ್ರದುರ್ಗ – ರೂ. 103.47, ದಕ್ಷಿಣ ಕನ್ನಡ – ರೂ. 101.13, ದಾವಣಗೆರೆ – ರೂ. 103.57, ಧಾರವಾಡ – ರೂ. 101.71, ಗದಗ – ರೂ. 102.25, ಕಲಬುರಗಿ – ರೂ. 102.12, ಹಾಸನ – ರೂ. 101.90, ಹಾವೇರಿ – ರೂ. 102.41, ಕೊಡಗು – ರೂ. 103.26, ಕೋಲಾರ – ರೂ. 101.87, ಕೊಪ್ಪಳ – ರೂ. 103.03, ಮಂಡ್ಯ – ರೂ. 101.74, ಮೈಸೂರು – ರೂ. 101.83, ರಾಯಚೂರು – ರೂ. 101.84, ರಾಮನಗರ – ರೂ. 102.25, ಶಿವಮೊಗ್ಗ – ರೂ. 103.45, ತುಮಕೂರು – ರೂ. 102.64, ಉಡುಪಿ – ರೂ. 101.44, ಉತ್ತರ ಕನ್ನಡ – ರೂ. 102.01, ಯಾದಗಿರಿ – ರೂ. 102.43 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಹೀಗಿವೆ: ಬಾಗಲಕೋಟೆ – ರೂ. 88.42, ಬೆಂಗಳೂರು – ರೂ. 87.89, ಬೆಂಗಳೂರು ಗ್ರಾಮಾಂತರ – ರೂ. 87.57, ಬೆಳಗಾವಿ – ರೂ. 88.11, ಬಳ್ಳಾರಿ – ರೂ. 89.68, ಬೀದರ್ – ರೂ. 88.50, ವಿಜಯಪುರ – ರೂ. 88.07, ಚಾಮರಾಜನಗರ – ರೂ. 88.07, ಚಿಕ್ಕಬಳ್ಳಾಪುರ – ರೂ. 87.67, ಚಿಕ್ಕಮಗಳೂರು – ರೂ. 88.98, ಚಿತ್ರದುರ್ಗ – ರೂ. 89.10, ದಕ್ಷಿಣ ಕನ್ನಡ – ರೂ. 87.13, ದಾವಣಗೆರೆ – ರೂ. 89.20, ಧಾರವಾಡ – ರೂ. 87.71, ಗದಗ – ರೂ. 88.20, ಕಲಬುರಗಿ – ರೂ. 88.08, ಹಾಸನ – ರೂ. 87.70, ಹಾವೇರಿ – ರೂ. 88.34, ಕೊಡಗು – ರೂ. 88.92, ಕೋಲಾರ – ರೂ. 87.83, ಕೊಪ್ಪಳ – ರೂ. 88.92, ಮಂಡ್ಯ – ರೂ. 87.71, ಮೈಸೂರು – ರೂ. 87.80, ರಾಯಚೂರು – ರೂ. 87.84, ರಾಮನಗರ – ರೂ. 88.17, ಶಿವಮೊಗ್ಗ – ರೂ. 89.16, ತುಮಕೂರು – ರೂ. 88.52, ಉಡುಪಿ – ರೂ. 87.41, ಉತ್ತರ ಕನ್ನಡ – ರೂ. 87.98, ಯಾದಗಿರಿ – ರೂ. 88.36 ಆಗಿದೆ.

ದೆಹಲಿಯಲ್ಲಿ ಪೆಟ್ರೋಲ್ 96.65 ರೂ. ಮತ್ತು ಡೀಸೆಲ್ ಲೀಟರ್‌ಗೆ 89.82 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಕೊಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.59 ರೂ. ಮತ್ತು ಡೀಸೆಲ್ 89.76 ರೂ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.47 ರೂ. ಮತ್ತು ಡೀಸೆಲ್ 89.66 ರೂ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ 93.72 ರೂ. ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ 96.52 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್ 94.76 ರೂ. ಚಂಡೀಗಢದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ 84.26 ರೂ. ಹೈದರಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ. ಆಗಿದೆ.

ಇದನ್ನೂ ಓದಿ: Petrol Price on November 29: 10 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ತೈಲದ ಬೆಲೆ; ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಕಳುಹಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸವು ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ