QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್

IIT Delhi best among 54 Indian universities featuring in QS world rankings: 2025-26ರ ಸಾಲಿನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಪಟ್ಟಿ ಪ್ರಕಟವಾಗಿದ್ದು, 1,500ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಇದರಲ್ಲಿವೆ. 190ಕ್ಕೂ ಅಧಿಕ ಅಮೆರಿಕನ್ ವಿವಿಗಳು ಇದರಲ್ಲಿವೆ. ಭಾರತದ 54 ಯೂನಿವರ್ಸಿಟಿಗಳು ಪಟ್ಟಿಯಲ್ಲಿವೆ. ಈ ಬಾರಿ ಹೊಸದಾಗಿ ಅತಿಹೆಚ್ಚು ಸೇರ್ಪಡೆಯಾದ ವಿವಿಗಳು ಭಾರತದ್ದೇ ಆಗಿವೆ. ಭಾರತೀಯ ವಿವಿಗಳ ಪೈಕಿ ಐಐಟಿ ಡೆಲ್ಲಿ ಮೊದಲು ಬರುತ್ತದೆ.

QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್
ಕ್ಯುಎಸ್ ವರ್​ಲ್ಡ್ ಯೂನಿವರ್ಸಿಟಿಗಳ ಪಟ್ಟಿ

Updated on: Jun 19, 2025 | 6:25 PM

ನವದೆಹಲಿ, ಜೂನ್ 19: ಈ ವರ್ಷದ ಸಾಲಿನ ಕ್ಯುಎಸ್ ವರ್​ಲ್ಡ್ ಯೂನಿವರ್ಸಿಟಿಗಳ ಪಟ್ಟಿಯನ್ನು (Quacquarelli Symonds- QS World University Rankings 2026) ಪ್ರಕಟಿಸಲಾಗಿದೆ. ನೂರಕ್ಕೂ ಹೆಚ್ಚು ದೇಶಗಳಿಂದ 1,500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿದ್ದು, ಅಮೆರಿಕದ ಮಸಾಚುಸೆಟ್ಸ್ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತನ್ನ ಅಗ್ರಸ್ಥಾನ ಉಳಿಸಿಕೊಂಡಿದೆ. ಭಾರತದಲ್ಲಿ ಐಐಟಿ ದೆಹಲಿ (IIT Delhi) ಅಗ್ರಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ಅನೇಕ ಭಾರತೀಯ ಯೂನಿರ್ಸಿಟಿಗಳು ಮೊದಲ ಬಾರಿಗೆ ಸ್ಥಾನ ಪಡೆದಿವೆ. ಈ ಕ್ಯುಎಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಬರೋಬ್ಬರಿ 54 ಭಾರತೀಯ ಶಿಕ್ಷಣ ಸಂಸ್ಥೆಗಳಿವೆ.

ಗಮನ ಸೆಳೆದ ಐಐಟಿ ಡೆಲ್ಲಿ…

ಐಐಟಿ ಡೆಲ್ಲಿ ಎರಡು ವರ್ಷಗಳ ಹಿಂದೆ ಹತ್ತಿರ ಹತ್ತಿರ 200ನೇ ಸ್ಥಾನದ ಸಮೀಪದಲ್ಲಿತ್ತು. ಎರಡು ವರ್ಷದಲ್ಲಿ 70ಕ್ಕೂ ಹೆಚ್ಚು ಸ್ಥಾನ ಮೇಲೇರಿದೆ. 2024-25ರ ಪಟ್ಟಿಯಲ್ಲಿ ಐಐಟಿ ದೆಹಲಿ 150ನೇ ಸ್ಥಾನದಲ್ಲಿತ್ತು. ಈಗ 2025-26ರ ಪಟ್ಟಿಯಲ್ಲಿ 123ನೇ ಸ್ಥಾನಕ್ಕೇರಿದೆ.

ಭಾರತೀಯ ಯೂನಿವರ್ಸಿಟಿಗಳ ಪೈಕಿ ಐಐಟಿ ಡೆಲ್ಲಿ ನಂತರದ ಸ್ಥಾನ ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್​ನದ್ದಾಗಿದೆ. ಅವು ಕ್ರಮವಾಗಿ 129 ಮತ್ತು 180ನೇ ರ್ಯಾಂಕಿಂಗ್ ಹೊಂದಿವೆ. ಕಳೆದ ಬಾರಿಯ ಪಟ್ಟಿಯಲ್ಲಿ ಐಐಟಿ ಬಾಂಬೆ ಭಾರತೀಯ ಯೂನಿವರ್ಸಿಟಿಗಳಲ್ಲಿ ನಂಬರ್ ಒನ್ ಎನಿಸಿತ್ತು.

ಇದನ್ನೂ ಓದಿ: ಗ್ಲೋಬಲ್ ಸಮಿಟ್​​ನಲ್ಲಿ IMEC ಬಗ್ಗೆ ಚರ್ಚೆ; ಭಾರತಕ್ಕೆ ಈ ಕಾರಿಡಾರ್ ವರದಾನ ಹೇಗೆ?

ಕ್ಯುಎಸ್ ವರ್ಲ್ಡ್ ಯೂನಿವರ್ಸಿಟಿ: ಜಾಗತಿಕ ಟಾಪ್-10 ಪಟ್ಟಿ

  1. ಎಂಐಟಿ, ಅಮೆರಿಕ
  2. ಲಂಡನ್ ಇಂಪೀರಿಯಲ್ ಕಾಲೇಜ್, ಬ್ರಿಟನ್
  3. ಸ್ಟಾನ್​​ಫೋರ್ಡ್ ಯೂನಿವರ್ಸಿಟಿ, ಅಮೆರಿಕ
  4. ಆಕ್ಸ್​​ಫರ್ಡ್ ಯೂನಿವರ್ಸಿಟಿ, ಇಂಗ್ಲೆಂಡ್
  5. ಹಾರ್ವರ್ಡ್ ಯೂನಿವರ್ಸಿಟಿ, ಅಮೆರಿಕ
  6. ಕೇಂಬ್ರಿಡ್ಜ್ ಯೂನಿವರ್ಸಿಟಿ, ಇಂಗ್ಲೆಂಡ್
  7. ಇಟಿಎಚ್ ಜುರಿಚ್, ಸ್ವಿಟ್ಜರ್​​ಲ್ಯಾಂಡ್
  8. ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್
  9. ಯುನಿವರ್ಸಿಟಿ ಕಾಲೇಜ್ ಲಂಡನ್, ಇಂಗ್ಲೆಂಡ್
  10. ಕ್ಯಾಲಿಫೋರ್ನಿಯಾ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ, ಅಮೆರಿಕ

ಈ ಟಾಪ್ 10 ಕ್ಯುಎಸ್ ಪಟ್ಟಿಯಲ್ಲಿ ಏಷ್ಯಾದ ಒಂದೇ ಯೂನಿವರ್ಸಿಟಿ ಇರುವುದು. ಅಮೆರಿಕ ಮತ್ತು ಇಂಗ್ಲೆಂಡ್ ಆಚೆ ಎರಡು ಯೂನಿವರ್ಸಿಟಿಗಳಿಗೆ. ಸಿಂಗಾಪುರ ಬಳಿಕ ಸ್ವಿಟ್ಜರ್​​ಲೆಂಡ್​​ನಲ್ಲಿ ಒಂದು ಯೂನಿವರ್ಸಿಟಿ ಮಾತ್ರವೇ ಟಾಪ್-10ನಲ್ಲಿ ಇರುವುದು.

ಕ್ಯೂಎಸ್ ಪಟ್ಟಿಯಲ್ಲಿ ಭಾರತದ ಟಾಪ್-10 ಯೂನಿವರ್ಸಿಟಿಗಳು

  1. ಐಐಟಿ ಡೆಲ್ಲಿ (123ನೇ ಸ್ಥಾನ)
  2. ಐಐಟಿ ಬಾಂಬೆ (129ನೇ ಸ್ಥಾನ)
  3. ಐಐಟಿ ಮದ್ರಾಸ್ (180ನೇ ಸ್ಥಾನ)
  4. ಐಐಟಿ ಖರಗ್​ಪುರ್ (215ನೇ ಸ್ಥಾನ)
  5. ಐಐಎಸ್​​ಸಿ ಬೆಂಗಳೂರು (219ನೇ ಸ್ಥಾನ)
  6. ಐಐಟಿ ಕಾನಪುರ್ (222ನೇ ಸ್ಥಾನ)
  7. ಡೆಲ್ಲಿ ಯೂನಿವರ್ಸಿಟಿ (328ನೇ ಸ್ಥಾನ)
  8. ಐಐಟಿ ಗುವಾಹತಿ (334ನೇ ಸ್ಥಾನ)
  9. ಐಐಟಿ ರೂರ್ಕೀ (339ನೇ ಸ್ಥಾನ)
  10. ಅಣ್ಣಾ ಯೂನಿವರ್ಸಿಟಿ (465ನೇ ಸ್ಥಾನ)

ಇದನ್ನೂ ಓದಿ: ಚಿನ್ನದ ಬೆಲೆ ಶೇ. 30 ಇಳಿಯುತ್ತೆ: ತಜ್ಞರ ಭವಿಷ್ಯ; ಈ ದರ ಕುಸಿತಕ್ಕೆ ಏನಿರಬಹುದು ಕಾರಣ?

ಭಾರತದ 54 ಯೂನಿವರ್ಸಿಟಿಗಳು ಈ 2026ರ ಕ್ಯುಎಸ್ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇವೆ. ಅತಿಹೆಚ್ಚು ಯೂನಿವರ್ಸಿಟಿಗಳನ್ನು ಪಟ್ಟಿಯಲ್ಲಿ ಹೊಂದಿರುವ ದೇಶಗಳಲ್ಲಿ ಅಮೆರಿಕ ಮೊದಲು ಬರುತ್ತದೆ. ಅಲ್ಲಿಯ 192 ಶಿಕ್ಷಣ ಸಂಸ್ಥೆಗಳು ಇದರಲ್ಲಿವೆ. ಬ್ರಿಟನ್​​ನ 90, ಚೀನಾದ 72 ಯೂನಿವರ್ಸಿಟಿಗಳಿವೆ. ನಾಲ್ಕನೇ ಸ್ಥಾನ ಭಾರತದ್ದಾಗಿದೆ. ಪಾಕಿಸ್ತಾನದ 13 ಯೂನಿವರ್ಸಿಟಿಗಳು ಇದರಲ್ಲಿ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ