Jet Fuel Price: ದುಬಾರಿಯಾಗಲಿದೆ ವಿಮಾನ ಪ್ರಯಾಣ; ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಬೆಲೆ ಹೆಚ್ಚಳ

Aviation Turbine Fuel Price Hike: ಭಾರತದಲ್ಲಿ ದೇಶೀಯ ವಿಮಾನ ಹಾರಾಟಕ್ಕೆ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಜೆಟ್ ಫುಯೆಲ್ ಇಂಧನದ ದರಗಳನ್ನು ಪರಿಷ್ಕರಿಸಲಾಗಿದೆ. ದೇಶೀಯ ಹಾರಾಟಕ್ಕೆ ಪ್ರತೀ ಕಿಮೀಗೆ ಸುಮಾರು ಶೇ. 10ರಷ್ಟು ಬೆಲೆ ಹೆಚ್ಚಿಸಲಾಗಿದೆ.

Jet Fuel Price: ದುಬಾರಿಯಾಗಲಿದೆ ವಿಮಾನ ಪ್ರಯಾಣ; ವಿಮಾನಗಳಿಗೆ ಬಳಸುವ ಎಟಿಎಫ್ ಇಂಧನದ ಬೆಲೆ ಹೆಚ್ಚಳ
ವಿಮಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2023 | 11:10 AM

ನವದೆಹಲಿ, ಆಗಸ್ಟ್ 1: ವಿಮಾನಗಳಿಗೆ ಬಳಸುವ ಏವಿಯೇಷನ್ ಟರ್ಬೈನ್ ಫುಯೆಲ್ (ATF- Aviation Turbine Fuel) ಬೆಲೆಯನ್ನು ಹೆಚ್ಚಿಸಲಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಆಗಸ್ಟ್ ಒಂದರಂದು ಜೆಟ್ ಇಂಧನದ (Jet Fuel) ಬೆಲೆ ಏರಿಸಿವೆ. ಜುಲೈ 1ರಂದೂ ಜೆಟ್ ಫುಯೆಲ್ ಬೆಲೆ ಏರಿಸಲಾಗಿತ್ತು. ಇದರೊಂದಿಗೆ ಸತತ ಎರಡನೇ ಬಾರಿ ಎಟಿಎಫ್ ಬೆಲೆ ಹೆಚ್ಚಳಗೊಂಡಿದೆ. ಪ್ರತೀ ಕಿಲೋಮೀಟರ್​ಗೆ ಜೆಟ್ ಇಂಧನದ ಬೆಲೆ ಸುಮಾರು 8,000 ರೂ ನಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲೀಟರ್ ಲೆಕ್ಕದಲ್ಲಿ ಸುಮಾರು 8 ರೂನಷ್ಟು ಬೆಲೆ ಹೆಚ್ಚಳವಾಗಿದೆ. ಜುಲೈ ತಿಂಗಳಲ್ಲಿ ಶೇ. 1.65ರಷ್ಟು ಹೆಚ್ಚಾಗಿದ್ದ ಇವುಗಳ ಬೆಲೆ ಈ ಬಾರಿ ಸುಮಾರು ಶೇ. 10ರಷ್ಟು ಏರಿಕೆ ಆಗಿವೆ.

ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಎಟಿಎಫ್ ಬೆಲೆಗಳನ್ನು ಓಎಂಸಿಗಳು ಗಣನೀಯವಾಗಿ ಹೆಚ್ಚಿಸಿವೆ. ಮುಂಬೈನಲ್ಲಿ ಸದ್ಯ ಜೆಟ್ ಇಂಧನ ಬೆಲೆ ಅತಿಕಡಿಮೆ ಇದ್ದು, ಕೋಲ್ಕತಾ ಅತಿದುಬಾರಿ ಎನಿಸಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಜೆಟ್ ಇಂಧನದ ಬೆಲೆ ಲೀಟರ್​ಗೆ 84.854 ರೂ ಇತ್ತು. ಕಿಲೋಮೀಟರ್​ಗೆ 84,854 ರೂ ಇತ್ತು. ಇದೀಗ ಇದರ ಬೆಲೆ 92,124.13 ರೂಗೆ ಏರಿದೆ.

ಇದನ್ನೂ ಓದಿ: ಆಗಸ್ಟ್​ನಲ್ಲಿನ ಬದಲಾವಣೆಗಳು; ನಿಯಮ, ಜಿಎಸ್​ಟಿ, ಗಡುವು, ಬೆಲೆ ವ್ಯತ್ಯಯಗಳ್ಯಾವುವು? ಇಲ್ಲಿದೆ ಪಟ್ಟಿ

ರಾಜಧಾನಿ ನಗರಿ ದೆಹಲಿಯಲ್ಲಿ ಕಿಲೋಮೀಟರ್​ಗೆ 90,857 ರೂ ಇದ್ದ ಜೆಟ್ ಇಂಧನದ ಬೆಲೆ ಇದೀಗ 98,508.26 ರುಪಾಯಿಗೆ ಹೆಚ್ಚಳಗೊಂಡಿದೆ.

ಇನ್ನು, ಚೆನ್ನೈನಲ್ಲಿ ಜೆಟ್ ಇಂಧನದ ಬೆಲೆ ಜುಲೈನಲ್ಲಿ ಪ್ರತೀ ಕಿಮೀಗೆ 94,530 ರೂ ಇತ್ತು. ಇದೀಗ ಆಗಸ್ಟ್ 1ರಂದು ಪರಿಷ್ಕರಣೆಯಾದ ಬೆಲೆ ಪ್ರಕಾರ 1,02,391.64 ರೂ ಆಗಿದೆ.

ಕೋಲ್ಕತಾದಲ್ಲಿ ಪ್ರತೀ ಕಿಮೀಗೆ ಜೆಟ್ ಇಂಧನದ ಬೆಲೆ 99,793 ರೂನಿಂದ 1,07,383.08 ರುಪಾಯಿಗೆ ಏರಿಕೆ ಆಗಿದೆ. ಇವಿಷ್ಟೂ ಕೂಡ ದೇಶೀಯ ಹಾರಾಟಗಳಿಗೆ ಇರುವ ಜೆಟ್ ಇಂಧನದ ಬೆಲೆಯಾಗಿದೆ.

ಇದನ್ನೂ ಓದಿ: LPG Price: ವಾಣಿಜ್ಯ ಬಳಕೆಯ ಎಲ್​ಪಿಜಿ ಗ್ಯಾಸ್​ ಸಿಲಿಂಡರ್ ಬೆಲೆಯಲ್ಲಿ ಭಾರಿ ಕಡಿತ

ಅಂತಾರಾಷ್ಟ್ರೀಯ ಹಾರಾಟಕ್ಕೆ ಜೆಟ್ ಇಂಧನ ಬೆಲೆ ಪರಿಷ್ಕರಣೆ

ದೇಶೀಯ ವೈಮಾನಿಕ ಸಂಸ್ಥೆಗಳ ಅಂತಾರಾಷ್ಟ್ರೀಯ ಹಾರಾಟಕ್ಕೆ ಪ್ರತ್ಯೇಕ ಜೆಟ್ ಇಂಧನ ಬೆಲೆ ಇರುತ್ತದೆ. ಇದರ ಪರಿಷ್ಕರಣೆಯೂ ಆಗಿದೆ. ಮುಂಬೈನಲ್ಲಿ ಪ್ರತೀ ಕಿಮೀಗೆ ಜೆಟ್ ಇಂಧನದ ಬೆಲೆ 900.73 ಡಾಲರ್ ಆಗಿದೆ. ರುಪಾಯಿ ಲೆಕ್ಕದಲ್ಲಿ ಸುಮಾರು 74,000 ರೂ ಆಗುತ್ತದೆ.

ಇನ್ನು, ದೆಹಲಿಯಲ್ಲಿ ಪ್ರತೀ ಕಿಮೀಗೆ 902.62 ಡಾಲರ್, ಚೆನ್ನೈನಲ್ಲಿ 897.83 ಡಾಲರ್ ಹಾಗೂ ಕೋಲ್ಕತಾದಲ್ಲಿ 941.09 ಡಾಲರ್ ಬೆಲೆಯನ್ನು ಎಟಿಎಫ್ ಹೊಂದಿವೆ.

ಈ ಏರಿಕೆಯೊಂದಿಗೆ, ಭಾರತದಲ್ಲಿ ವಿಮಾನ ಪ್ರಯಾಣ ದುಬಾರಿಯಾಗಲಿದೆ. ಪ್ರಯಾಣ ದರದಲ್ಲಿ ಶೇ. 10ರಿಂದ 15ರಷ್ಟು ಹೆಚ್ಚುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್