Muft Bijili Yojana: ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಷ್ಟು ವೆಚ್ಚ? ಇಲ್ಲಿದೆ ಡೀಟೇಲ್ಸ್

|

Updated on: Feb 14, 2024 | 11:01 AM

Steps to apply for PM Surya Ghar Yojana: ಮುನ್ನೂರು ಯೂನಿಟ್​ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಪಿಎಂ ಸೂರ್ಯ ಘರ್ ಯೋಜನೆಗೆ ಸರ್ಕಾರ ಚಾಲನೆ ಕೊಟ್ಟಿದೆ. ನಿವಾಸಿಗಳು ತಮ್ಮ ಮನೆಯ ಮೆಲ್ಛಾವಣಿಯ ಮೇಲೆ ಸರ್ಕಾರದ ಸಬ್ಸಿಡಿ ಸಹಾಯದಿಂದ ಸೌರ ಘಟಕ ಸ್ಥಾಪಿಸಬಹುದಾದ ಯೋಜನೆ ಇದು. ಪಿಎಂ ಸೂರ್ಯ ಘರ್​ನ ಅಧಿಕೃತ ಪೋರ್ಟಲ್​ಗೆ ಹೋಗಿ ಈ ಯೋಜನೆಗೆ ನೊಂದಾಯಿಸಿಕೊಂಡು ಅರ್ಜಿ ಸಲ್ಲಿಸಬಹುದು.

Muft Bijili Yojana: ಕೇಂದ್ರದ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಎಷ್ಟು ವೆಚ್ಚ? ಇಲ್ಲಿದೆ ಡೀಟೇಲ್ಸ್
ಸೌರ ಘಟಕ
Follow us on

ನವದೆಹಲಿ, ಫೆಬ್ರುವರಿ 14: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮಂಗಳವಾರ (ಫೆ. 13) ‘ಪಿಎಂ ಸೂರ್ಯ ಘರ್’ (PM Surya Ghar) ಎಂಬ ಉಚಿತ ವಿದ್ಯುತ್ ಯೋಜನೆ (Muft Bijili Yojana- free electricity scheme) ಚಾಲನೆಗೊಂಡಿರುವುದನ್ನು ಘೋಷಿಸಿದರು. ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲೇ ಈ ಯೋಜನೆಯನ್ನು ಪ್ರಕಟಿಸಿದ್ದರು. ಕಳೆದ ತಿಂಗಳು (ಜನವರಿ) ಪ್ರಧಾನಿ ಮೋದಿ ಅವರು ಪಿಎಂ ಸೂರ್ಯೋದಯ ಯೋಜನೆಯನ್ನು ಅನಾವರಣಗೊಳಿಸಿದರು. ಮನೆಗಳ ಮೇಲ್ಛಾವಣಿಯಲ್ಲಿ ಸೌರಫಲಕಗಳನ್ನು (rooftop solar unit) ಅಳವಡಿಸುವ ದೊಡ್ಡ ಯೋಜನೆ ಅದು. ಅದರ ಭಾಗವಾಗಿ ಪಿಎಂ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ ಚಾಲನೆಗೆ ತರಲಾಗಿದೆ. ಒಂದು ಮನೆಗೆ ಪ್ರತೀ ತಿಂಗಳು 300 ಯೂನಿಟ್​ಗಳಷ್ಟು ಉಚಿತ ವಿದ್ಯುತ್ ಒದಗಿಸುವ ಒಂದು ಯೋಜನೆ ಇದು. ಈ ರೀತಿ ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಈ ಯೋಜನೆ ತಲುಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ.

ಆರಂಭದಲ್ಲಿ ಒಂದು ವಿಷಯ ಸ್ಪಷ್ಟಪಡಿಸಬೇಕಿದೆ. 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರೂ ಇದು ಉಚಿತವಲ್ಲ. ಮನೆ ಛಾವಣಿ ಮೇಲೆ ಸೌರ ಯೂನಿಟ್​ಗಳನ್ನು ಸ್ಥಾಪಿಸಲು ಹಣ ವ್ಯಯಿಸಬೇಕು. ಆದರೆ, ಇದಕ್ಕೆ ಸರ್ಕಾರ ಸಬ್ಸಿಡಿ ಕೊಡುತ್ತದೆ. ಬಜೆಟ್​ನಲ್ಲಿ ಈ ಯೋಜನೆಗೆ 75,000 ಕೋಟಿ ರೂ ಹಣವನ್ನು ಸರ್ಕಾರ ತೆಗೆದಿರಿಸಿದೆ. ಬ್ಯಾಂಕ್​ನಿಂದಲೂ ಕಡಿಮೆ ಬಡ್ಡಿದರದಲ್ಲಿ ಸಾಲದ ವ್ಯವಸ್ಥೆ ಸಿಗುತ್ತದೆ. ಹೀಗಾಗಿ, ಈ ಯೋಜನೆ ಪಡೆಯುವವರಿಗೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಇವರು ಮಾಡುವ ವೆಚ್ಚ ಒಂದರಿಂದ ಎರಡು ವರ್ಷದಲ್ಲಿ ಸರಿದೂಗುತ್ತದೆ.

ಇದನ್ನೂ ಓದಿ: ರೈತರ ಆದಾಯ ಹೆಚ್ಚಿಸಲು ಸರ್ಕಾರ ಕೈಗೊಂಡ 9 ಯೋಜನೆಗಳಿವು…

ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮ

  • ಪಿಎಂ ಸೂರ್ಯ ಘರ್ ಯೋಜನೆಗೆಂದು ಪೋರ್ಟಲ್ ಸಿದ್ಧಪಡಿಸಲಾಗಿದೆ. ಅಲ್ಲಿ ನೊಂದಾಯಿಸಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ: pmsuryaghar.gov.in
  • ಇಲ್ಲಿ ನಿಮ್ಮ ರಾಜ್ಯ, ಡಿಸ್ಕಾಂ ಕಂಪನಿ ಆಯ್ಕೆ ಮಾಡಿ
  • ಎಲೆಟ್ರಿಕ್ ಬಿಲ್​ನ ಕನ್ಸೂಮರ್ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ನಮೂದಿಸಿ ನೊಂದಾಯಿಸಿಕೊಳ್ಳಿ.
  • ಈಗ ಕನ್ಸೂಮರ್ ನಂಬರ್ ಮತ್ತು ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿರಿ.
  • ಲಾಗಿನ್ ಆದ ಬಳಿಕ ರೂಫ್​ಟಾಪ್ ಸೋಲಾರ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬೇಕು.

ಇದಕ್ಕೆ ಅನುಮೋದನೆ ಸಿಗುವವರೆಗೂ ಕಾಯಬೇಕು. ಅನುಮೋದನೆ ದೊರೆತ ಬಳಿಕ ನೊಂದಾಯಿತ ಮಾರಾಟಗಾರರು ನಿಮ್ಮ ಮನೆಗೆ ಬಂದು ಸೌರ ಘಟಕವನ್ನು ಸ್ಥಾಪಿಸುತ್ತಾರೆ.

ಇದಾದ ಬಳಿಕ ನೆಟ್ ಮೀಟರ್​ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್​ಟಾಲ್ ಆಗಿ ಡಿಸ್ಕಾಂ ಅಧಿಕಾರಿಗಳಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಸಿಗುತ್ತದೆ.

ಇದನ್ನೂ ಓದಿ: ಇಲಿ ಹಿಡಿಯಲು ಗುಡ್ಡ ಕಡಿದಂತಾಯ್ತು..! ಒಂದೇ ಒಂದು ಅಕೌಂಟ್ ಮುಚ್ಚಲು ಲಕ್ಷಾಂತರ ಕೋಟಿ ರೂ ವೆಚ್ಚ ಮಾಡಿದ ಇಲಾನ್ ಮಸ್ಕ್

ಬಳಿಕ ಪಿಎಂ ಸೂರ್ಯಘರ್ ಪೋರ್ಟಲ್​ಗೆ ಹೋಗಿ ಮತ್ತೆ ಲಾಗಿನ್ ಆಗಿ, ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಕ್ಯಾನ್ಸಲ್ ಮಾಡಿದ ಚೆಕ್​ನ ಸ್ಕ್ಯಾನ್ಡ್ ಕಾಪಿಯನ್ನು ಅಪ್​ಲೋಡ್ ಮಾಡಿ. ಇದು ಕೊನೆಯ ಪ್ರಕ್ರಿಯೆ. ಇದು ಮುಗಿದ ಬಳಿಕ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದು ಸೇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ