Joint Account: ವ್ಯಾಲಂಟೈನ್ಸ್ ಡೇ; ನಿಮ್ಮ ಸಂಗಾತಿ ಜೊತೆ ಜಂಟಿ ಉಳಿತಾಯ ಖಾತೆ ತೆರೆಯಬಹುದಾ ಯೋಜಿಸಿ; ಏನಿದರ ಲಾಭ, ತಿಳಿದಿರಿ

|

Updated on: Feb 14, 2024 | 12:45 PM

Valentine's Day Special, Joint Savings Account: ಫೆಬ್ರುವರಿ 14ರಂದು ವ್ಯಾಲಂಟೈನ್ಸ್ ಡೇ ನಿಮಿತ್ತ, ನಿಮ್ಮ ಸಂಗಾತಿ ಜೊತೆ ಆರಂಭಿಸಬಹುದಾದ ಹಣಕಾಸು ಹೆಜ್ಜೆ ಎಂದರೆ ಜಾಯಿಂಟ್ ಅಕೌಂಟ್. ಇಬ್ಬರೂ ಸೇರಿ ಉಳಿಸಿದ ಹಣವನ್ನು ಈ ಜಂಟಿ ಉಳಿತಾಯ ಖಾತೆಯಲ್ಲಿ ಠೇವಣಿ ಇಟ್ಟರೆ ಅದು ಇಬ್ಬರ ಭವಿಷ್ಯಕ್ಕೂ ಆಧಾರವಾಗಿರುತ್ತದೆ. ಜಂಟಿ ಖಾತೆಗಳಿಗೆ ಕೆಲ ಬ್ಯಾಂಕುಗಳು ಹೆಚ್ಚು ಬಡ್ಡಿ ಇತ್ಯಾದಿ ಹೆಚ್ಚುವರಿ ಸೌಲಭ್ಯಗಳನ್ನು ನೀಡುತ್ತವೆ.

Joint Account: ವ್ಯಾಲಂಟೈನ್ಸ್ ಡೇ; ನಿಮ್ಮ ಸಂಗಾತಿ ಜೊತೆ ಜಂಟಿ ಉಳಿತಾಯ ಖಾತೆ ತೆರೆಯಬಹುದಾ ಯೋಜಿಸಿ; ಏನಿದರ ಲಾಭ, ತಿಳಿದಿರಿ
ಜಂಟಿ ಉಳಿತಾಯ
Follow us on

ಇವತ್ತು ಫೆಬ್ರುವರಿ 14, ವ್ಯಾಲಂಟೈನ್ಸ್ ಡೇ. ನಿಮ್ಮ ಬಾಳ ಸಂಗಾತಿಗೆ ಪ್ರೀತಿಯ ಗಿಫ್ಟ್ ಜೊತೆಗೆ ಉತ್ತಮ ಆರ್ಥಿಕ ಭವಿಷ್ಯಕ್ಕಾಗಿ ಪ್ಲಾನಿಂಗ್ ಮಾಡಿ, ಇಂದೇ ಹೆಜ್ಜೆ ಇಡಿ. ನೀವು ಮತ್ತು ನಿಮ್ಮ ಸಂಗಾತಿ ಸೇರಿ ಒಂದು ಜಾಯಿಂಟ್ ಅಕೌಂಟ್ (Joint savings account) ತೆರೆದು, ಅದರಲ್ಲಿ ಉಳಿತಾಯ ಹಣ ಕೂಡಿಡುವ ಮತ್ತು ಠೇವಣಿ ಇಡುವ ಕೆಲಸ ಮಾಡಿ. ಇವತ್ತು ಯಾವುದೇ ಬ್ಯಾಂಕ್​ನಲ್ಲೂ ಜಂಟಿ ಉಳಿತಾಯ ಖಾತೆ ತೆರೆಯಬಹುದು. ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳು ಸೇರಿ ಜಾಯಿಂಟ್ ಅಕೌಂಟ್ ತೆರೆಯುತ್ತಾರೆ. ಆದರೆ, ಎಷ್ಟು ಮಂದಿ ಬೇಕಾದರೂ ಒಂದು ಅಕೌಂಟ್ ಹಂಚಿಕೊಳ್ಳಲು ಅವಕಾಶ ಇದೆ. ಕೆಲ ಬ್ಯಾಂಕುಗಳು ಜಾಯಿಂಟ್ ಅಕೌಂಟ್​ಗೆ ನಾಲ್ಕು ಮಂದಿಗೆ ಮಾತ್ರ ಸೀಮಿತಗೊಳಿಸುತ್ತವೆ. ಅದೇನೇ ಇರಲಿ, ನೀವು ಮತ್ತು ನಿಮ್ಮ ಸಂಗಾತಿ ಹಾಗೂ ಸಾಧ್ಯವಾದರೆ ಕುಟುಂಬದ ಇತರ ಸದಸ್ಯರೆಲ್ಲರದ್ದೂ ಸೇರಿಸಿ ಜಾಯಿಂಟ್ ಅಕೌಂಟ್ ಆರಂಭಿಸಬಹುದು.

ಜಂಟಿ ಉಳಿತಾಯ ಖಾತೆಯ ಪ್ರಯೋಜನಗಳಿವು

  • ಜಂಟಿ ಖಾತೆಯಲ್ಲಿರುವ ಸದಸ್ಯರು ಒಟ್ಟಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಬಹುದು. ಇದರಿಂದ ಖಾತೆಯಲ್ಲಿನ ವಹಿವಾಟು ಸಂಪೂರ್ಣ ಪಾರದರ್ಶಕವಾಗಿರುತ್ತದೆ.
  • ಜಂಟಿ ಖಾತೆಯನ್ನು ಇಬ್ಬರೂ ನಿರ್ವಹಿಸಬಹುದು. ಒಬ್ಬ ಅನುಪಸ್ಥಿತಿಯಲ್ಲಿ ಇನ್ನೊಬ್ಬರು ನಿರ್ವಹಿಸಬಹುದು.
  • ಜಂಟಿ ಖಾತೆಗಳಲ್ಲಿನ ಠೇವಣಿಗೆ ಸಾಮಾನ್ಯವಾಗಿ ಹೆಚ್ಚು ಬಡ್ಡಿ ಸಿಗುತ್ತದೆ. ಹೀಗಾಗಿ, ಹಣ ಉಳಿತಾಯಕ್ಕೆ ಉತ್ಸಾಹ ಬರುತ್ತದೆ.
  • ಇಬ್ಬರು ವ್ಯಕ್ತಿಗಳ ಮಧ್ಯೆ ಹಣ ವರ್ಗಾವಣೆ ಸುಗಮಗೊಳ್ಳುತ್ತದೆ.
  • ಜಂಟಿ ಖಾತೆ ಹೊಂದಿರುವ ಇಬ್ಬರಿಗೂ ಪ್ರತ್ಯೇಕವಾಗಿ ಡೆಬಿಟ್ ಕಾರ್ಡ್, ಚೆಕ್ ಬುಕ್ ನೀಡಲಾಗುತ್ತದೆ. ಇನ್ನೂ ಕೆಲ ಅನುಕೂಲಗಳನ್ನು ಬ್ಯಾಂಕುಗಳು ಜಾಯಿಂಟ್ ಅಕೌಂಟ್ ಹೋಲ್ಡರ್ಸ್​ಗೆ ನೀಡುತ್ತವೆ.
  • ಜಂಟಿಯಾಗಿ ಹೂಡಿಕೆ ಮಾಡುವುದೂ ಸೇರಿದಂತೆ ವಿವಿಧ ಹಣಕಾಸು ಚಟುವಟಿಕೆಗಳಿಗೆ ಜಂಟಿ ಖಾತೆಗಳನ್ನು ಉಪಯೋಗಿಸಬಹುದು.
  • ನಿಮ್ಮ ಮತ್ತು ನಿಮ್ಮ ಕುಟುಂಬದ ಹಣಕಾಸು ಚಟುವಟಿಕೆಗಳನ್ನು ಒಂದೇ ಖಾತೆ ಅಡಿ ನಿರ್ವಹಿಸಲು ಜಂಟಿ ಖಾತೆ ಒಂದು ಸರಳ ವಿಧಾನವಾಗಿದೆ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಪ್ರೀತಿಯಿಂದ ನೀಡಬಹುದಾದ ಹಣಕಾಸು ಗಿಫ್ಟ್​ಗಳು

ಕೊನೆಯದಾಗಿ, ಜಂಟಿ ಖಾತೆ ಹೊಂದಿರುವುದರಿಂದ ದೊಡ್ಡ ಪ್ರಯೋಜನ ಎಂದರೆ ಕೌಟುಂಬಿಕ ಜವಾಬ್ದಾರಿ ಹುಟ್ಟುವುದು. ಕುಟುಂಬ ಸದಸ್ಯರಲ್ಲಿ ಪ್ರತ್ಯೇಕತೆಯ ಭಾವನೆ ಬದಲು ಸಾಂಘಿಕ ಮನೋಭಾವ ಬೆಳೆಯುತ್ತದೆ. ಹಣ ಉಳಿತಾಯಕ್ಕೆ ಇಬ್ಬರೂ ತಮ್ಮ ಕೈಲಾದಷ್ಟು ಕೊಡುಗೆಯನ್ನು ಈ ಖಾತೆಗೆ ನೀಡಬಹುದು. ಇದರಿಂದ ಉಳಿತಾಯ ಹೆಚ್ಚುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ