ನವದೆಹಲಿ, ಜನವರಿ 30: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಸರಿಯಾಗಿ ಐದು ವರ್ಷ ಆಯಿತು. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನ ಮಧ್ಯಂತರ ಬಜೆಟ್ನಲ್ಲಿ (2019 Interim Budget) ಈ ಸ್ಕೀಮ್ ಚಾಲನೆಗೊಂಡಿತು. ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರಿಗೆ ಸರ್ಕಾರ ಒದಗಿಸುತ್ತದೆ. ಈವರೆಗೆ 15 ಕಂತುಗಳನ್ನು ರೈತರಿಗೆ ನೀಡಲಾಗಿದೆ. 16ನೇ ಕಂತಿನ ಹಣ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ. ಆದರೆ, ಜನವರಿ 31ರೊಳಗೆ ನೀವು ಕೆವೈಸಿ ಅಪ್ಡೇಟ್ ಮಾಡದಿದ್ದರೆ ಹಣ ಸಿಗುವುದಿಲ್ಲ.
ಆದರೆ, ಬೇರೆಲ್ಲಾ ಯೋಜನೆಗಳಂತೆ ಪಿಎಂ ಕಿಸಾನ್ ಸ್ಕೀಮ್ನಲ್ಲೂ ಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯ. ಕಳೆದ ಕೆಲ ತಿಂಗಳುಗಳಿಂದಲೂ ಸರ್ಕಾರ ಎಲ್ಲಾ ಫಲಾನುಭವಿಗಳಿಗೂ ಕೆವೈಸಿ ಸಲ್ಲಿಸುವಂತೆ ನಿರ್ದೇಶನ ನೀಡುತ್ತಿದೆ. ಅಂದಾಜು 10 ಕೋಟಿ ಅರ್ಹ ಫಲಾನುಭವಿಗಳ ಪೈಕಿ ಒಂದು ಕೋಟಿಯಷ್ಟು ಮಂದಿ ಕೆವೈಸಿ ಪರಿಷ್ಕರಿಸಿಲ್ಲ ಎನ್ನಲಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಳಲ್ಲಿ ಕೆವೈಸಿ ಅಪ್ಡೇಟ್ ಮಾಡಬಹುದು. ಇಕೆವೈಸಿ ಮಾಡದಿದ್ದರೆ 16ನೇ ಕಂತಿನ ಹಣವಾದ 2,000 ರೂ ನಿಮ್ಮ ಖಾತೆಗೆ ಬರುವುದಿಲ್ಲ.
ಇದನ್ನೂ ಓದಿ: 2019 Budget: 2019ರ ಮಧ್ಯಂತರ ಬಜೆಟ್ನ ಎರಡು ಹಿಟ್ ಸ್ಕೀಮ್ಸ್; ಈ ಬಾರಿಯೂ ಬರುತ್ತಾ ಹೊಸ ಗೇಮ್ ಚೇಂಜರ್?
ಡಿಸೆಂಬರ್ನಿಂದ ಮಾರ್ಚ್ವರೆಗಿನ ನಾಲ್ಕು ತಿಂಗಳ ಅವಧಿಗೆ ನೀಡಲಾಗುವ 2,000 ರೂ ಹಣ ನಿಮ್ಮ ಖಾತೆಗೆ ಸಿಗಬೇಕೆಂದರೆ ಇಕೆವೈಸಿ ಪೂರ್ಣಗೊಂಡಿರಬೇಕು. ಅದನ್ನು ಇನ್ನೂ ಮಾಡದೇ ಇದ್ದವರು ಜನವರಿ 31ರೊಳಗೆ ಪೂರ್ಣಗೊಳಿಸಬೇಕು.
2023ರಲ್ಲಿ ಇದೇ ಅವಧಿಯ ಕಂತಿನ ಹಣ ಮಾರ್ಚ್ 27ರಂದು ಬಿಡುಗಡೆ ಆಗಿತ್ತು. ಆದರೆ, ಈ ವರ್ಷ ಅದೇ ದಿನ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಫೆಬ್ರುವರಿಯಲ್ಲಿ ಬೇಕಾದರೂ ಹಣ ಬಿಡುಗಡೆ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ