ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Scheme) ಯೋಜನೆಯ 14ನೇ ಕಂತಿನ ಹಣ ಬಿಡುಗಡೆಗೆ ಒಂದು ದಿನ ಬಾಕಿ ಇದೆ. ವರದಿಗಳ ಪ್ರಕಾರ ಜುಲೈ 27ಕ್ಕೆ 14ನೇ ಕಂತಿನ ಹಣ ರಿಲೀಸ್ ಆಗುವ ನಿರೀಕ್ಷೆ ಇದೆ. ಪಿಎಂ ಕಿಸಾನ್ ಯೋಜನೆಯ 8 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗುರುವಾರ 2,000 ರೂ ಹಣ ನೇರವಾಗಿ ವರ್ಗಾವಣೆ ಆಗಲಿದೆ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯು ಬಡ ಮತ್ತು ಮಧ್ಯಮ ರೈತರಿಗೆ ವ್ಯವಸಾಯಕ್ಕೆ ಧನಸಹಾಯ ಕೊಡುವ ಉದ್ದೇಶ ಒಳಗೊಂಡಿದೆ. ಕೇಂದ್ರ ಸರ್ಕಾರ ವರ್ಷಕ್ಕೆ 6,000 ರೂ ಹಣವನ್ನು ಫಲಾನುಭವಿ ರೈತರಿಗೆ ಕೊಡುತ್ತದೆ. ಒಮ್ಮೆಗೇ 6,000 ರೂ ಕೊಡುವ ಬದಲು 2,000 ರೂಗಳ 3 ಕಂತುಗಳಲ್ಲಿ ಹಣ ವರ್ಗಾವಣೆ ಮಾಡುತ್ತದೆ.
ಪಿಎಂ ಕಿಸಾನ್ ಯೋಜನೆ ಮೂಲವಾಗಿ ಬಡ ರೈತರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ನಂತರದ ದಿನಗಳಲ್ಲಿ ತೆರಿಗೆ ಪಾವತಿದಾರರು, ವೃತ್ತಿಪರರು, ಸರ್ಕಾರಿ ಅಧಿಕಾರಿಗಳು, ಶಾಸಕ ಸಂಸದ ಇತ್ಯಾದಿ ಜನಪ್ರತಿನಿಧಿಗಳು, ಪಿಂಚಣಿದಾರರು ಹೊರತುಪಡಿಸಿ ಕೃಷಿ ಮಾಡುತ್ತಿರುವ ಎಲ್ಲಾ ರೈತರನ್ನೂ ಇದರಲ್ಲಿ ಒಳ್ಳಗೊಳ್ಳಲಾಗಿದೆ.
ಒಂದು ವೇಳೆ ಯೋಜನೆಯ ಲಾಭ ಪಡೆಯುತ್ತಿರುವ ರೈತರಲ್ಲಿ ಯಾರಿಗಾದರೂ ಈ ಯೋಜನೆ ತಮಗೆ ಬೇಡ ಎಂದು ಅನಿಸಿದಲ್ಲಿ ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಅವಕಾಶವನ್ನು ಇತ್ತೀಚೆಗೆ ಒದಗಿಸಲಾಗಿದೆ.
ಇದನ್ನೂ ಓದಿ: Arecanut Price 25 July: ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ದರ ಹೀಗಿದೆ
ಇದಾದ ಬಳಿಕ ನಿಮಗೆ ಮುಂದಿನ ಕಂತುಗಳು ಸಿಗುವುದಿಲ್ಲ.
ಇದನ್ನೂ ಓದಿ: Indian Economy: ಮೂರ್ನಾಲ್ಕು ದಶಕದಲ್ಲಿ ಭಾರತವೇ ವಿಶ್ವದ ನಂಬರ್ ಒನ್: ಬ್ರಿಟನ್ ಸಂಸದ ಲಾರ್ಡ್ ಕರಣ್ ಬಿಲಿಮೋರಿಯಾ
ನೀವು ಪಿಎಂ ಕಿಸಾನ್ ಯೋಜನೆಯ ಬೆನಿಫಿಟ್ ಅನ್ನು ಬಿಟ್ಟುಕೊಡುವಾಗ ನಿಮಗೆ ಹಿಂದೆ ಸಂದಾಯವಾದ ಹಣದ ವಿವರ ಕಾಣುತ್ತದೆ. ಅಷ್ಟು ಹಣವನ್ನು ನೀವು ಬಿಟ್ಟುಕೊಡಬೇಕು ಎಂದು ಅಲ್ಲ. ನಿಮಗೆ ಹಿಂದೆ ಬಂದ ಆ ಹಣವನ್ನು ವಾಪಸ್ ಮಾಡಬೇಕಾಗಿಲ್ಲ. ಮುಂದಿನ ಕಂತುಗಳಷ್ಟೇ ಬರುವುದು ನಿಲ್ಲುತ್ತವೆ.
ಅಷ್ಟೇ ಅಲ್ಲ, ನಿಮಗೆ ಸರ್ಕಾರದಿಂದ ಪ್ರಶಂಸಾ ಪತ್ರವೂ ಸಿಗುತ್ತದೆ. ಹಿಂದೆ ಗ್ಯಾಸ್ ಸಬ್ಸಿಡಿ ವಿಚಾರದಲ್ಲೂ ಸರ್ಕಾರ ಗಿವ್ ಅಪ್ ಕೆಂಪೇನ್ ಮಾಡಿತ್ತು. ಆಗಲೂ ಕೋಟ್ಯಂತರ ಜನರು ಸಬ್ಸಿಡಿ ಬೇಡವೆಂದು ನಿರ್ಧರಿಸಿದ್ದರು. ಪಿಎಂ ಕಿಸಾನ್ ಯೋಜನೆಯಲ್ಲೂ ಜನರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಅವಕಾಶ ಕೊಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ