ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ

|

Updated on: Dec 03, 2024 | 6:39 PM

PMGSY Scheme in Jammu and Kashmir: ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ದಶಕಗಳಲ್ಲಿ 3,500 ಸಮೀಪದಷ್ಟು ಪ್ರಾಜೆಕ್ಟ್​ಗಳು ಪೂರ್ಣಗೊಂಡಿವೆ. 2001ರಲ್ಲಿ ಆರಂಭವಾದ ಈ ಯೋಜನೆಯ ಅಡಿಯಲ್ಲಿ 3,742 ಪ್ರಾಜೆಕ್ಟ್​ಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ಪೈಕಿ 3,429 ಪ್ರಾಜೆಕ್ಟ್​ಗಳು ಪೂರ್ಣಗೊಂಡಿವೆ. ಇವುಗಳಿಗೆ ಒಟ್ಟಾರೆ ವೆಚ್ಚ 12,000 ಕೋಟಿ ರೂಗಿಂತ ತುಸು ಹೆಚ್ಚಿದೆ.

ಪಿಎಂ ಗ್ರಾಮ್ ಸಡಕ್ ಸ್ಕೀಮ್ ಅಡಿ ಜಮ್ಮು ಕಾಶ್ಮೀರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಯೋಜನೆಗಳು ಪೂರ್ಣ
ರಸ್ತೆ ನಿರ್ಮಾಣ
Follow us on

ನವದೆಹಲಿ, ಡಿಸೆಂಬರ್ 3: ಗ್ರಾಮೀಣ ಭಾಗಗಳಿಗೆ ಸಂಪರ್ಕತೆ ಕಲ್ಪಿಸುವ ಯೋಜನೆಗಳಿಗೆ ಒತ್ತು ಕೊಡುವ ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ (ಪಿಎಂಜಿಎಸ್​ವೈ) ಅಡಿಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅದ್ವಿತೀಯ ಕಾರ್ಯಗಳು ನಡೆದಿವೆ. ಈ ಸ್ಕೀಮ್ ಬಳಸಿಕೊಂಡು ಕಳೆದ ಎರಡು ದಶಕಗಳಲ್ಲಿ ಕಣಿವೆ ರಾಜ್ಯದಲ್ಲಿ 3,500 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಮಿತ್ ಶುಕ್ಲಾ ನೇತೃತ್ವದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕಳೆದ ಎರಡು ದಶಕದಲ್ಲಿ ಪೂರ್ಣಗೊಂಡಿರುವ 3,500 ಯೋಜನೆಗಳಲ್ಲಿ 217 ಸೇತುವೆಗಳೂ ಒಳಗೊಂಡಿವೆ. ಪಿಎಂಜಿಎಸ್​ವೈ ಅಡಿಯ ಯೋಜನೆಗಳನ್ನು ನಿಗದಿತ ವೇಳೆಗೆ ಪೂರ್ಣಗೊಳಿಸುವುದರ ಜೊತೆಜೊತೆಗೆ ಗುಣಮಟ್ಟದ ಕಾಮಗಾರಿಯನ್ನೂ ಕಾಯ್ದುಕೊಳ್ಳುವ ಕೆಲಸ ಎಷ್ಟು ಮುಖ್ಯ ಎಂಬುದನ್ನು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: 2024ರ ಏಪ್ರಿಲ್​ನಿಂದ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್​ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

2001-02ರ ವರ್ಷದಲ್ಲಿ ಪಿಎಂ ಗ್ರಾಮ್ ಸಡಕ್ ಯೋಜನೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆರಂಭಿಸಲಾಯಿತು. 250ಕ್ಕೂ ಹೆಚ್ಚು ಜನಸಂಖ್ಯೆ ಇರುವ (2001ರ ಸೆನ್ಸಸ್ ಪ್ರಕಾರ) ಗ್ರಾಮಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಮತ್ತು ಎಲ್ಲಾ ಹವಾಮಾನಗಳನ್ನೂ ತಾಳಿಕೊಳ್ಳಬಲ್ಲಂತಹ ರಸ್ತೆ ಇತ್ಯಾದಿ ಸಂಪರ್ಕವನ್ನು ಒದಗಿಸುವ ಗುರಿ ಈ ಯೋಜನೆ ಮೂಲಕ ಇಡಲಾಗಿತ್ತು.

ಈಗ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ ಪಿಎಂ ಜಿಎಸ್​ವೈ ಸ್ಕೀಮ್ ಅಡಿಯಲ್ಲಿ ಇಲ್ಲಿಯವರೆಗೆ 3,742 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 20,801 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಂಗೀಕರಿಸಲಾಗಿದೆ. ಇದರಲ್ಲಿ 305 ಸೇತುವೆಗಳೂ ಒಳಗೊಂಡಿವೆ. ಈ ಪೈಕಿ 3,429 ಯೋಜನೆಗಳು ಪೂರ್ಣಗೊಂಡಿವೆ. ಇದರಲ್ಲಿ 217 ಸೇತುವೆಗಳೂ ಸೇರಿವೆ. ಈ ಯೋಜನೆಗಳ ಒಟ್ಟಾರೆ ವೆಚ್ಚ 12,650 ಕೋಟಿ ರೂ ಎನ್ನಲಾಗಿದೆ.

ಇದನ್ನೂ ಓದಿ: ನವೆಂಬರ್​ನಲ್ಲಿ ಭಾರತದಲ್ಲಿ ಕಲ್ಲಿದ್ದಲು ಉತ್ಪಾದನೆ 90.62 ಮಿಲಿಯನ್ ಟನ್; ಶೇ. 7.2ರಷ್ಟು ಉತ್ಪಾದನೆ ಹೆಚ್ಚಳ

ಕುತೂಹಲ ಎಂದರೆ ಪಿಎಂ ಗ್ರಾಮ್ ಸಡಕ್ ಯೋಜನೆ ಜಮ್ಮು ಕಾಶ್ಮೀರದಲ್ಲಿ ಪುಷ್ಟಿ ಪಡೆದದ್ದು ಕಳೆದ ಐದು ವರ್ಷದಲ್ಲೇ. ಈ ಯೋಜನೆಯ ಕಾಮಗಾರಿಯನ್ನು ಚುರುಕಾಗಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ