ಕೊವಿಡ್ 19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಸರ್ಕಾರ ಸ್ವಾಮ್ಯದ ಕೆಲವು ಬ್ಯಾಂಕ್ಗಳು ವಿಶೇಷ ಯೋಜನೆ ಘೋಷಿಸಿವೆ. ಯಾರು ಚುಚ್ಚುಮದ್ದು ಪಡೆದಿರುತ್ತಾರೋ ಅವರಿಗೆ ಹೆಚ್ಚಿನ ಬಡ್ಡಿಯನ್ನು ಘೋಷಣೆ ಮಾಡಿವೆ. ಯಾರು ತಮ್ಮ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರಗಳನ್ನು ತೋರಿಸುತ್ತಾರೋ ಅಂಥವರಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಸೀಮಿತ ಅವಧಿಗೆ ಈ ಆಫರ್ ಇರಲಿದೆ. ಜೂನ್ 21ರಿಂದ ಎಲ್ಲ ರಾಜ್ಯಗಳಲ್ಲೂ ವಯಸ್ಕರಿಗೆ ಕೇಂದ್ರ ಸರ್ಕಾರದಿಂದ ಕೊವಿಡ್- 19 ವಿರುದ್ಧ ಉಚಿತ ಚುಚ್ಚುಮದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದು, ಇಂಥ ಸನ್ನಿವೇಶದಲ್ಲಿ ಈ ಆಫರ್ ಬಂದಿದೆ. ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನಾದರೂ ಪಡೆದಿದ್ದಲ್ಲಿ, ಅಂಥವರು 999 ದಿನಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದಲ್ಲಿ ಕೋಲ್ಕತ್ತಾ ಮೂಲದ ಯುಕೋ ಬ್ಯಾಂಕ್ನಿಂದ 30 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಹೆಚ್ಚು ಬಡ್ಡಿಯನ್ನು ಆಫರ್ ಮಾಡಲಾಗುತ್ತಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾಮೂಲಿಗಿಂತ 25 ಬೇಸಿಸ್ ಪಾಯಿಂಟ್, ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತದೆ. ಈ ಯೋಜನೆಗೆ “ಇಮ್ಯುನ್ ಇಂಡಿಯಾ ಡೆಪಾಸಿಟ್ ಸ್ಕೀಮ್” ಎಂದು ಹೆಸರಿಸಲಾಗಿದೆ. ಮೆಚ್ಯೂರಿಟಿ ಅವಧಿ 1,111 ದಿನದ್ದಾಗಿರುತ್ತದೆ. ದೇಶದಲ್ಲಿ ಕ್ಯುಮುಲೇಟಿವ್ ಡೋಸ್ಗಳ ಸಂಖ್ಯೆ 23.61 ಕೋಟಿ ಆಗಿದೆ. 18ರಿಂದ 44 ವರ್ಷ ವಯಸ್ಸಿನೊಳಗಿನವರದು ಇನ್ನೇನು ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶುರುವಾಗಬೇಕಿದೆ. ಅಂದಹಾಗೆ ಜನವರಿ 16, 2021ರಂದು ಹೆಲ್ತ್ ಕೇರ್ ವರ್ಕರ್ಗಳೊಂದಿಗೆ ಕೊವಿಡ್- 19 ಲಸಿಕೆ ಅಭಿಯಾನ ಶುರುವಾಯಿತು. ಆ ನಂತರ ಫ್ರಂಟ್ ಲೈನ್ ವರ್ಕರ್ಸ್ ಕವರ್ ಆಯಿತು.
ಅದಾಗಿ ಕೆಲವು ವಾರಗಳಿಗೆ ಸರ್ಕಾರದಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ತರಲಾಯಿತು. 60 ವರ್ಷ ಮೇಲ್ಪಟ್ಟವರು ಹಾಗೂ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಗಮನಿಸಿ 45 ವರ್ಷ ಮೇಲ್ಪಟ್ಟವರಿಗಾಗಿ ತರಲಾಯಿತು. ಏಪ್ರಿಲ್ ತಿಂಗಳಲ್ಲಿ 45 ವರ್ಷ ಮೇಲ್ಪಟ್ಟವರು ಎಲ್ಲರೂ ಚುಚ್ಚುಮದ್ದು ಪಡೆಯುವುದಕ್ಕೆ ಅರ್ಹರು ಎಂದು ಘೋಷಿಸಲಾಯಿತು. ಮೇ ತಿಂಗಳಲ್ಲಿ ಭಾರತದಲ್ಲಿ ಎಲ್ಲ ವಯಸ್ಕರಿಗೂ ಲಸಿಕೆ ಹಾಕುವುದಕ್ಕೆ ಆರಂಭಿಸಲಾಯಿತು. ಹೀಗೆ ಘೋಷಣೆ ಮಾಡಿದ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದಾಯಿತು.
ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ
(PSU banks offering additional interest on fixed deposits of people who got corona vaccine)