ನವದೆಹಲಿ, ಜುಲೈ 20: ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ರೂಪಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi Yojana) 14ನೇ ಕಂತಿನ ಹಣ ಬಿಡುಗಡೆಗೆ ಎರಡು ತಿಂಗಳಿಂದಲೂ ಫಲಾನುಭವಿಗಳು ನಿರೀಕ್ಷಿಸುತ್ತಿದ್ದಾರೆ. ಇದೀಗ ಹಣ ಬಿಡುಗಡೆಯ ದಿನಾಂಕ ಬಹಿರಂಗವಾಗಿದೆ. ನ್ಯೂಸ್18ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ 2023ರ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 14ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಮುಂದಿನ ಗುರುವಾರ 8.5 ಕೋಟಿ ರೈತರ ಖಾತೆಗಳಿಗೆ 2,000 ರೂ ಜಮೆ ಆಗಲಿದೆ.
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಫೆಬ್ರುವರಿ 27ರಂದು ಬಿಡುಗಡೆ ಆಗಿತ್ತು. ಬೆಳಗಾವಿಯ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಣ ಬಿಡುಗಡೆಯನ್ನು ಘೋಷಿಸಿದ್ದರು. ಈಗ 14ನೇ ಕಂತಿನ ಹಣ ಬಿಡುಗಡೆಯನ್ನು ಪ್ರಧಾನಿಗಳು ರಾಜಸ್ಥಾನದ ಸಿಕರ್ನಲ್ಲಿ ಪ್ರಕಟಿಸಲಿದ್ದಾರೆ. ಜುಲೈ 27ರಂದು ಅವರು ರೈತರೊಂದಿಗೆ ಸಂವಾದ ನಡೆಸುವ ನಿರೀಕ್ಷೆ ಇದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೊಂದಣಿ ಮಾಡಿಸಿದ್ದರೆ ಸಾಲದು, ಇಕೆವೈಸಿ ಅಪ್ಡೇಟ್ ಆಗಿರಬೇಕು. ಇಕೆವೈಸಿ ಮಾಡದಿದ್ದವರಿಗೆ 13ನೇ ಕಂತಿನ ಹಣ ಸಿಕ್ಕಿರಲಿಲ್ಲ. ಈ ಬಾರಿಯೂ ಅದೇ ಪರಿಸ್ಥಿತಿ ಬರುತ್ತದೆ.
ಇದನ್ನೂ ಓದಿ: PM Kisan Update: ಪಿಎಂ ಕಿಸಾನ್ ಅಪ್ಡೇಟ್; 14ನೇ ಕಂತು ಬಿಡುಗಡೆಗೆ ಮುನ್ನ ಈ 3 ಸಂಗತಿ ಖಚಿತಪಡಿಸಿಕೊಳ್ಳಿ
ವರದಿಯ ಪ್ರಕಾರ 14ನೇ ಕಂತಿನ ಹಣ ಸಿಗಬೇಕಾದರೆ ಫಲಾನುಭವಿಗಳ ಖಾತೆಗಳಿಗೆ ಜೂನ್ 15ರೊಳಗೆ ಇಕೆವೈಸಿ ಅಪ್ಡೇಟ್ ಆಗಿರಬೇಕು. ಹರ್ಯಾಣ ಸರ್ಕಾರ ಜೂನ್ 9ರಂದು ಮಾಡಿದ ಟ್ವೀಟ್ನಲ್ಲಿ, ಜೂನ್ 15ರೊಳಗೆ ಇಕೆವೈಸಿ ಮಾಡುವಂತೆ ಯೋಜನೆಯ ಫಲಾನುಭವಿಗಳಿಗೆ ಮನವಿ ಮಾಡಿತ್ತು.
ಇದನ್ನೂ ಓದಿ: Post Office Schemes: ಪೋಸ್ಟ್ ಆಫೀಸ್ ಸ್ಕೀಮ್ಗಳ ಬಗ್ಗೆ ಕುತೂಹಲವಾ? ಇಲ್ಲಿದೆ ವಿವಿಧ ಯೋಜನೆಗಳು, ಬಡ್ಡಿ ದರಗಳ ವಿವರ
ಇಲ್ಲಿ ಆ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಗಮನಿಸಿ. ಅದರಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಇಕೆವೈಸಿ ಆಗದೇ ಇದ್ದಿರಬಹುದು, ಅಥವಾ ನೀವಿನ್ನೂ ನೊಂದಣಿ ಮಾಡಿಸದೇ ಇರಬಹುದು.
ಇದೇ ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಇಕೆವೈಸಿ ಮಾಡಲು ಅವಕಾಶ ಸದಾ ಇರುತ್ತದೆ. ಹಾಗೆಯೇ, ಹೊಸದಾಗಿ ನೊಂದಣಿ ಮಾಡಿಸಬೇಕೆಂದರೆ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಅಗತ್ಯ ವಿವರ ತುಂಬಿ ಸಲ್ಲಿಸಿದರೆ ಯೋಜನೆಗೆ ನೀವು ನೊಂದಾಯಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ