Tomato: ಈ ಸೀಸನ್​ನ ಟೊಮೆಟೋ ಕಥೆ; ಹಿಮಾಚಲ ದುರ್ಗತಿ, ಇಡೀ ಭಾರತಕ್ಕೀಗ ಬೆಂಗಳೂರೇ ಗತಿ

|

Updated on: Jul 10, 2023 | 2:52 PM

Whole India Depend On Bengaluru Tomato: ಈ ಸೀಸನ್​ನಲ್ಲಿ ಭಾರತದಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುವುದು ಹಿಮಾಚಲ ಮತ್ತು ಕರ್ನಾಟಕದಲ್ಲಿ. ಈಗ ಹಿಮಾಚಲದಲ್ಲಿ ಪ್ರವಾಹ ಇರುವುದರಿಂದ ಕರ್ನಾಟದ ಟೊಮೆಟೋಗೆ ದೇಶಾದ್ಯಂತ ಬೇಡಿಕೆ ಇದೆ.

Tomato: ಈ ಸೀಸನ್​ನ ಟೊಮೆಟೋ ಕಥೆ; ಹಿಮಾಚಲ ದುರ್ಗತಿ, ಇಡೀ ಭಾರತಕ್ಕೀಗ ಬೆಂಗಳೂರೇ ಗತಿ
ಟೊಮೆಟೋ
Follow us on

ಬೆಂಗಳೂರು: ಟೊಮೆಟೋ ಬೆಲೆ ಎಗ್ಗಿಲ್ಲದೆ ಏರುತ್ತಿದೆ. ಆಗಸ್ಟ್​ವರೆಗೂ ಬೆಲೆ ಇಳಿಕೆ ಅಸಾಧ್ಯ ಎಂದು ಟಿವಿ9 ಕನ್ನಡದಲ್ಲಿ ವರದಿ ಮಾಡಿದ್ದೆವು. ಬೇಸಿಗೆ ಬಿಸಿಲು, ಮಳೆ, ಪ್ರವಾಹ ಇತ್ಯಾದಿ ಕಾರಣಕ್ಕೆ ಟೊಮೆಟೋ ಇಳುವರಿ ಕಡಿಮೆ ಆಗಿದೆ ಎಂದು ಹೇಳಲಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಈ ಸೀಸನ್​ನಲ್ಲಿ ಭಾರತದಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುವುದು (Tomato Cultivation) ಎರಡು ರಾಜ್ಯಗಳಲ್ಲಿ. ಒಂದು ಹಿಮಾಚಲಪ್ರದೇಶ, ಮತ್ತೊಂದು ಕರ್ನಾಟಕ. ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರು, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸುತ್ತಮುತ್ತಲ ಕಡೆ ಟೊಮೆಟೋ ಅತಿಹೆಚ್ಚು ಬೆಳೆಯಲಾಗುತ್ತದೆ. ಈಗ ಹಿಮಾಚಲಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಪರಿಸ್ಥಿತಿ ಇರುವುದರಿಂದ ಅಲ್ಲಿನ ಎಲ್ಲಾ ಬೆಳೆಗಳೂ ನೀರುಪಾಲಾಗುತ್ತಿವೆ. ಹಿಮಾಚಲದಿಂದ ಟೊಮೆಟೋ ಸರಬರಾಜು ಬಹುತೇಕ ನಿಂತಿದೆ. ಇಂಥ ಸ್ಥಿತಿಯಲ್ಲಿ ಬಹುತೇಕ ಇಡೀ ಭಾರತಕ್ಕೆ ಟೊಮೆಟೋಗೆ ಬೆಂಗಳೂರೇ ಗತಿಯಾಗಿದೆ.

ಕರ್ನಾಟಕದಲ್ಲಿ ಟೊಮೆಟೋ ಇಳುವರಿ ಕಡಿಮೆ ಆಗಲು ಏನು ಕಾರಣ?

ಕಳೆದ ವರ್ಷ ರಾಜ್ಯದ ಟೊಮೆಟೋ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸಿದ್ದರು. ಬೆಲೆ ತೀವ್ರ ಕುಸಿದುಹೋಗಿತ್ತು. ರೈತರು ಬೀದಿಗೆ ಬೀಳುವಂತಾಗಿತ್ತು. ಆ ಕಹಿ ಇನ್ನೂ ಹಸಿರಾಗಿದ್ದರಿಂದ ಈ ವರ್ಷ ರೈತರು ಹೆಚ್ಚು ಟೊಮೆಟೋ ಬಿತ್ತನೆ ಮಾಡಲಿಲ್ಲ. ಈ ಅಲ್ಪ ಬೆಳೆಗೆ ವೈರಸ್ ರೋಗವೂ ಅಂಟಿಕೊಂಡು ಇಳುವರಿಯೂ ಕಡಿಮೆ ಆಗಿದೆ. ಈತ ತಕ್ಕಮಟ್ಟಿಗೆ ಟೊಮೆಟೋ ಬೆಳೆದವನಿಗೆ ಕೈತುಂಬ ಹಣವಂತೂ ಸಿಕ್ಕಿದೆ. ಆದರೆ, ಜನಸಾಮಾನ್ಯನಿಗೆ ಟೊಮೆಟೋ ತೀರಾ ಹುಳಿಯಾಗುವಷ್ಟು ಬೆಲೆಯ ಹೊಡೆತ ಬಿದ್ದಿದೆ.

ಇದನ್ನೂ ಓದಿTomato: ಪೆಟ್ರೋಲ್​ಗಿಂತ ದುಬಾರಿಯಾದ ಟೊಮೆಟೋ ಬೆಲೆ ಯಾವಾಗ ಇಳಿಯುತ್ತೆ? ತಜ್ಞರು ಹೇಳೋದೇನು? ಇಲ್ಲಿದೆ ಡೀಟೇಲ್ಸ್

ಆಗಸ್ಟ್​ನಲ್ಲಿ ಟೊಮೆಟೋ ಬೆಲೆಯಲ್ಲಿ ಸುಧಾರಣೆ ನಿರೀಕ್ಷೆ

ಭಾರತದಲ್ಲಿ ಟೊಮೆಟೋ ಬೆಳೆಯುವ ಪ್ರಮುಖ ರಾಜ್ಯಗಳು ಹಿಮಾಚಲ ಮತ್ತು ಕರ್ನಾಟಕ ಮಾತ್ರವಲ್ಲ, ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಒಡಿಶಾ, ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಮ್ ರಾಜ್ಯಗಳೂ ಇವೆ. ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರದ ಸೋಲಾಪುರ, ಪುಣೆ, ನಾಶಿಕ್ ಮತ್ತು ಸೋಲನ್​ನಿಂದ ಟೊಮೆಟೋ ಬೆಳೆ ಮಾರುಕಟ್ಟೆಗೆ ಬರತೊಡಗುತ್ತವೆ. ಆಗಸ್ಟ್ ನಂತರ ಟೊಮೆಟೋ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ.

ಕೋಸು ಇತ್ಯಾದಿ ತರಕಾರಿಗಳ ಬೆಲೆ ಹೆಚ್ಚಳ?

ಹಿಮಾಚಲಪ್ರದೇಶದಲ್ಲಿ ಟೊಮೆಟೋ ಮಾತ್ರ, ಈ ಸೀಸನ್​ನಲ್ಲಿ ಎಲೆ ಕೋಸು, ಹೂಕೋಸು (ನೌಕಲ್ ಗೆಡ್ಡೆ), ಕ್ಯಾಪ್ಸಿಕಮ್ ಇತ್ಯಾದಿ ತರಕಾರಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮೇಲಿನ ತರಕಾರಿಗಳು ದೇಶದ ಅನೇಕ ರಾಜ್ಯಗಳಿಗೆ ಸರಬರಾಜಾಗುತ್ತವೆ. ಆದರೆ, ಈಗ ಮಳೆ ಮತ್ತು ಪ್ರವಾಹದಿಂದಾಗಿ ತರಕಾರಿ ಬೆಳೆಗಳು ಕುಂಠಿತಗೊಂಡಿವೆ. ಪರಿಣಾಮವಾಗಿ ಇವುಗಳ ಬೆಲೆಯೂ ಏರಿಕೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ