
ನವದೆಹಲಿ, ಜುಲೈ 11: ದೇಶಾದ್ಯಂತ ರೈತರ (farmer) ವ್ಯವಸಾಯಕ್ಕೆ ಸಹಾಯವಾಗಿ ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) ಈವರೆಗೆ 19 ಕಂತುಗಳ ಹಣ ಬಿಡುಗಡೆ ಆಗಿದೆ. 20ನೇ ಕಂತಿನ ಹಣಕ್ಕೆ ಕಾಯಲಾಗುತ್ತಿದೆ. ಜೂನ್ ತಿಂಗಳಲ್ಲೇ 20ನೇ ಕಂತಿನ ಹಣ ಬರುವ ನಿರೀಕ್ಷೆ ಇತ್ತು. ಏಪ್ರಿಲ್ನಿಂದ ಜುಲೈವರೆಗಿನ ಅವಧಿಯ ಈ ಹಣ ಇದೇ ತಿಂಗಳಿನೊಳಗೆಯೇ ಬರುವುದು ನಿಶ್ಚಿತ.
9 ಕೋಟಿಗೂ ಅಧಿಕ ನೊಂದಾಯಿತ ರೈತರ ಖಾತೆಗಳಿಗೆ 2,000 ರೂ ಹಣ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಯೋಜನೆಗೆ ನೊಂದಾಯಿಸಿದವರೆಲ್ಲರಿಗೂ ಕಂತಿನ ಹಣ ಸಿಗುತ್ತದೆಂದು ಖಾತ್ರಿ ಇಲ್ಲ. ಕೆಲ ನಿಯಮಗಳನ್ನು ಪೂರ್ಣಗೊಳಿಸಿದ್ದರೆ ಮಾತ್ರವೇ ಹಣ ಸಿಗುತ್ತದೆ.
ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ಗೆ ‘ಡೈರಿ’ ತಡೆ; ಅಮೆರಿಕದ ಹಾಲು ಭಾರತಕ್ಕೆ ಬಂದರೆ ಹೇಗೆ?
ಪಿಎಂ ಕಿಸಾನ್ ಯೋಜನೆಯ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಲಾಗಿದೆ. ಕಂತಿನ ಹಣ ಸ್ವೀಕರಿಸಲು ಫಲಾನುಭವಿಗಳು ಖಾತ್ರಿಪಡಿಸಿಕೊಳ್ಳಬೇಕಾದ ಆರು ಸಂಗತಿಗಳನ್ನು ಅದರಲ್ಲಿ ತಿಳಿಸಲಾಗಿದೆ.
ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ವಿಳಾಸ ಇಂತಿದೆ: pmkisan.gov.in/
ಅಲ್ಲಿ ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಕಾಣುವ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ‘ಬೆನಿಫಿಶಿಯರಿ ಲಿಸ್ಟ್’ ಅನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಊರಿನಲ್ಲಿರುವ ಎಲ್ಲಾ ಪಿಎಂ ಕಿಸಾನ್ ಸ್ಕೀಮ್ ಫಲಾನುಭವಿಗಳ ಪಟ್ಟಿ ಕಾಣಬಹುದು.
ಇಕೆವೈಸಿ ಮಾಡುವ, ಮೊಬೈಲ್ ನಂಬರ್ ಅಪ್ಡೇಟ್ ಮಾಡುವ ಅವಕಾಶವೂ ವೆಬ್ಸೈಟ್ನಲ್ಲಿ ಇರುತ್ತದೆ.
ಇದನ್ನೂ ಓದಿ: ಪಿಎಂ ಕಿಸಾನ್: ಎಲ್ಲಾ ಅರ್ಹ ರೈತರನ್ನೂ ತಲುಪಲು ಸರ್ಕಾರ ಯತ್ನ; ನೀವು ಈ ಯೋಜನೆಗೆ ಅರ್ಹರಾ? ಇಲ್ಲಿದೆ ಡೀಟೇಲ್ಸ್
ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಕೇಂದ್ರ ನಡೆಸುತ್ತಿರುವ ಸ್ಕೀಮ್ ಇದು. ವರ್ಷದಲ್ಲಿ 6,000 ರೂ ನೀಡಲಾಗುತ್ತದೆ. ಇದನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ, ಅಂದರೆ, 2,000 ರೂಗಳ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ ಈ ಹಣವು ರೈತರ ಖಾತೆಗಳಿಗೆ ನೇರವಾಗಿ ಕ್ರೆಡಿಟ್ ಆಗುತ್ತದೆ. 9 ಕೋಟಿಗೂ ಅಧಿಕ ರೈತರು ನೊಂದಾಯಿಸಿಕೊಂಡು ಫಲಾನುಭವಿಗಳಾಗಿದ್ದಾರೆ. ಈವರೆಗೆ 19 ಕಂತುಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ