CEO Salary: ಈ ಕಂಪೆನಿ ಸಿಇಒ ತನಗೆ ನೀಡಿದ ಗುರಿಯನ್ನು ಮುಟ್ಟಿದರೆ 17,529 ಕೋಟಿ ರೂ. ಪಗಾರ

| Updated By: Srinivas Mata

Updated on: Dec 16, 2021 | 7:41 PM

ಕ್ವಾಂಟಂಸ್ಕೇಪ್ ಕಾರ್ಪೊರೇಷನ್ ಅದರ ಸಿಇಒಗೆ ವಾರ್ಷಿಕ ವೇತನವಾಗಿ 230 ಕೋಟಿ ಅಮೆರಿಕನ್ ಡಾಲರ್ ವೇತನ ಪಾವತಿಗೆ ಒಪ್ಪಿಗೆ ನೀಡಿದೆ.

CEO Salary: ಈ ಕಂಪೆನಿ ಸಿಇಒ ತನಗೆ ನೀಡಿದ ಗುರಿಯನ್ನು ಮುಟ್ಟಿದರೆ 17,529 ಕೋಟಿ ರೂ. ಪಗಾರ
ಜಗದೀಪ್ ಸಿಂಗ್ (ಟ್ವಿಟರ್ ಚಿತ್ರ)
Follow us on

ಸಂಬಳದ ವಿಚಾರದಲ್ಲಿ ಅದು ಸಾವಿರಗಳಲ್ಲಿ ಇರಲಿ, ಲಕ್ಷಗಳಲ್ಲಿರಲಿ ಮತ್ತು ಕೊನೆಗೆ ಕೋಟಿಗಳಿಗೆ ತಲುಪಲಿ. ಹೀಗೊಂದು ಸ್ಟ್ಯಾಂಡರ್ಡ್ ಪ್ರಶ್ನೆ ಎದುರಾಗುತ್ತದೆ: ಯಾರಿಗೆ ಸಾಲತ್ತೆ ಸಂಬಳ? ಘನ-ಸ್ಥಿತಿಯ ಬ್ಯಾಟರಿ ಸ್ಟಾರ್ಟ್ಅಪ್ QuantumScape Corp ಷೇರುದಾರರು ಒಪ್ಪಂದಕ್ಕೆ ಸಾರ್ವಜನಿಕವಾಗಿ ಒಪ್ಪಿಕೊಂಡರು. ಅದ ಪ್ರಕಾರ, ಸ್ಟಾರ್ಟ್​ಅಪ್​ನ ಉನ್ನತ ಕಾರ್ಯನಿರ್ವಾಹಕರೊಬ್ಬರಿಗೆ ಬಹು-ಶತಕೋಟಿ ಡಾಲರ್ ವೇತನ ಪ್ಯಾಕೇಜ್ ಅನ್ನು ಅನುಮೋದಿಸಲಾಯಿತು. ಆ ಒಬ್ಬ ಪ್ರಾಕ್ಸಿ ಸಲಹೆಗಾರರಿಗೆ “ದಿಗ್ಭ್ರಮೆ ಆಗುವಂಥ” ಪ್ರಮಾಣದಲ್ಲಿ ವೇತನ ಘೋಷಣೆ ಮಾಡಲಾಯಿತು. ಒಪ್ಪಂದದ ಅಡಿಯಲ್ಲಿ ಪ್ರಾಕ್ಸಿ ಸಲಹಾ ಸಂಸ್ಥೆ ಗ್ಲಾಸ್ ಲೆವಿಸ್‌ನ ಅಂದಾಜಿನ ಪ್ರಕಾರ, ಕಂಪೆನಿಯು ವಿವಿಧ ಮೈಲುಗಲ್ಲುಗಳನ್ನು ಪೂರೈಸಿದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಪ್ ಸಿಂಗ್ ಅವರು 230 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸ್ಟಾಕ್ ಆಪ್ಷನ್​ಗಳನ್ನು ಪಡೆಯಬಹುದು. ಭಾರತದ ರೂಪಾಯಿ ಲೆಕ್ಕದಲ್ಲಿ 17,529.33 ಕೋಟಿ ಆಗುತ್ತದೆ.

ಕ್ವಾಂಟಮ್‌ಸ್ಕೇಪ್‌ನ ವಾರ್ಷಿಕ ಷೇರುದಾರರ ಸಭೆಯ ವೆಬ್‌ಕಾಸ್ಟ್‌ನಲ್ಲಿ ಬುಧವಾರ ಪ್ಯಾಕೇಜ್ ಪ್ರಾಥಮಿಕ ಮತದಲ್ಲಿ ಅಂಗೀಕರಿಸಲಾಗಿದೆ ಮತ್ತು ಅಂತಿಮ ಲೆಕ್ಕಾಚಾರವು ನಂತರ ಲಭ್ಯ ಇರುತ್ತದೆ ಎಂದು ಕಂಪೆನಿ ಹೇಳಿದೆ. “ಬಹಿರಂಗಪಡಿಸಿದ ಅನುದಾನದ ಡಾಲರ್ ಮೌಲ್ಯದ ವೆಚ್ಚ ದಿಗ್ಭ್ರಮೆಗೊಳಿಸುವಂತಿದೆ,” ಆದ್ದರಿಂದ ಪ್ಯಾಕೇಜ್ ಅನ್ನು ತಿರಸ್ಕರಿಸಲು ಷೇರುದಾರರನ್ನು ಗ್ಲಾಸ್ ಲೆವಿಸ್​ನಿಂದ ಒತ್ತಾಯವೂ ಬಂತು ಎಂದು ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ. ಸಾಂಸ್ಥಿಕ ಷೇರುದಾರರ ಸೇವೆಗಳು, ಇನ್ನೊಂದು ಸಲಹಾ ಸಂಸ್ಥೆ ಸಹ ಇದನ್ನು ವಿರೋಧಿಸಿವೆ.

ತುಂಬ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್‌ಗಳಲ್ಲಿ ದೊಡ್ಡ ವೇತನ ಪ್ಯಾಕೇಜ್‌ಗಳು ಹೆಚ್ಚು ಸಾಮಾನ್ಯವಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಟೆಸ್ಲಾ ಇಂಕ್ ಯಶಸ್ಸಿನ ನಂತರ ವಿದ್ಯುತ್ ವಾಹನ ಮಾರುಕಟ್ಟೆಯಲ್ಲಿ ನಗದು ಅಲೆಯನ್ನೇ ಎಬ್ಬಿಸಿದೆ. ಇಂತಹ ಒಪ್ಪಂದಗಳು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾಡಲು ಸಹಾಯ ಮಾಡಿವೆ ಎಂದು ಕಾರ್ಯನಿರ್ವಾಹಕ ಪರಿಹಾರ ಸಂಸ್ಥೆ ಫಾರಿಯಂಟ್ ಅಡ್ವೈಸರ್ಸ್‌ನ ಪಾಲುದಾರರಾದ ಡೇನಾ ಹ್ಯಾರಿಸ್ ಹೇಳಿದ್ದಾರೆ.

ಕನಿಷ್ಠ 15 ಕಾರ್ಪೊರೇಟ್ ನಾಯಕರು ಕಳೆದ ವರ್ಷ 100 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ವೇತನವನ್ನು ಪಡೆದಿದ್ದಾರೆ. ಇದು 2018ರಲ್ಲಿ ಮಸ್ಕ್ ಪಡೆದಿದ್ದ ಮೂರು ಪಟ್ಟಾಗುತ್ತದೆ. “ನಾವು ಸವಾಲಿನ, ಸಾಧಿಸಲು ಕಷ್ಟಕರವಾದ ಗುರಿಗಳನ್ನು ಹೊಂದಿಸುವಲ್ಲಿ ಬಲವಾಗಿ ನಂಬುತ್ತೇವೆ ಮತ್ತು ನಂತರ ಅವುಗಳನ್ನು ಮಾಡಲು ಪ್ರಯತ್ನಗಳನ್ನು ಕೇಂದ್ರೀಕರಿಸುತ್ತೇವೆ,” ಎಂದು ಕ್ವಾಂಟಮ್‌ಸ್ಕೇಪ್ ಷೇರುದಾರರಿಗೆ ಪ್ಯಾಕೇಜ್ ಅನ್ನು ಸಮರ್ಥಿಸುವ ಪತ್ರದಲ್ಲಿ ಹೇಳಿದೆ. “ಇದಕ್ಕಾಗಿಯೇ ನಾವು ಈ ಹೊಸ ಮೊತ್ತವನ್ನು ವಿಸ್ತರಿಸಲಾದ ಗುರಿಗಳ ಮೇಲೆ ಆಧರಿಸಿದ್ದೇವೆ. ಮತ್ತು ನಮ್ಮ ಪ್ರಮುಖ ಕಾರ್ಯನಿರ್ವಾಹಕರಿಗೆ ಅವುಗಳನ್ನು ಸಾಧಿಸುವುದಕ್ಕೆ ಇರುವ ಕಷ್ಟಕ್ಕೆ ಅನುಗುಣವಾಗಿ ನೀಡಿದ್ದೇವೆ,” ಎಂದು ಹೇಳಲಾಗಿದೆ.

ಫೋಕ್ಸ್​ವ್ಯಾಗನ್ ಎಜಿ ಮತ್ತು ಬಿಲ್ ಗೇಟ್ಸ್‌ರ ಹೂಡಿಕೆ ನಿಧಿಯ ಬೆಂಬಲ ಕ್ವಾಂಟಂಸ್ಕೇಪ್​ಗಿದೆ. ಅದರ ಮುಂದಿನ-ಪೀಳಿಗೆಯ ತಂತ್ರಜ್ಞಾನದ ಭರವಸೆಯ ಮೇರೆಗೆ ಕಳೆದ ವರ್ಷದ ಕೊನೆಯಲ್ಲಿ ಸುಮಾರು 5000 ಕೋಟಿ ಡಾಲರ್ ಮೌಲ್ಯವನ್ನು ಗಳಿಸಿತು. ಇದು ವಾಹನ ತಯಾರಕರಿಗೆ ಲಿಥಿಯಂ- -ಐಯಾನ್ ಬ್ಯಾಟರಿಗಳಿಗೆ ಸುರಕ್ಷಿತ, ಅಗ್ಗದ ಪರ್ಯಾಯವನ್ನು ಒದಗಿಸುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಅನೂಹ್ಯ ರೀತಿಯಲ್ಲಿ ವೇಗಗೊಳಿಸುತ್ತದೆ.

ಇದನ್ನೂ ಓದಿ: Parag Agrawal Salary: ಟ್ವಿಟರ್​ ಸಿಇಒ ಪರಾಗ್​ ಅಗರ್​ವಾಲ್​ ವಾರ್ಷಿಕ ವೇತನದ ಲೆಕ್ಕ ಇಲ್ಲಿದೆ