Fuel Price on November 5: ಭಾರತದ ಪ್ರಮುಖ ನಗರಗಳಲ್ಲಿ ಇಂದು (ಶನಿವಾರ) ಕೂಡ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆಯಲ್ಲಿ (Diesel Price) ಯಾವುದೇ ಬದಲಾವಣೆ ಆಗಿಲ್ಲ. 5 ತಿಂಗಳಿನಿಂದ ಇಂಧನದ ಬೆಲೆಗಳು ಸ್ಥಿರವಾಗಿವೆ. ಕಚ್ಚಾ ತೈಲದ ಬೆಲೆಯಲ್ಲಿ ಸಾಕಷ್ಟು ಕುಸಿತವಾಗಿದ್ದರೂ ಇಂಧನದ ಬೆಲೆಯಲ್ಲಿ ಏರಿಳಿತವಾಗಿಲ್ಲ. ಕರ್ನಾಟಕದ ಚಿತ್ರದುರ್ಗದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೊಂಚ ಹೆಚ್ಚಾಗಿದೆ. ಆದರೆ ಶಿವಮೊಗ್ಗದಲ್ಲಿ ಇಂಧನದ ಬೆಲೆ (Fuel Rate) ಇಳಿಕೆಯಾಗಿದೆ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಇಂಧನದ ಬೆಲೆಗಳ ಪರಿಷ್ಕರಣೆಯನ್ನು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಮಾಡುತ್ತವೆ. ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ಗೆ 6 ರೂ. ಕಡಿತಗೊಳಿಸಿದ್ದರಿಂದ ಮೇ ತಿಂಗಳ ಅಂತ್ಯದಲ್ಲಿ ಇಂಧನದ ಬೆಲೆಗಳಲ್ಲಿ ದೇಶಾದ್ಯಂತ ಏರಿಳಿತ ಕಂಡುಬಂದಿತ್ತು.
ಪರಿಷ್ಕೃತ ದರಗಳ ಪ್ರಕಾರ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳು ಹೀಗಿವೆ…
ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 96.72 ಮತ್ತು 89.62 ರೂ. ಆಗಿದೆ.
ಮುಂಬೈನಲ್ಲಿ ಪೆಟ್ರೋಲ್‌ಗೆ 106.31 ರೂ ಮತ್ತು ಡೀಸೆಲ್‌ಗೆ 94.27 ರೂ.
ಚೆನ್ನೈ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ.
ಕೋಲ್ಕತ್ತಾ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ.
ನೋಯ್ಡಾದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ ಲೀಟರ್‌ಗೆ 89.96 ರೂ.
ಲಕ್ನೋದಲ್ಲಿ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ ಲೀಟರ್‌ಗೆ 89.76 ರೂ.
ಜೈಪುರದಲ್ಲಿ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ ಲೀಟರ್‌ಗೆ 93.72 ರೂ.
ತಿರುವನಂತಪುರದಲ್ಲಿ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ ಲೀಟರ್‌ಗೆ 96.52 ರೂ.
ಪಾಟ್ನಾದಲ್ಲಿ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ ಲೀಟರ್‌ಗೆ 94.04 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ ಲೀಟರ್‌ಗೆ 87.89 ರೂ.
ಹೈದರಾಬಾದ್‌ನಲ್ಲಿ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ ಲೀಟರ್‌ಗೆ 97.82 ರೂ. ಆಗಿದೆ.
ಇದನ್ನೂ ಓದಿ: Petrol Price on November 2: ಕಚ್ಚಾ ತೈಲದ ಬೆಲೆ ಏರಿಕೆ; ಇಂದಿನ ಪೆಟ್ರೋಲ್- ಡೀಸೆಲ್ ದರವೆಷ್ಟು?
ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಕಚ್ಚಾ ತೈಲ ದಾಖಲೆ ಮಟ್ಟಕ್ಕೆ ಕುಸಿದಿತ್ತು. ಆದರೆ ಆಗ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಮೇ 22ರಂದು ತೈಲದ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿತ್ತು. 5 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರುವುದು ಇದೇ ಮೊದಲು. ಮೇ 22ರಂದು ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಯಿತು. ಇದರ ನಂತರ, ಮಹಾರಾಷ್ಟ್ರದಲ್ಲಿ ತೈಲದ ಮೇಲಿನ ವ್ಯಾಟ್ ಅನ್ನು ಕಡಿಮೆಗೊಳಿಸಲಾಯಿತು. ಇದರಿಂದಾಗಿ ಇಂಧನ ಬೆಲೆ ಕಡಿಮೆಯಾಯಿತು.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. OMC ಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿವೆ.
ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ.
ಬಾಗಲಕೋಟೆ – ರೂ. 102.55, ಬೆಂಗಳೂರು – ರೂ. 101.94, ಬೆಂಗಳೂರು ಗ್ರಾಮಾಂತರ – ರೂ. 102.09, ಬೆಳಗಾವಿ – ರೂ. 102.64, ಬಳ್ಳಾರಿ – ರೂ. 103.73, ಬೀದರ್ – ರೂ. 102.28, ವಿಜಯಪುರ – ರೂ. 101.72, ಚಾಮರಾಜನಗರ – ರೂ. 102.06, ಚಿಕ್ಕಬಳ್ಳಾಪುರ – ರೂ. 101.94, ಚಿಕ್ಕಮಗಳೂರು – ರೂ. 102.90, ಚಿತ್ರದುರ್ಗ – ರೂ. 103.84, ದಕ್ಷಿಣ ಕನ್ನಡ – ರೂ. 101.13, ದಾವಣಗೆರೆ – ರೂ. 103.85, ಧಾರವಾಡ – ರೂ. 101.70, ಹಾಸನ – ರೂ. 102.12, ಹಾವೇರಿ – ರೂ. 102.89, ಕೊಡಗು – ರೂ. 103.31, ಕೋಲಾರ – ರೂ. 101.87, ಮಂಡ್ಯ – ರೂ. 102.17, ಮೈಸೂರು – ರೂ. 101.50, ರಾಯಚೂರು – ರೂ. 102.67, ರಾಮನಗರ – ರೂ. 102.39, ಶಿವಮೊಗ್ಗ – ರೂ. 102.79, ತುಮಕೂರು – ರೂ. 102.45, ಉಡುಪಿ – ರೂ. 101.59, ಉತ್ತರ ಕನ್ನಡ – ರೂ. 102.94 ಆಗಿದೆ.
ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ಹೀಗಿದೆ.
ಬಾಗಲಕೋಟೆ – ರೂ. 88.46, ಬೆಂಗಳೂರು – ರೂ. 87.89, ಬೆಂಗಳೂರು ಗ್ರಾಮಾಂತರ – ರೂ. 88.03, ಬೆಳಗಾವಿ – ರೂ. 88.55, ಬಳ್ಳಾರಿ – ರೂ. 89.53, ಬೀದರ್ – ರೂ. 88.23, ವಿಜಯಪುರ – ರೂ. 87.71, ಚಿಕ್ಕಬಳ್ಳಾಪುರ – ರೂ. 87.89, ಚಿಕ್ಕಮಗಳೂರು – ರೂ. 88.62, ಚಿತ್ರದುರ್ಗ – ರೂ. 89.44, ದಕ್ಷಿಣ ಕನ್ನಡ – ರೂ. 87.13, ದಾವಣಗೆರೆ – ರೂ. 89.45, ಧಾರವಾಡ – ರೂ. 87.70, ಹಾಸನ – ರೂ. 87.89, ಹಾವೇರಿ – ರೂ. 88.77, ಕೊಡಗು – ರೂ. 88.97, ಕೋಲಾರ – ರೂ. 87.83, ಮಂಡ್ಯ – ರೂ. 88.10, ಮೈಸೂರು – ರೂ. 87.49, ರಾಮನಗರ – ರೂ. 88.29, ಶಿವಮೊಗ್ಗ – ರೂ. 88.56, ತುಮಕೂರು – ರೂ. 88.36, ಉಡುಪಿ – ರೂ. 87.54, ಉತ್ತರ ಕನ್ನಡ – ರೂ. 88.76 ಆಗಿದೆ.
ಇದನ್ನೂ ಓದಿ: Petrol Price on November 3: ದೆಹಲಿ, ಚೆನ್ನೈ, ಬೆಂಗಳೂರು ಮುಂತಾದ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ
ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಕಳುಹಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸವು ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.