Loan Processing Fee: ಈ ಬ್ಯಾಂಕ್​ನಲ್ಲಿ ಯಾವ ಸಾಲಕ್ಕೂ ಪ್ರೊಸೆಸಿಂಗ್, ದಾಖಲಾತಿ ಶುಲ್ಕವಿಲ್ಲ ಎಂಬುದು ಗೊತ್ತೆ?

| Updated By: ರಶ್ಮಿ ಕಲ್ಲಕಟ್ಟ

Updated on: Sep 02, 2021 | 8:05 PM

ಈ ಬ್ಯಾಂಕ್​​ನಲ್ಲಿ ಎಲ್ಲ ಸಾಲಗಳ ಮೇಲೆ ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಆ ಬಗೆಗಿನ ವಿವರ ಇಲ್ಲಿದೆ.

Loan Processing Fee: ಈ ಬ್ಯಾಂಕ್​ನಲ್ಲಿ ಯಾವ ಸಾಲಕ್ಕೂ ಪ್ರೊಸೆಸಿಂಗ್, ದಾಖಲಾತಿ ಶುಲ್ಕವಿಲ್ಲ ಎಂಬುದು ಗೊತ್ತೆ?
ಪಂಜಾಬ್ ನ್ಯಾಷನಲ್ ಬ್ಯಾಂಕ್
Follow us on

ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಎಲ್ಲ ರೀತಿಯ ಸಾಲಗಳಿಗೆ ಎಲ್ಲ ಬಗೆಯ ಪ್ರೊಸೆಸ್​ ಫೀಗಳು ಮತ್ತು ದಾಖಲಾತಿ ಶುಲ್ಕಗಳನ್ನು ಮನ್ನಾ ಮಾಡಿದೆ. ಬಹುಶಃ ತನ್ನ ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ರೀತಿಯ ಪ್ರೊಸೆಸಿಂಗ್​ ಫೀ ಮನ್ನಾ ಮಾಡಿದ ಮೊದಲ ಬ್ಯಾಂಕ್ ಪಿಎನ್​ಬಿ ಆಗಿದೆ. ಆದರೂ ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ. ಇದು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದ್ದು, ಗ್ರಾಹಕರನ್ನು ಕಷ್ಟಕ್ಕೆ ಸಿಲುಕಿಸಿದೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಿಂದ ಡಿಸೆಂಬರ್ 31, 2021ರ ವರೆಗೆ ಯಾವುದೇ ದಾಖಲಾತಿ ಅಥವಾ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ 31ರ ವರೆಗೆ ತನ್ನ ಗೃಹ ಸಾಲದ ಗ್ರಾಹಕರಿಗೆ ಇದೇ ರೀತಿ ಪ್ರೊಸೆಸಿಂಗ್ ಫೀ ಮನ್ನಾ ಮಾಡಿ, ಅದೇ ಕೊಡುಗೆಯನ್ನು ನೀಡಿತ್ತು.

ಸಾಲಕ್ಕೆ ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲ
ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನ ಕೊಡುಗೆಯನ್ನು ಫೆಸ್ಟಿವಲ್ ಬೊನಾಂಜಾ ಎಂದು ಕರೆಯಲಾಗುತ್ತದೆ ಮತ್ತು ಅರ್ಥಶಾಸ್ತ್ರಜ್ಞರು ಹಾಗೂ ಮಾರುಕಟ್ಟೆ ವಿಶ್ಲೇಷಕರು ಹೇಳುವಂತೆ, ಆರ್ಥಿಕತೆಯಲ್ಲಿ ಚೈತನ್ಯವನ್ನು ತುಂಬಲು ಎದುರು ನೋಡುತ್ತಿರುವ ಹಬ್ಬದ ಋತುವಿನ ಬೇಡಿಕೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಗೃಹ, ವಾಹನ, ಆಸ್ತಿ, ವೈಯಕ್ತಿಕ, ಪಿಂಚಣಿ ಮತ್ತು ಚಿನ್ನದ ಸಾಲಗಳಂತಹ ಎಲ್ಲ ಚಿಲ್ಲರೆ ಸಾಲಗಳನ್ನು ಈ ಅಟೆಂಡೆಂಟ್ ಶುಲ್ಕವಿಲ್ಲದೆ ನೀಡಲಾಗುತ್ತದೆ.

ಪಂಜಾಬ್​ ನ್ಯಾಷನಲ್ ಬ್ಯಾಂಕ್ ಈಗ ಗೃಹ ಸಾಲದ ಮೇಲೆ ಶೇ 6.80 ಮತ್ತು ಕಾರು ಸಾಲದ ಮೇಲೆ ಶೇ 7.15ರಿಂದ ಆರಂಭವಾಗುವಂತೆ ಬಡ್ಡಿದರವನ್ನು ನೀಡುತ್ತಿದೆ. ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರಗಳು ಶೇ 8.95ರಿಂದ ಆರಂಭವಾಗುತ್ತವೆ. ಇದು ಬ್ಯಾಂಕಿಂಗ್ ವಲಯದಲ್ಲಿ ಅತ್ಯಂತ ಕಡಿಮೆ. ಗೃಹ ಸಾಲದ ಟಾಪ್-ಅಪ್‌ಗಳು ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲದೆ ಲಭ್ಯವಿದೆ.

ದೇಶೀಯ ಸಾಲದ ಪುಸ್ತಕ
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪಿಎನ್​ಬಿ 7.21 ಲಕ್ಷ ಕೋಟಿ ರೂಪಾಯಿಗಳ ದೇಶೀಯ ಸಾಲದ ಪುಸ್ತಕವನ್ನು ಹೊಂದಿತ್ತು. ಒಟ್ಟಾರೆ ಕೆಟ್ಟ ಸಾಲಗಳು ಶೇ 14ಕ್ಕಿಂತ ಹೆಚ್ಚಿವೆ ಮತ್ತು ಬ್ಯಾಂಕ್ ರೂ. 8241 ಕೋಟಿ ಮೌಲ್ಯದ ಸಾಲಗಳು FY22ರ ಜೂನ್ ತ್ರೈಮಾಸಿಕದಲ್ಲಿ ಜಾರಿದೆ. ಇದರರ್ಥ, ಈ ತ್ರೈಮಾಸಿಕದಲ್ಲಿ ರೂ. 4,679 ಕೋಟಿಯನ್ನು ಮೀಸಲಿಡಲಾಗಿದೆ, ಎಂದು ಪಿಎನ್‌ಬಿಯ ಸಿಇಒ ಎಸ್ ಎಸ್ ಮಲ್ಲಿಕಾರ್ಜುನ ರಾವ್ ಆಗಸ್ಟ್‌ನಲ್ಲಿ ಹೇಳಿದ್ದರು.

ಬಡ್ಡಿ ದರ ಕಡಿತ
ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಪಿಎನ್​ಬಿ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ ಅಥವಾ ಶೇ 0.1 ಇಳಿಸಿದೆ. ಪ್ರಸ್ತುತ, ಬ್ಯಾಂಕ್ ಶೇ 2.90 ಬಡ್ಡಿದರವನ್ನು ನೀಡುತ್ತದೆ ಮತ್ತು ಇದು ಅಸ್ತಿತ್ವದಲ್ಲಿರುವ ಹಾಗೀ ಹೊಸ ಉಳಿತಾಯ ಖಾತೆಗಳಿಗೆ ಅನ್ವಯಿಸುತ್ತದೆ. ಯಾವುದೇ ಮೊತ್ತದ ಠೇವಣಿ ಈ ದರವನ್ನು ನಿಯಂತ್ರಿಸುತ್ತದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಈಗಾಗಲೇ ತನ್ನ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹಿಂದಿನ ತಿಂಗಳಲ್ಲಿ ಆಗಸ್ಟ್ 1, 2021ರಿಂದ ಪರಿಷ್ಕರಿಸಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಸಾಮಾನ್ಯ ನಾಗರಿಕರಿಗೆ ಈಗ ಶೇ 2.90ರಿಂದ ಶೇ 5.25ವರೆಗಿನ ಬಡ್ಡಿ ದರವನ್ನು ತಮ್ಮ ರೂ. 2 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿಯ ಮೊತ್ತದ ಮೇಲೆ ವಿವಿಧ ಕಾಲಾವಧಿಗೆ ಪಡೆಯುತ್ತಾರೆ.

ಇದನ್ನೂ ಓದಿ: Bank Holidays: ನಿಮ್ಮ ವ್ಯವಹಾರ ಮಾಡುವಾಗ ಈ ದಿನಗಳನ್ನು ಗಮನಿಸಿ; ಸೆಪ್ಟೆಂಬರ್​ ತಿಂಗಳಲ್ಲಿ 12 ದಿನ ಬ್ಯಾಂಕ್ ರಜಾ

(Punjab National Bank Offering No Processing On All Kind Of Loans)

Published On - 7:56 pm, Thu, 2 September 21