PMVVY: ಪ್ರಧಾನಮಂತ್ರಿ ವಯ ವಂದನ ಯೋಜನೆ ಅಡಿ 15 ಲಕ್ಷ ಹೂಡಿಕೆ ಮಾಡಿದಲ್ಲಿ ತಿಂಗಳಿಗೆ 9,250 ರೂ. ಪೆನ್ಷನ್

|

Updated on: May 22, 2021 | 4:22 PM

ಪ್ರಧಾನಮಂತ್ರಿ ವಯ ವಂದನ ಯೋಜನಾ ಅಡಿಯಲ್ಲಿ ಗರಿಷ್ಠ ಪೆನ್ಷನ್ 9250 ರೂಪಾಯಿ ದೊರೆಯುತ್ತದೆ. ಅದಕ್ಕೆ 15 ಲಕ್ಷ ರೂಪಾಯಿಗೆ ಪಾಲಿಸಿ ಖರೀದಿಸಬೇಕು. ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

PMVVY: ಪ್ರಧಾನಮಂತ್ರಿ ವಯ ವಂದನ ಯೋಜನೆ ಅಡಿ 15 ಲಕ್ಷ ಹೂಡಿಕೆ ಮಾಡಿದಲ್ಲಿ ತಿಂಗಳಿಗೆ 9,250 ರೂ. ಪೆನ್ಷನ್
ಪ್ರಾತಿನಿಧಿಕ ಚಿತ್ರ
Follow us on

ಯಾರು 60 ವರ್ಷ ತುಂಬಿರುವವರು ಅಥವಾ ಅದಕ್ಕೆ ಮೇಲ್ಪಟ್ಟಿರುವವರು ಇರುತ್ತಾರೋ ಅಂಥವರು ಪ್ರಧಾನ ಮಂತ್ರಿ ವಯ ವಂದನ ಯೋಜನಾ (PMVVY)ಗೆ ಎಲ್​ಐಸಿ ವೆಬ್​ಸೈಟ್​ ಮೂಲಕ ಆನ್​ಲೈನ್​ನಲ್ಲಿ ಸಬ್​ಸ್ಕ್ರೈಬ್ ಆಗಬಹುದು. ಒಂದು ಸಲಕ್ಕೆ ಇಡುಗಂಟು (ಲಮ್​ಸಮ್) ಪಾವತಿಸಿ, ಖರೀದಿ ಮಾಡಿದ ಮೇಲೆ ತಕ್ಷಣದಿಂದಲೇ ಪೆನ್ಷನ್ ಬರಲು ಆರಂಭವಾಗುತ್ತದೆ. ತಿಳಿಸಲಾದ ಮೊತ್ತವನ್ನು 10 ವರ್ಷಗಳ ಅವಧಿಗೆ ನೀಡಲಾಗುತ್ತದೆ. 10 ವರ್ಷದ ಕೊನೆಗೆ ಖರೀದಿ ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. PMVVY ಅಡಿಯಲ್ಲಿ ಪ್ರತಿ ತಿಂಗಳು 9250 ರೂಪಾಯಿಯಂತೆ 10 ವರ್ಷಗಳ ಕಾಲ ಬರುತ್ತದೆ. ಇದಕ್ಕಾಗಿ 15 ಲಕ್ಷ ರೂಪಾಯಿಗೆ ಪಾಲಿಸಿ ಖರೀದಿ ಮಾಡಿರಬೇಕು. 10 ವರ್ಷಗಳ ನಂತರ ಪಾಲಿಸಿಯನ್ನು ಖರೀದಿ ಮಾಡಿರುವ ಮೊತ್ತ 15 ಲಕ್ಷ ರೂಪಾಯಿಯನ್ನು ಹಿಂತಿರುಗಿಸಲಾಗುತ್ತದೆ.

ಪೆನ್ಷನ್ ಬರುವ ವಿಧಾನ
ಪ್ರಧಾನಮಂತ್ರಿ ವಯ ವಂದನ ಯೋಜನಾ ಅಡಿಯಲ್ಲಿ ಪೆನ್ಷನ್ ಅನ್ನು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ನೀಡಲಾಗುತ್ತದೆ. ಯಾವ ಅವಧಿಗೆ ಎಂದು ಆಯ್ಕೆ ಮಾಡಿಕೊಂಡಿರುತ್ತಾರೋ ಅದರ ಕೊನೆಗೆ ಮೊತ್ತ ಬರುತ್ತದೆ. ಯಾವ ರೀತಿ ಹಣ ಜಮೆ ಆಗಬೇಕು ಅಂತ ಆಯ್ಕೆ ಇರುತ್ತದೆ ಆ ರೀತಿ ಬರುತ್ತದೆ. ತಿಂಗಳಿಗೊಮ್ಮೆ ಪೆನ್ಷನ್ ಬರಬೇಕು ಎಂಬ ಆಯ್ಕೆಯನ್ನು ಮಾಡಿಕೊಂಡಿದ್ದಲ್ಲಿ ಮುಂದಿನ ತಿಂಗಳ ಆರಂಭದಲ್ಲಿ ಬರುತ್ತದೆ.

ಈ ಯೋಜನೆ ಬಗ್ಗೆ ಪ್ರಮುಖ ಪ್ರಶ್ನೋತ್ತರಗಳು ಇಲ್ಲಿವೆ:
ಅರ್ಜಿ ಸಲ್ಲಿಸುವುದಕ್ಕೆ ಕೊನೆ ದಿನ ಯಾವುದು: ಪ್ರಧಾನಮಂತ್ರಿ ವಯ ವಂದನಾ ಯೋಜನಾ ಯೋಜನೆಗೆ ಸಲ್ಲಿಸಲು ಹಿರಿಯ ನಾಗರಿಕರಿಗೆ ಮಾರ್ಚ್ 31, 20223ರ ತನಕ ಅವಕಾಶ ಇದೆ. ಇದರಲ್ಲಿ ಭಾರತೀಯ ನಾಗರಿಕರು ಮಾತ್ರ ಹೂಡಿಕೆ ಮಾಡಲು ಸಾಧ್ಯ.

ವೈದ್ಯಕೀಯ ಪರೀಕ್ಷೆ: ಈ ಯೋಜನೆಗೆ ಸಬ್​ಸ್ಕ್ರೈಬ್ ಆಗುವುದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆ ಅಗತ್ಯ ಇಲ್ಲ.

ಸಾಲ ವ್ಯವಸ್ಥೆ: ಮೂರು ವರ್ಷಗಳ ಅವಧಿ ಮುಗಿದ ಮೇಲೆ ಸಾಲ ದೊರೆಯುತ್ತದೆ. ಖರೀದಿ ಮಾಡಿದ ಇನ್ಷೂರೆನ್ಸ್ ಮೊತ್ತದ ಶೇ 75ರಷ್ಟು ಸಾಲ ದೊರೆಯುತ್ತದೆ.

ಇನ್ಷೂರೆನ್ಸ್ ಖರೀದಿಯ ಕನಿಷ್ಠ ಹಾಗೂ ಗರಿಷ್ಠ ಮೊತ್ತ: ಈ ಯೋಜನೆ ಅಡಿ ಕನಿಷ್ಠ 1,62,162 ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 1000 ರೂಪಾಯಿ ದೊರೆಯುತ್ತದೆ. ಖರೀದಿ ಮೊತ್ತವನ್ನು 10 ವರ್ಷದ ನಂತರ ಹಿಂತಿರುಗಿಸಲಾಗುತ್ತದೆ.

ಪೆನ್ಷನ್​ನ ಗರಿಷ್ಠ ಮೊತ್ತ: PMVVY ಯೋಜನೆ ಅಡಿಯಲ್ಲಿ ಗರಿಷ್ಠ 15 ಲಕ್ಷ ರೂಪಾಯಿ ಮಾಡಬಹುದು. ಅದಕ್ಕೆ ತಿಂಗಳಿಗೆ ರೂ. 9250 ಬರುತ್ತದೆ. 10 ವರ್ಷದ ನಂತರ ಮೂಲ ಹೂಡಿಕೆ ಮೊತ್ತ ಹಿಂತಿರುಗಿಸಲಾಗುತ್ತದೆ.

PMVVY ಖರೀದಿಸುವುದು ಹೇಗೆ?: ಎಲ್​ಐಸಿ ವೆಬ್​ಸೈಟ್ ಮೂಲಕ PMVVY ಪ್ಲಾನ್​ ಅನ್ನು ಖರೀದಿಸಬಹುದು.

ಇದನ್ನೂ ಓದಿ: LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

ಇದನ್ನೂ ಓದಿ: PF Benefits: ಇನ್ಷೂರೆನ್ಸ್​ನಿಂದ ಪೆನ್ಷನ್​ ತನಕ ಪ್ರಾವಿಡೆಂಟ್ ಫಂಡ್ 5 ಅನುಕೂಲಗಳು

(Get monthly pension of Rs 9250 per month by purchasing Rs 15 lakhs insurance scheme under PMVVY)

Published On - 4:21 pm, Sat, 22 May 21