ಭಾರತ್ ಎಲೆಕ್ಟ್ರಾನಿಕ್ಸ್​ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್​ ನೀಡಿದ ಎಚ್​ಎಎಲ್

ಭಾರತ್ ಎಲೆಕ್ಟ್ರಾನಿಕ್ಸ್​ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್​ ನೀಡಿದ ಎಚ್​ಎಎಲ್
ಸಾಂದರ್ಭಿಕ ಚಿತ್ರ

ಎಚ್​ಎಎಲ್​ನಿಂದ ಆತ್ಮನಿರ್ಭರ್​ ಯೋಜನೆ ಅಡಿಯಲ್ಲಿ ಬಿಇಎಲ್​ ಜತೆಗೆ ರೂ. 2400 ಕೋಟಿಯ ಅತಿ ದೊಡ್ಡ ಆರ್ಡರ್ ಮಾಡಿದೆ. ಆ ಬಗ್ಗೆ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

Dec 16, 2021 | 11:57 PM

ಬೆಂಗಳೂರು: ದೇಶೀ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ, LCA ತೇಜಸ್ MklA ಕಾರ್ಯಕ್ರಮಕ್ಕಾಗಿ 20 ವಿಧದ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಜತೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ (HAL) ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ. 2023ರಿಂದ 2028ರ ವರೆಗಿನ ಐದು ವರ್ಷಗಳ ಒಪ್ಪಂದವು ರೂ. 2,400 ಕೋಟಿಗಳ ಮೌಲ್ಯದ್ದಾಗಿದೆ ಮತ್ತು ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯೂನಿಟ್‌ಗಳು (ಎಲ್‌ಆರ್‌ಯುಗಳು), ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ ಎಲ್‌ಆರ್‌ಯುಗಳನ್ನು ಪೂರೈಸುವುದನ್ನು ಒಳಗೊಂಡಿರುತ್ತದೆ. ‘ಆತ್ಮ ನಿರ್ಭರ್ ಭಾರತ್’ ಅಭಿಯಾನವನ್ನು ಉತ್ತೇಜಿಸುವ ಯಾವುದೇ ಭಾರತೀಯ ಕಂಪೆನಿಗೆ ಎಚ್‌ಎಎಲ್ ನೀಡಿದ ಅತಿದೊಡ್ಡ ಆರ್ಡರ್ ಇದಾಗಿದೆ.

“LCA ತೇಜಸ್ ಪ್ರೋಗ್ರಾಂ ಎಚ್ಎಎಲ್​, ಡಿಆರ್​ಡಿಒ ಮತ್ತು ಬಿಇಎಲ್​ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ ಮಧ್ಯದ ಬಾಂಧವ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ತೇಜಸ್ MklAಗಾಗಿ 20 ವಿಧದ ಪ್ರಮುಖ ಏವಿಯಾನಿಕ್ಸ್ LRUಗಳ ಅಭಿವೃದ್ಧಿ ಮತ್ತು ಪೂರೈಕೆಯ ಈಗಿನ ಆರ್ಡರ್ ಮೇಕ್ ಇನ್ ಇಂಡಿಯಾ ಚಟುವಟಿಕೆ ಆಗಿದೆ. ಎಚ್‌ಎಎಲ್ ಸ್ವದೇಶಿ ಉತ್ಪನ್ನಗಳಿಗೆ ಬದ್ಧವಾಗಿದೆ,” ಎಂದು ಎಚ್‌ಎಎಲ್ ಸಿಎಂಡಿ ಆರ್. ಮಾಧವನ್ ಹೇಳಿದ್ದಾರೆ. “ಪ್ರತಿಷ್ಠಿತ LCA ತೇಜಸ್ ಕಾರ್ಯಕ್ರಮಕ್ಕಾಗಿ ಎಚ್​ಎಎಲ್​ನಿಂದ ಈ ಆರ್ಡರ್​ ಸ್ವೀಕರಿಸಲು ನಮಗೆ ಸಂತೋಷವಾಗಿದೆ ಮತ್ತು ಎಚ್​ಎಎಲ್​ನೊಂದಿಗೆ ಬಲವಾದ ಪಾಲುದಾರಿಕೆ ಹಾಗೂ ಜಂಟಿ ಯಶಸ್ಸನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ,” ಎಂದು ಬಿಇಎಲ್​ ಸಿಎಂಡಿ ಆನಂದಿ ರಾಮಲಿಂಗ್ ಹೇಳಿದ್ದಾರೆ.

83 ತೇಜಸ್ ಎಂಕೆಎಲ್ಎ ಫೈಟರ್ ಫ್ಲೀಟ್‌ಗೆ ಈ ವ್ಯವಸ್ಥೆಗಳ ಪೂರೈಕೆ ಆದೇಶವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಎರಡು ವಿಭಾಗಗಳು ಬೆಂಗಳೂರು ಮತ್ತು ಪಂಚಕುಲ (ಹರ್ಯಾಣ)ದಲ್ಲಿ ಕಾರ್ಯಗತಗೊಳಿಸುತ್ತವೆ. ಎಲ್ಲ ಒಪ್ಪಂದದ ವಸ್ತುಗಳನ್ನು ಬಿಇಎಲ್​ನಿಂದ ಎಚ್​ಎಎಲ್​ಗೆ ಸನ್ನದ್ಧ ಸ್ಥಿತಿಯಲ್ಲಿ ತಲುಪಿಸಲಾಗುತ್ತದೆ. 83 ತೇಜಸ್ MkJA ಆದೇಶದ ಅಡಿಯಲ್ಲಿ IAFಗೆ ವಿತರಣೆಗಳು ಹಣಕಾಸು ವರ್ಷ 2023-24ರಿಂದ ಪ್ರಾರಂಭವಾಗುತ್ತವೆ. ಸ್ವದೇಶಿ-ನಿರ್ಮಿತ ಯುದ್ಧವಿಮಾನವು ಸ್ವದೇಶಿ ಆರ್‌ಎನ್‌ಎಚ್‌ಟಿ ಕಂಟ್ರೋಲ್ ಕಂಪ್ಯೂಟರ್‌ಗಳು, ಏರ್ ಡೇಟಾ ಕಂಪ್ಯೂಟರ್‌ಗಳನ್ನು ಹೊಂದಿದ್ದು, ಈ ಒಪ್ಪಂದದ ಅಡಿಯಲ್ಲಿ ಬಿಇಎಲ್‌ನಿಂದ ಸರಬರಾಜು ಮಾಡಲಾಗುವುದು. ಈ ವ್ಯವಸ್ಥೆಗಳನ್ನು ಡಿಆರ್‌ಡಿಒ ಮತ್ತು ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್‌ಗಳು ವಿನ್ಯಾಸಗೊಳಿಸಿವೆ ಮತ್ತು ಅಭಿವೃದ್ಧಿಪಡಿಸಿವೆ. ಎಚ್​ಎಎಲ್​ನ LCA ತೇಜಸ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಇಪಿ ಜಯದೇವ ಅವರು ಮನೋಜ್ ಜೈನ್, ಜನರಲ್ ಮ್ಯಾನೇಜರ್ (EW&A)ಗೆ ಗುತ್ತಿಗೆ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ರಕ್ಷಣಾ ಶಸ್ತ್ರಾಸ್ತ್ರಗಳ ಎರಡನೇ ಅತಿ ದೊಡ್ಡ ಆಮದುದಾರ ದೇಶ ಭಾರತ, ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ

Follow us on

Related Stories

Most Read Stories

Click on your DTH Provider to Add TV9 Kannada