Narendra Modi: ಗುಜರಾತ್ ಗ್ಲೋಬಲ್ ಟ್ರೇಡ್ ಶೋಗೆ ಇಂದು ಮೋದಿ ಚಾಲನೆ; ಇದು ಭಾರತದ ಅತಿದೊಡ್ಡ ವ್ಯಾಪಾರ ಪ್ರದರ್ಶನ

|

Updated on: Jan 09, 2024 | 11:49 AM

Vibran Gujarat Global Trade Show: ಗುಜರಾತ್​ನ ರಾಜಧಾನಿ ಗಾಂಧಿನಗರದಲ್ಲಿ ಜನವರಿ 9ರಂದು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋಗೆ ಪ್ರಧಾನಿ ಚಾಲನೆ ನೀಡುತ್ತಿದ್ದಾರೆ. 33 ಪಾರ್ಟ್ನರ್ ದೇಶಗಳು, 100 ಅತಿಥಿ ದೇಶಗಳ ಪ್ರತಿನಿಧಿಗಳು ಈ ಶೋನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಎಕ್ಸಿಬಿಟರ್​ಗಳು ಬರಲಿದ್ದಾರೆ. ಜನವರಿ 10ರಂದು ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ ಕೂಡ ನಡೆಯಲಿದೆ. ಆ ಕಾರ್ಯಕ್ರಮಕ್ಕೂ ಮೋದಿಯೇ ಚಾಲನೆ ಕೊಡುತ್ತಿದ್ದಾರೆ.

Narendra Modi: ಗುಜರಾತ್ ಗ್ಲೋಬಲ್ ಟ್ರೇಡ್ ಶೋಗೆ ಇಂದು ಮೋದಿ ಚಾಲನೆ; ಇದು ಭಾರತದ ಅತಿದೊಡ್ಡ ವ್ಯಾಪಾರ ಪ್ರದರ್ಶನ
ನರೇಂದ್ರ ಮೋದಿ
Follow us on

ಗಾಂಧಿನಗರ್, ಜನವರಿ 9: ಗುಜರಾತ್​ನ ಗಾಂಧಿನಗರದಲ್ಲಿ ಇಂದು (ಜ. 9) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಅತಿದೊಡ್ಡ ಗ್ಲೋಬಲ್ ಟ್ರೇಡ್ ಶೋ (Vibrant Gujarat Global Trade Show) ಉದ್ಘಾಟನೆ ಮಾಡಲಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮಕ್ಕೆ ಒಂದು ದಿನ ಮುನ್ನ ಈ ಟ್ರೇಡ್ ಶೋ ನಡೆಯುತ್ತಿದೆ. ಟೈಮರ್ ಲೆಸ್ಟೆ (Timor Leste), ಮೊಜಾಂಬಿಕ್ (Mozambique) ದೇಶಗಳ ಅಧ್ಯಕ್ಷರೂ ಒಳಗೊಂಡಂತೆ ಜಾಗತಿಕ ನಾಯಕರ ಜೊತೆ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ದ್ವಿಪಕ್ಷೀಯ ಮಾತುಕತೆಗಳನ್ನು (bilateral meeting) ನಡೆಸಲಿದ್ದಾರೆ. ವೇಳಾಪಟ್ಟಿ ಪ್ರಕಾರ, ದ್ವಿಪಕ್ಷೀಯ ಭೇಟಿಗಳ ಬಳಿಕ ಪ್ರಧಾನಿಗಳು ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳ ಸಿಇಒಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇಂದು ಮಂಗಳವಾರ ಸಂಜೆ ಇಲ್ಲಿನ ಏರ್​ಪೋರ್ಟ್​ನಿಂದ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಾಹ್ಯನ್ ಅವರ ಜೊತೆ ನರೇಂದ್ರ ಮೋದಿ ರೋಡ್​ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಬುಧವಾರ ಬೆಳಗ್ಗೆ (ಜ. 10) ಅವರು ಗಾಂಧಿನಗರದ ಮಹಾತ್ಮ ಮಂದಿರ್​ನ್ಲಲಿ 10ನೇ ಆವೃತ್ತಿಯ ವೈಬ್ರಂಟ್ ಗುಜರಾತ್ ಜಾಗತಿಕ ಶೃಂಗಸಭೆಯನ್ನು (Vibrant Gujarat global summit) ಉದ್ಘಾಟನೆ ಮಾಡಲಿದ್ದಾರೆ.

ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?

ಗ್ಲೋಬಲ್ ಟ್ರೇಡ್ ಶೋನಲ್ಲಿ 100ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಇಂದು ನಡೆಯಲಿರುವ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ ಎರಡು ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ಆಯೋಜಿಸಲಾಗುತ್ತಿದೆ. 13 ಬೃಹತ್ ಸಭಾಂಗಣಗಳು ಸಜ್ಜಾಗಿವೆ. ಭಾರತದಲ್ಲಿ ಇದೂವರೆಗೂ ಇಷ್ಟು ದೊಡ್ಡ ಮಟ್ಟದಲ್ಲಿ ಟ್ರೇಡ್ ಶೋ ನಡೆಯುತ್ತಿರುವುದು ಇದೇ ಮೊದಲು.

ಒಟ್ಟು 100 ವಿಸಿಟಿಂಗ್ ದೇಶಗಳು ಮತ್ತು 33 ಪಾರ್ಟ್ನರ್ ದೇಶಗಳು ಈ ಟ್ರೇಡ್ ಶೋನಲ್ಲಿ ಭಾಗಿಯಾಗುತ್ತಿವೆ. ಆಸ್ಟ್ರೇಲಿಯಾ, ಸೌತ್ ಕೊರಿಯಾ, ಸಿಂಗಾಪುರ್, ಯುಎಇ, ಯುಕೆ, ಜರ್ಮನಿ, ನಾರ್ವೆ ಒಳಗೊಂಡಂತೆ 20 ದೇಶಗಳ ರಿಸರ್ಚ್ ಸೆಕ್ಟರ್ ಅನ್ನು ಪ್ರತಿನಿಧಿಸುವ 1,000ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಭಾರತದ 450 ಎಂಎಸ್​ಎಂಇ ಘಟಕಗಳು ಕೂಡ ಉಪಸ್ಥಿತಿ ತೋರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ