ಇನ್​-ಆ್ಯಪ್​ ಪಾವತಿಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಆಪಲ್ ವಿರುದ್ಧ ನಂಬಿಕೆ ದ್ರೋಹದ ಮೊಕದ್ದಮೆ

TV9 Digital Desk

| Edited By: Srinivas Mata

Updated on: Sep 02, 2021 | 5:06 PM

ಆಪಲ್ ಕಂಪೆನಿಯ ವಿರುದ್ಧ ರಾಜಸ್ಥಾನ ಮೂಲದ ಎನ್​ಜಿಒದಿಂದ ಭಾರತದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಇನ್​- ಆ್ಯಪ್ ಪಾವತಿಗೆ ಸಂಬಂಧಿಸಿದಂತೆ ದಾಖಲಿಸಿದ ಈ ಮೊಕದ್ದಮೆಯ ಪೂರ್ವಾಪರ ವಿವರ ಇಲ್ಲಿದೆ.

ಇನ್​-ಆ್ಯಪ್​ ಪಾವತಿಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಆಪಲ್ ವಿರುದ್ಧ ನಂಬಿಕೆ ದ್ರೋಹದ ಮೊಕದ್ದಮೆ
ಸಾಂದರ್ಭಿಕ ಚಿತ್ರ

ರಾಜಸ್ಥಾನ ಮೂಲದ ಎನ್​ಜಿಒ “ಟುಗೆದರ್ ವಿ ಫೈಟ್​ ಸೊಸೈಟಿ”ಯಿಂದ ಆಪಲ್​ ಕಂಪೆನಿಯ ಆ್ಯಪ್​ ಸ್ಟೋರ್​ನ ಇನ್-ಆ್ಯಪ್ ಪಾವತಿ ನೀತಿಗಳ ವಿರುದ್ಧ ಅರ್ಜಿ ದಾಖಲಿಸಲಾಗಿದೆ. ರಾಯಿಟರ್ಸ್​ ವರದಿ ಮಾಡಿರುವಂತೆ, ಡೆವಲಪರ್​​ಗಳಿಗೆ ತನ್ನ ಇನ್​-ಆ್ಯಪ್ ಪಾವತಿ ವ್ಯವಸ್ಥೆ ಅಡಿಯಲ್ಲಿ ಆ್ಯಪ್​ ಮಾರ್ಕೆಟ್​ನಲ್ಲಿ ಇರುವ ಸ್ಥಾನಮಾನದ ಮೂಲಕ ಬೆದರಿಕೆಯೊಡ್ಡುತ್ತಿದೆ. ಮತ್ತು ಪ್ರತಿ ವಹಿವಾಟಿನ ಮೇಲೇ ಶೇ 30ರಷ್ಟು ಶುಲ್ಕ ವಿಧಿಸುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. “ಈಗಿರುವ ಶೇ 30ರಷ್ಟು ಕಮಿಷನ್ ಅರ್ಥ ಏನೆಂದರೆ, ಕೆಲವು ಆ್ಯಪ್ ಡೆವಲಪರ್​ಗಳು ಮಾರ್ಕೆಟ್​ನಲ್ಲಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಇದರಿಂದಾಗಿ ಗ್ರಾಹಕರಿಗೆ ಹಾನಿ ಆಗುತ್ತದೆ,” ಎಂದು ಫೈಲಿಂಗ್​ನಲ್ಲಿ ತಿಳಿಸಿರುವುದು ಗಮನಕ್ಕೆ ಬಂದಿರುವುದಾಗಿ ರಾಯಿಟರ್ಸ್ ತಿಳಿಸಿದೆ.

ಮನಿಕಂಟ್ರೋಲ್​ ಜತೆಗೆ ಮಾತನಾಡಿರುವ ಇಂಡಸ್ ಆ್ಯಪ್ ಬಜಾರ್​ನ ಸಿಇಒ ರಾಕೇಶ್​ ದೇಶ್​ಮುಖ್, ಟು ಗೆದರ್ ವಿ ಫೈಟ್ ಸೊಸೈಟಿ ಎತ್ತಿರುವ ವಿಚಾರವು ಸರಿಯಾಗಿದೆ ಮತ್ತು ಸತ್ಯವಾಗಿದೆ. ದೊಡ್ಡ ಟೆಕ್ ಕಂಪೆನಿಗಳು ಇನ್​-ಆ್ಯಪ್ ಪಾವತಿಗೆ ವಿಧಿಸುವ ದರಗಳು ಆವಿಷ್ಕಾರಕ್ಕೆ ಅಡ್ಡಿಯಾಗಿವೆ. ಈ ಪಾವತಿಗಳು ಮತ್ತು ನೀತಿಗಳು ಹಲವು ಡೆವಲಪರ್​ಗಳಿಗೆ ತೊಡರಾಗಿದೆ. ಆ ಕಾರಣದಿಂದಾಗಿ ಅವರು ಮಾರುಕಟ್ಟೆಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಈಚೆಗೆ ಕೊರಿಯನ್ ಸರ್ಕಾರವು ಕೂಡ ಗೂಗಲ್​ಗೆ ಸಂಬಂಧಿಸಿದಂತೆ ಇದೇ ರೀತಿಯ ಕಾನೂನು ತಂದಿದೆ. ಈ ಸಕಾರಾತ್ಮಕ ಹೆಜ್ಜೆಗಳು ದೈತ್ಯ ಟೆಕ್​ ಕಂಪೆನಿಗಳು ಸ್ವತಂತ್ರ ಆ್ಯಪ್​ ಸ್ಟೋರ್​ಗಳಯ ಮತ್ತು ಇನ್​-ಆ್ಯಪ್ ಖರೀದಿ ಕಮಿಷನ್ ಬಗ್ಗೆ ಮರು ಚಿಂತಿಸುವಂತೆ ಮಾಡುತ್ತವೆ ಎಂದಿದ್ದಾರೆ.

ಇತ್ತೀಚೆಗೆ ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಸೆಂಬ್ಲಿಯು ಕಾನೂನು ಮಾನ್ಯ ಮಾಡಿ, ಆಪಲ್ ಮತ್ತು ಗೂಗಲ್​ನಿಂದ ತಮ್ಮದೇ ಇನ್​-ಆ್ಯಪ್ ಪಾವತಿ ವ್ಯವಸ್ಥೆಯನ್ನೇ ಬಳಸುವಂತೆ ಡೆವಲಪರ್​ಗಳನ್ನು ಬಲವಂತ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. ಇನ್ನು ಸ್ಟೋರ್​ಗಳಲ್ಲಿ ಸುಖಾಸುಮ್ಮನೆ ಆ್ಯಪ್​ ಅನ್ನು ಅನುಮೋದಿಸುವುದಕ್ಕೆ ತಡ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಈಚೆಗೆ ಅಮೆರಿಕದಲ್ಲಿ ಆ್ಯಪ್​ ಡೆವಲಪರ್​ಗಳ ಜತೆಗೆ ಕಾನೂನು ಸಹಮತವೊಂದಕ್ಕೆ ಬಂದಿದೆ. ಅದರ ಪ್ರಕಾರವಾಗಿ, ಅಮೆರಿಕದಲ್ಲಿ ಆ್ಯಪ್ ಡೆವಲಪರ್​ಗಳಿಗೆ ಸಣ್ಣ ವಿನಾಯಿತಿ ಸಿಕ್ಕಿದೆ. ಐಫೋನ್​ ಅಥವಾ ಐಪ್ಯಾಡ್​ನ ಆ್ಯಪ್ ಹೊರತುಪಡಿಸಿಯೂ ಬೇರೆ ಮಾರ್ಗಗಳಿಂದ ಪಾವತಿ ಮಾಡುವ ಬಗ್ಗೆ ಗ್ರಾಹಕರಿಗೆ ಡೆವಲಪರ್​ಗಳು ಇ-ಮೇಲ್​ ಕಳುಹಿಸಬಹುದು.

ಇದನ್ನೂ ಓದಿ: Apple Company: ಆಪಲ್ ಕಂಪೆನಿಯ ಸಿಇಒ ಟಿಮ್​ ಕುಕ್ ಅಂತಿಮ ವೇತನ ಎಷ್ಟು ಸಾವಿರ ಕೋಟಿ ಗೊತ್ತೆ?

(Antitrust Law Suit Filed Against Apple Regarding In-App Payment In India)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada