2022- 23ನೇ ಸಾಲಿನ (ಮುಂದಿನ ವರ್ಷದ) ಬಜೆಟ್‌ಗೆ ಸಿದ್ಧತೆ ಚುರುಕುಗೊಳ್ಳುತ್ತಿದ್ದಂತೆ ಭಾರತವನ್ನು ಹೆಚ್ಚು ಆಕರ್ಷಕ ಹೂಡಿಕೆಯ ತಾಣವನ್ನಾಗಿ ಮಾಡುವ ಕುರಿತು ಸಲಹೆಗಳನ್ನು ಪಡೆಯಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ (ಡಿಸೆಂಬರ್ 17) ಪ್ರಮುಖ ಖಾಸಗಿ ಷೇರು/ಜಂಟಿ ಬಂಡವಾಳ ಹೂಡಿಕೆದಾರರನ್ನು ಭೇಟಿ ಮಾಡಿದರು. ಭಾರತದಲ್ಲಿ ವ್ಯಾಪಾರವನ್ನು ಇನ್ನಷ್ಟು ಸುಲಭಗೊಳಿಸಲು, ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲು ಮತ್ತು ಸುಧಾರಣಾ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸಲು ಸಲಹೆಗಳನ್ನು ಕೇಳುವ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮುಂದಿನ ಬಜೆಟ್‌ಗೆ ಮುಂಚಿತವಾಗಿ ಸಲಹೆಗಳನ್ನು ಸಂಗ್ರಹಿಸಲು ಉದ್ಯಮದ ಪ್ರಮುಖರೊಂದಿಗೆ ಪ್ರಧಾನಿ ಹೇಗೆ ವೈಯಕ್ತಿಕವಾಗಿ ಸಂವಹನ ನಡೆಸುತ್ತಿದ್ದಾರೆ ಎಂಬುದನ್ನು ಸಭೆಯು ವಿವರಿಸುತ್ತದೆ ಎಂದು ಹೇಳಲಾಗಿದೆ.
ಏಪ್ರಿಲ್ 1, 2022ರಂದು ಪ್ರಾರಂಭವಾಗುವ ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ 6 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಆಸ್ತಿಯನ್ನು ನಿರ್ವಹಿಸುವ 20 ದೊಡ್ಡ ಜಾಗತಿಕ ಹೂಡಿಕೆದಾರರನ್ನು ಮೋದಿ ಭೇಟಿ ಮಾಡಿದ್ದರು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ, ಬಿಜೆಪಿ ಸರ್ಕಾರವು ಸುಧಾರಣೆ ಸರಣಿಗಳನ್ನು ಅನಾವರಣಗೊಳಿಸಿದ್ದು, ಅದು ಭಾರತವು ವ್ಯಾಪಾರ ಮಾಡುವ ಸುಲಭ ತಾಣವಾಗುವ ಶ್ರೇಯಾಂಕದಲ್ಲಿ ಏರಲು ಸಹಾಯ ಮಾಡಿದೆ.
ಅದು ಈಗ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಉತ್ತೇಜಿಸುತ್ತಿದೆ. ದೇಶದಲ್ಲಿ ನೆಲೆಯನ್ನು ಸ್ಥಾಪಿಸಲು ಜಾಗತಿಕ ತಯಾರಕರನ್ನು ಆಕರ್ಷಿಸಲು ಆಟೋಮೊಬೈಲ್‌ಗಳಿಂದ ಸೆಮಿಕಂಡಕ್ಟರ್‌ಗಳು ಮತ್ತು ಸೋಲಾರ್ವರೆಗಿನ ವಲಯಗಳಿಗೆ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಲಾಗಿದೆ.
ಇದನ್ನೂ ಓದಿ: Union Budget 2022: ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಬಜೆಟ್ ಸಲಹೆಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ