Indian Bank: ಇಂಡಿಯನ್​ ಬ್ಯಾಂಕ್​ನಲ್ಲಿ ರೂ. 300 ಕೋಟಿಗೂ ಅಧಿಕ ಮೌಲ್ಯದ ಎರಡು ಎನ್​ಪಿಎ ವಂಚನೆ ಘೋಷಣೆ

| Updated By: Srinivas Mata

Updated on: Sep 23, 2021 | 11:43 PM

ಸಾರ್ವಜನಿಕ ಬ್ಯಾಂಕ್​ ಆದ ಇಂಡಿಯನ್​ ಬ್ಯಾಂಕ್​ನಿಂದ 300 ಕೋಟಿ ರೂಪಾಯಿ ಮೌಲ್ಯದ ಎರಡು ಎನ್​ಪಿಎ ವಂಚನೆ ಪ್ರಕರಣಗಳನ್ನು ವಿನಿಮಯ ಫೈಲಿಂಗ್​ನಲ್ಲಿ ತಿಳಿಸಲಾಗಿದೆ.

Indian Bank: ಇಂಡಿಯನ್​ ಬ್ಯಾಂಕ್​ನಲ್ಲಿ ರೂ. 300 ಕೋಟಿಗೂ ಅಧಿಕ ಮೌಲ್ಯದ ಎರಡು ಎನ್​ಪಿಎ ವಂಚನೆ ಘೋಷಣೆ
ಇಂಡಿಯನ್ ಬ್ಯಾಂಕ್ (ಸಾಂದರ್ಭಿಕ ಚಿತ್ರ)
Follow us on

ಸಾರ್ವಜನಿಕ ವಲಯದ ಬ್ಯಾಂಕ್​ ಆದ ಇಂಡಿಯನ್​ ಬ್ಯಾಂಕ್​ನಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಎರಡು ಅನುತ್ಪಾದಕ ಆಸ್ತಿಗಳನ್ನು (NPA) ವಂಚನೆ ಎಂದು ಘೋಷಿಸಿದೆ ಮತ್ತು ಅವುಗಳನ್ನು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ ಹಾಗೂ ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI)ಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಲಾಗಿದೆ.

“ಸೆಬಿ ನಿಯಮಾವಳಿಗಳ ಪ್ರಕಾರ ಮತ್ತು ವಾಸ್ತವ ಘಟನೆಗಳು/ಮಾಹಿತಿಯ ನಿರ್ಣಯ ಮತ್ತು ಬಹಿರಂಗಪಡಿಸುವಿಕೆಯ ಬ್ಯಾಂಕ್​ನ ನೀತಿಗೆ ಸಂಬಂಧಿಸಿದಂತೆ ಎರಡು NPA ಖಾತೆಗಳನ್ನು ವಂಚನೆ ಎಂದು ಘೋಷಿಸಲಾಗಿದೆ. ಮತ್ತು ನಿಯಂತ್ರಕ ಅಗತ್ಯದ ಪ್ರಕಾರ RBIಗೆ ವರದಿ ಮಾಡಲಾಗಿದೆ ಎಂದು ನಾವು ನಿಮಗೆ ತಿಳಿಸಬೇಕು,” ಎಂದು ಇಂಡಿಯನ್ ಬ್ಯಾಂಕ್ ಫೈಲಿಂಗ್‌ನಲ್ಲಿ ಹೇಳಿದೆ.

ಕಿರಾತಪುರ ನೇರ್ ಚೌಕ್ ಎಕ್ಸ್‌ಪ್ರೆಸ್‌ವೇ ಲಿಮಿಟೆಡ್ ಮತ್ತು ತಾಂಟಿಯಾ ಕನ್​ಸ್ಟ್ರಕ್ಷನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಅನುತ್ಪಾದಕ ಖಾತೆಗಳು ಕ್ರಮವಾಗಿ 172.73 ಕೋಟಿ ರೂಪಾಯಿ ಮತ್ತು 132.41 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

ಎರಡೂ ಪ್ರಕರಣಗಳಲ್ಲಿ ವಂಚನೆಯ ಸ್ವರೂಪವನ್ನು ಸಾಲದಾತರು “ನಿಧಿಗಳನ್ನು ಬೇರೆ ಕಡೆ ತಿರುಗಿಸಿರುವುದು” ಎಂದು ವ್ಯಾಖ್ಯಾನಿಸಿದ್ದಾರೆ. ಗುರುವಾರ ಇಂಡಿಯನ್ ಬ್ಯಾಂಕ್​ನ ಷೇರಿನ ಬೆಲೆ NSEನಲ್ಲಿ ರೂ. 131.95ಕ್ಕೆ ಮುಕ್ತಾಯ ಆಗಿದೆ.

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್

(PSB Indian Bank Announced Rs 300 Crore Worth Two NPA Fraud In Exchange Filing)