AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕ ಉದ್ಯಮಶೀಲತೆ ರ‍್ಯಾಂಕಿಂಗ್ 2026: ಪಿಚ್​ಬುಕ್ ಪಟ್ಟಿಯಲ್ಲಿವೆ ಭಾರತದ 8 ಯೂನಿವರ್ಸಿಟಿಗಳು

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಗುಣವನ್ನು ಕಲಿಸುವ ಶಿಕ್ಷಣ ಸಂಸ್ಥೆಗಳು ಯಾವುದೇ ದೇಶಕ್ಕಾದರೂ ಆಸ್ತಿ. ಇಂಥ ಜಾಗತಿಕ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯೂನಿವರ್ಸಿಗಳೂ ಸೇರಿವೆ. ವೆಂಚರ್ ಕ್ಯಾಪಿಟಲ್ ರಿಸರ್ಚ್ ಸಂಸ್ಥೆಯಾದ ಪಿಚ್​ಬುಕ್ ಪ್ರಕಟಿಸಿರುವ ಉದ್ಯಮಶೀಲತೆಯ ಯೂನಿವರ್ಸಿಟಿಗಳ ಪಟ್ಟಿಯಲ್ಲಿ ಭಾರತದ ಎಂಟು ಶಿಕ್ಷಣ ಸಂಸ್ಥೆಗಳಿವೆ. ಐಐಟಿ ಬಾಂಬೆಯಿಂದ ತೊಡಗಿ ಬಿಟ್ಸ್ ಪಿಲಾನಿವರೆಗೆ ಎಂಟು ಯೂನಿರ್ಸಿಟಿಗಳು ಈ ಪಟ್ಟಿಯಲ್ಲಿವೆ.

ಜಾಗತಿಕ ಉದ್ಯಮಶೀಲತೆ ರ‍್ಯಾಂಕಿಂಗ್ 2026: ಪಿಚ್​ಬುಕ್ ಪಟ್ಟಿಯಲ್ಲಿವೆ ಭಾರತದ 8 ಯೂನಿವರ್ಸಿಟಿಗಳು
ಐಐಟಿ ದೆಹಲಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 10, 2026 | 1:09 PM

Share

ನವದೆಹಲಿ, ಸೆಪ್ಟೆಂಬರ್ 10: ವಿಶ್ವದ ಶ್ರೇಷ್ಠ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಭಾರತದ ಐಐಎಂಗಳು ಒಳಗೊಂಡಿವೆ. ಹಾಗೆಯೇ, ತಾಂತ್ರಿಕ ಶಿಕ್ಷಣದಲ್ಲೂ ಭಾರತದ ಹಲವು ಕಾಲೇಜು, ಯೂನಿವರ್ಸಿಟಿಗಳು ವಿಶ್ವ ಗುಣಮಟ್ಟದ್ದಾಗಿವೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಓಬಿರಾಯನ ಕಾಲದ್ದು ಎಂದು ಮೂಗು ಮುರಿಯುವವರಿಗೆ ಉತ್ತರ ಎಂಬಂತೆ, ವೆಂಚರ್ ಕ್ಯಾಪಿಟಲ್ ರಿಸರ್ಚ್ ಸಂಸ್ಥೆಯೊಂದು ಪ್ರಕಟಿಸಿದ ಪಟ್ಟಿ ಪ್ರಕಾರ, ವಿಶ್ವದ ಟಾಪ್-100 ಶಿಕ್ಷಣ ಸಂಸ್ಥೆಗಳ ಪೈಕಿ ಭಾರತದ ಎಂಟು ವಿವಿಗಳು ಸ್ಥಾನ ಪಡೆದಿವೆ. ‘ಪಿಚ್‌ಬುಕ್’ (PitchBook) ಪ್ರಕಟಿಸಿರುವ 2026ರ ಉದ್ಯಮಶೀಲತಾ ವಿಶ್ವವಿದ್ಯಾಲಯಗಳ ಶ್ರೇಯಾಂಕದಲ್ಲಿ (Global University Rankings for Entrepreneurs) ಭಾರತದ 8 ಪ್ರಮುಖ ಶಿಕ್ಷಣ ಸಂಸ್ಥೆಗಳು ವಿಶ್ವದ ಅಗ್ರ 100 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ನವೋದ್ಯಮ (Start-up) ಹಾಗೂ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (IITs) ಹಳೆಯ ವಿದ್ಯಾರ್ಥಿಗಳ ಕೊಡುಗೆಯನ್ನು ಈ ಶ್ರೇಯಾಂಕ ಎತ್ತಿಹಿಡಿದಿದೆ.

ಈ ಶ್ರೇಯಾಂಕವನ್ನು 2015ರ ಜನವರಿಯಿಂದ 2026ರ ಆಗಸ್ಟ್ ರವರೆಗೆ ವೆಂಚರ್ ಕ್ಯಾಪಿಟಲ್ (VC) ಹೂಡಿಕೆಗಳನ್ನು ಪಡೆದ ವಿಶ್ವದ 2.22 ಲಕ್ಷಕ್ಕೂ ಹೆಚ್ಚು ಉದ್ಯಮಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಹೊಸ ಕೈಗಾರಿಕಾ ಕ್ರಾಂತಿ; ಆರು ವಲಯಗಳ ಉತ್ಕೃಷ್ಟ ಬೆಳವಣಿಗೆ: ಜೆಫರೀಸ್ ವರದಿ

ಪಿಚ್‌ಬುಕ್ ಶ್ರೇಯಾಂಕದಲ್ಲಿರುವ ಭಾರತದ 8 ಸಂಸ್ಥೆಗಳು

  1. ಐಐಟಿ ಬಾಂಬೆ (IIT Bombay): ಜಾಗತಿಕವಾಗಿ 22ನೇ ಸ್ಥಾನ ಪಡೆಯುವ ಮೂಲಕ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದೆ (756 ಉದ್ಯಮಿಗಳು, 590 ಕಂಪನಿಗಳು).
  2. ಐಐಟಿ ದೆಹಲಿ (IIT Delhi): ಜಾಗತಿಕವಾಗಿ 27ನೇ ಸ್ಥಾನ (640 ಉದ್ಯಮಿಗಳು, 546 ಕಂಪನಿಗಳು).
  3. ಐಐಟಿ ಮದ್ರಾಸ್ (IIT Madras): 48ನೇ ಸ್ಥಾನ (447 ಉದ್ಯಮಿಗಳು, 399 ಕಂಪನಿಗಳು).
  4. ಐಐಟಿ ಖರಗ್‌ಪುರ (IIT Kharagpur): 49ನೇ ಸ್ಥಾನ (434 ಉದ್ಯಮಿಗಳು, 358 ಕಂಪನಿಗಳು).
  5. ಐಐಟಿ ಕಾನ್ಪುರ (IIT Kanpur): 50ನೇ ಸ್ಥಾನ (428 ಉದ್ಯಮಿಗಳು, 363 ಕಂಪನಿಗಳು).
  6. ದೆಹಲಿ ವಿಶ್ವವಿದ್ಯಾಲಯ (Delhi University): 62ನೇ ಸ್ಥಾನ (366 ಉದ್ಯಮಿಗಳು, 350 ಕಂಪನಿಗಳು).
  7. ಮುಂಬೈ ವಿಶ್ವವಿದ್ಯಾಲಯ (University of Mumbai): 74ನೇ ಸ್ಥಾನ (339 ಉದ್ಯಮಿಗಳು, 316 ಕಂಪನಿಗಳು).
  8. ಬಿಟ್ಸ್ ಪಿಲಾನಿ (BITS Pilani): 91ನೇ ಸ್ಥಾನ (265 ಉದ್ಯಮಿಗಳು, 230 ಕಂಪನಿಗಳು).

ಉದ್ಯಮಿಗಳ ನಿಧಿ ಸಂಗ್ರಹಣೆಯಲ್ಲಿ ಐಐಟಿ ದೆಹಲಿ ಮುಂಚೂಣಿ

ಐಐಟಿ ಬಾಂಬೆಗೆ ಹೋಲಿಸಿದರೆ ಕಡಿಮೆ ಉದ್ಯಮಿಗಳನ್ನು ಹೊಂದಿದ್ದರೂ, ಹೂಡಿಕೆದಾರರಿಂದ $55.65 ಬಿಲಿಯನ್ ಬಂಡವಾಳ ಸಂಗ್ರಹಿಸುವ ಮೂಲಕ ಐಐಟಿ ದೆಹಲಿ ಅಗ್ರಸ್ಥಾನದಲ್ಲಿದೆ. ಐಐಟಿ ಬಾಂಬೆ $33.64 ಬಿಲಿಯನ್, ಐಐಟಿ ಖರಗ್‌ಪುರ $23.19 ಬಿಲಿಯನ್, ಐಐಟಿ ಮದ್ರಾಸ್ $22.98ಬಿಲಿಯನ್ ಹಾಗೂ ಐಐಟಿ ಕಾನ್ಪುರ $21.2 ಬಿಲಿಯನ್ ನಿಧಿ ಸಂಗ್ರಹಿಸಿವೆ.

ಇದನ್ನೂ ಓದಿ: ಟರ್ಮ್ ಇನ್ಷೂರೆನ್ಸ್​ಗೆ ಏಜೆಂಟ್​ಗಳು ಶಿಫಾರಸು ಮಾಡೋದು ನೋಡಿದ್ದೀರಾ? ಇಲ್ಲಿವೆ ಉತ್ತಮ ಲಾಭ ತರುವ ಕೆಲ ಹೂಡಿಕೆಗಳು

ಐಐಟಿಗಳ ಕೊಡುಗೆ: ಶ್ರೇಯಾಂಕದ ಅಗ್ರ 100 ರಲ್ಲಿರುವ ಭಾರತದ 5 ಐಐಟಿಗಳು ಒಟ್ಟಾಗಿ 2,705 ಉದ್ಯಮಿಗಳು ಮತ್ತು 2,256 ಕಂಪನಿಗಳನ್ನು ಸೃಷ್ಟಿಸಿದ್ದು, ಒಟ್ಟು $156.65 ಬಿಲಿಯನ್ ಮೊತ್ತದಷ್ಟು ವೆಂಚರ್ ಕ್ಯಾಪಿಟಲ್ ನಿಧಿಯನ್ನು ಸಂಗ್ರಹಿಸಿವೆ.

ದೇಶಗಳ ಹಂತದಲ್ಲಿ ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಪಟ್ಟಿಯಲ್ಲಿ 62 ವಿಶ್ವವಿದ್ಯಾಲಯಗಳೊಂದಿಗೆ ಅಮೆರಿಕ (US) ಪ್ರಥಮ ಸ್ಥಾನದಲ್ಲಿದ್ದರೆ, ತಲಾ 8 ವಿಶ್ವವಿದ್ಯಾಲಯಗಳೊಂದಿಗೆ ಕೆನಡಾ ಮತ್ತು ಭಾರತ ಜಂಟಿ 2ನೇ ಸ್ಥಾನವನ್ನು ಹಂಚಿಕೊಂಡಿವೆ. ಯುಸಿ ಬರ್ಕ್ಲಿ (UC Berkeley) ವಿಶ್ವದ ಪ್ರಥಮ ಶ್ರೇಯಾಂಕಿತ ಸಂಸ್ಥೆಯಾಗಿ ಹೊರಹೊಮ್ಮಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ