ಭಾರತೀಯ ಉತ್ಪಾದನಾ ವಲಯವು 2022ರ ಫೆಬ್ರವರಿಯಲ್ಲಿ ವಿಸ್ತರಣೆಯನ್ನು ಮುಂದುವರಿಸಿದೆ. ವಲಯದ ಉತ್ಪಾದನಾ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಜನವರಿಯಲ್ಲಿ 54 ಇದ್ದದ್ದು ಫೆಬ್ರವರಿಯಲ್ಲಿ 54.9ಕ್ಕೆ ಏರಿಕೆ ಕಂಡಿದೆ. 50ಕ್ಕಿಂತ ಹೆಚ್ಚಿನ ಚಟುವಟಿಕೆಯು ವಿಸ್ತರಣೆಯನ್ನು ಸೂಚಿಸುತ್ತದೆ. ಆದರೆ ಉಪ-50ರ ಒಳಗಿನ ಸಂಖ್ಯೆಯು ಕುಗ್ಗಿರುವುದರ ಸಂಕೇತವಾಗಿದೆ. ಮಾರ್ಚ್ 2ರಂದು ತನ್ನ ಪಿಎಂಐ ವರದಿಯನ್ನು ಬಿಡುಗಡೆ ಮಾಡಿದ ಐಎಚ್ಎಸ್ ಮಾರ್ಕಿಟ್ ಪ್ರಕಾರ, ಫೆಬ್ರವರಿಯಲ್ಲಿ ಹೊಸ ಕೆಲಸದ ಆರ್ಡರ್ಗಳಲ್ಲಿ “ಬಲವಾದ ಹೆಚ್ಚಳ” ಕಂಡುಬಂದಿದೆ. ಹೊಸ ಕೆಲಸದೊಳಗೆ ಹೆಚ್ಚಳವು ಸಾಧಾರಣವಾಗಿದ್ದರೂ ಮೂರು ತಿಂಗಳಲ್ಲಿ ಅಂತಾರಾಷ್ಟ್ರೀಯ ಬೇಡಿಕೆಯು ಶೀಘ್ರವಾದ ವೇಗದಲ್ಲಿ ಏರಿದೆ.
“ಔಟ್ಪುಟ್ ಮತ್ತು ಹೊಸ ಆರ್ಡರ್ಗಳು ಬಲವಾದ ದರಗಳಲ್ಲಿ ವಿಸ್ತರಿಸಿದ್ದು, ಖರೀದಿ ಚಟುವಟಿಕೆಯು ಮುಂದುವರಿಯಿತು. ಅದೇ ಸಮಯದಲ್ಲಿ ಬ್ಯಾಕ್ಲಾಗ್ಗಳಲ್ಲಿ ನಿರಂತರ ಹೆಚ್ಚಳವು ಸಾಮರ್ಥ್ಯದ ಒತ್ತಡಗಳು ಮುಂದುವರಿದಂತೆ ಮುಂದಿನ ತಿಂಗಳುಗಳಲ್ಲಿ ಹೆಚ್ಚಿನ ಉದ್ಯೋಗ ಮಟ್ಟಗಳಿಗೆ ಕಾರಣವಾಗಬಹುದು,” ಎಂದು ಐಎಚ್ಎಸ್ ಮಾರ್ಕಿಟ್ನ ಅರ್ಥಶಾಸ್ತ್ರಜ್ಞರಾದ ಶ್ರೀಯಾ ಪಟೇಲ್ ಹೇಳಿದ್ದಾರೆ. ಆದರೂ ಫೆಬ್ರವರಿಯಲ್ಲಿ ಉದ್ಯೋಗವು ಮೂರು ತಿಂಗಳಲ್ಲಿ ನಿಧಾನವಾದ ವೇಗದಲ್ಲಿ ಕುಸಿದಿದೆ. ಭಾರತೀಯ ಉತ್ಪಾದನಾ ವಲಯವು ಒಮಿಕ್ರಾನ್ ರೂಪಾಂತರದ ಮುಂಚೂಣಿಯಲ್ಲಿ ಮೂರನೇ ಅಲೆಯ “ಚಂಡಮಾರುತವನ್ನು ಎದುರಿಸಿದೆ” ಎಂದು ಪಟೇಲ್ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಉತ್ಪಾದನಾ ಚಟುವಟಿಕೆಯು ಸುಧಾರಿಸಿದ್ದರೂ ಬೆಲೆಗಳ ಬಗ್ಗೆ ಆತಂಕ ಉಳಿದಿದೆ. ಇನ್ಪುಟ್ ಬೆಲೆ ಹಣದುಬ್ಬರವು ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ಆದರೆ ಅದು ಹೆಚ್ಚುತ್ತಲೇ ಇದ್ದು, ಇದರಿಂದಾಗಿ ತಯಾರಕರು ಕೆಲವು ವೆಚ್ಚದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಒತ್ತಾಯಿಸಿದೆ. “ವೆಚ್ಚಗಳು ತೀವ್ರವಾಗಿ ಏರುತ್ತಿರುವ ಹೊರತಾಗಿಯೂ ಸಂಸ್ಥೆಗಳು ಈ ಹೊರೆಯ ಸ್ವಲ್ಪ ಭಾಗವನ್ನು ಮಾತ್ರ ಗ್ರಾಹಕರಿಗೆ ವರ್ಗಾಯಿಸಿದವು. ಇದರಿಂದಾಗಿ ಲಾಭದ ಮೇಲೆ ಒತ್ತಡವನ್ನು ಸೂಚಿಸಿದವು,” ಎಂದು ಪಟೇಲ್ ತಿಳಿಸಿದ್ದಾರೆ.
ಹೆಚ್ಚಿದ ಹಣದುಬ್ಬರವು ಆತಂಕಕಾರಿ ಆಗಿದ್ದು, ಇದು ಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ನಂತರ ಏರಿದೆ. ಇದು ಕಚ್ಚಾ ತೈಲ ಸೇರಿದಂತೆ ಜಾಗತಿಕ ಸರಕುಗಳ ಬೆಲೆಗಳನ್ನು ಹೆಚ್ಚಿಸಿದೆ. ಕೆಲವು ವಸ್ತುಗಳಿಗೆ ಹಣದುಬ್ಬರದ ಒತ್ತಡವನ್ನು ತಗ್ಗಿಸಲು ಸರ್ಕಾರವು ಪೂರೈಕೆ-ಕಡೆಯ ಸಂಬಂಧಿತ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮುಂದಿನ ವಾರ 5 ರಾಜ್ಯ ಚುನಾವಣೆಗಳಿಗೆ ಮತದಾನ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿ ಭಾರತೀಯರು ಇದ್ದಾರೆ. ಫೆಬ್ರವರಿ 28ರಂದು ಬಿಡುಗಡೆಯಾದ ಮಾಹಿತಿಯು ಭಾರತದ ಜಿಡಿಪಿ ಬೆಳವಣಿಗೆಯು ಹಿಂದಿನ ತ್ರೈಮಾಸಿಕದಲ್ಲಿ ಶೇ 8.5ರಿಂದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 5.4ಕ್ಕೆ ಕುಸಿದಿದೆ ಎಂದು ತೋರಿಸಿದೆ. ಇದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಆಗಿದೆ.
ಇದನ್ನೂ ಓದಿ: Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ
Published On - 8:29 pm, Wed, 2 March 22