Twitter: ಟ್ವಿಟ್ಟರ್ ಖರೀದಿಸುವಂತೆ ಮಾಡಿದ್ದ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ ಕೇಸ್ ದಾಖಲು

Elon Musk Files Case Against Watchtell: ಟ್ವಿಟ್ಟರ್ ಖರೀದಿಯಿಂದ ಹಿಂದಕ್ಕೆ ಸರಿಯುತ್ತಿದ್ದ ತನ್ನನ್ನು ಕಾನೂನು ಕಟ್ಟಳೆಯಿಂದ ಕಟ್ಟಿಹಾಕಿದ್ದ ವಾಚ್​ಟೆಲ್ ಎಂಬ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ ಮೊಕದ್ದಮೆಯೊಂದನ್ನು ಹೂಡಿದ್ದಾರೆ.

Twitter: ಟ್ವಿಟ್ಟರ್ ಖರೀದಿಸುವಂತೆ ಮಾಡಿದ್ದ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ ಕೇಸ್ ದಾಖಲು
ಇಲಾನ್ ಮಸ್ಕ್
Follow us
|

Updated on: Jul 10, 2023 | 12:19 PM

ಸ್ಯಾನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಖರೀದಿಯಿಂದ ಹಿಂದಕ್ಕೆ ಸರಿಯುವ ತಮ್ಮ ಪ್ರಯತ್ನವನ್ನು ವಿಫಲಗೊಳಿಸಿದ್ದ ವಾಚ್​ಟೆಲ್, ಲಿಪ್ಟನ್, ರೋಸೆನ್ ಅಂಡ್ ಕಾಟ್ಜ್ ಎಂಬ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ (Elon Musk) ಮೊಕದ್ದಮೆ ಹಾಕಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್​ನಲ್ಲಿ ಕಳೆದ ವಾರ ಎಕ್ಸ್ ಕಾರ್ಪ್ (X Corp) ಸಂಸ್ಥೆ ದೂರು ದಾಖಲಿಸಿದೆ. ಎಕ್ಸ್ ಕಾರ್ಪ್ ಎಂಬುದು ಇಲಾನ್ ಮಸ್ಕ್ ಮಾಲೀಕತ್ವದ ಕಂಪನಿ. ಟ್ವಿಟ್ಟರ್ ಖರೀದಿ ಒಪ್ಪಂದ ಪೂರ್ಣಗೊಳ್ಳುವಂತೆ ಮಾಡಲು ವಾಚ್​ಟೆಲ್ ಸಂಸ್ಥೆ 90 ಮಿಲಿಯನ್ ಡಾಲರ್​ನಷ್ಟು (740 ಕೋಟಿ ರೂ) ದೊಡ್ಡ ಮೊತ್ತದ ಶುಲ್ಕವನ್ನು ಪಡೆದಿದೆ ಎಂಬುದು ಇಲಾನ್ ಮಸ್ಕ್ ಅವರ ಆರೋಪ.

ಏನಿದು ಮಸ್ಕ್ ರಗಳೆ?

ಇಲಾನ್ ಮಸ್ಕ್ ಹಿಂದೊಮ್ಮೆ (2022ರ ಆರಂಭದಲ್ಲಿ) ‘ಹಾಗೇ ಸುಮ್ಮನೆ’ ಟ್ವಿಟ್ಟರ್ ಖರೀದಿಗೆ ಕೈಹಾಕಿದ್ದರು. ಅದನ್ನು ಕೊಳ್ಳುವ ಉದ್ದೇಶವಿತ್ತೋ ಇಲ್ಲವೋ ಸ್ಪಷ್ಟವಿರಲಿಲ್ಲ. 44 ಬಿಲಿಯನ್ ಡಾಲರ್ ಹಣಕ್ಕೆ ಪ್ರೊಪೋಸಲ್ ಇಟ್ಟಿದ್ದರು. ಆದರೆ, ಇನ್ನೇನು ಒಪ್ಪಂದ ಆಗಬೇಕು ಎನ್ನುವಷ್ಟರಲ್ಲಿ ಇಲಾನ್ ಮಸ್ಕ್ ತಾನು ಟ್ವಿಟ್ಟರ್ ಖರೀದಿಸುವುದಿಲ್ಲ ಎಂದು ಹಿಂದಕ್ಕೆ ಹೆಜ್ಜೆ ಇಟ್ಟಿದ್ದರು. ಇದು ಆಗಿದ್ದು 2022ರ ಅಕ್ಟೋಬರ್ 27ರಲ್ಲಿ. ಆದರೆ, ಟ್ವಿಟ್ಟರ್ ಸಂಸ್ಥೆ ಇದನ್ನು ಆಕ್ಷೇಪಿಸಿ ನ್ಯಾಯಾಲಯದ ಮೊರೆಹೋಯಿತು. ಕೊನೆಗೆ ಇಲಾನ್ ಮಸ್ಕ್ ಅವರು 44 ಬಿಲಿಯನ್ ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಅನ್ನು ಖರೀದಿಸಬೇಕಾಯಿತು. ಮಸ್ಕ್ ಆರೋಪದ ಪ್ರಕಾರ ಟ್ವಿಟ್ಟರ್​ನ ಉನ್ನತ ಸ್ತರದ ಅಧಿಕಾರಿಗಳು ವಾಚ್​ಟೆಲ್ ಸಂಸ್ಥೆಗೆ ಈ ಕೇಸ್ ವಹಿಸಿದ್ದಾರೆ.

ಇದನ್ನೂ ಓದಿIT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

ವಾಚ್​ಟೆಲ್ ಕೇಸ್ ವಹಿಸಿದರೆ ಮಸ್ಕ್​ಗೇನು ಆಕ್ಷೇಪ?

ಗ್ರಾಹಕರ ಕಾನೂನು ವ್ಯಾಜ್ಯಗಳನ್ನು ನಿಭಾಯಿಸುವುದು ಯಾವುದೇ ವಕೀಲರ ಕರ್ತವ್ಯ. ವಾಚ್​ಟೆಲ್ ಸಂಸ್ಥೆ ಕೂಡ ಇದೇ ಕೆಲಸ ಮಾಡಿದ್ದು. ಟ್ವಿಟ್ಟರ್ ಖರೀದಿಸುತ್ತೇನೆಂದು ಹೇಳಿ ಮಸ್ಕ್ ನಂತರ ಹಿಂದಕ್ಕೆ ಸರಿದರೆ ಕಂಪನಿಯ ಘನತೆಗೆ ಧಕ್ಕೆ ಆಗುವುದು ಸಹಜ. ಇದು ಹಾಗೂ ಕೆಲ ಕಾನೂನು ಮತ್ತು ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ವಾಚ್​ಟೆಲ್ ಸಂಸ್ಥೆ ಕೋರ್ಟ್​ನಲ್ಲಿ ಮಸ್ಕ್ ವಿರುದ್ಧ ಕೇಸ್ ಗೆದ್ದಿತು.

ಈಗ ಇಲಾನ್ ಮಸ್ಕ್ ಅವರು ವಾಚ್​ಟೆಲ್ ವಿರುದ್ಧ ಕೇಸ್ ಹಾಕಿರುವುದು ಆ ವಿಚಾರಕ್ಕಲ್ಲ. ಟ್ವಿಟ್ಟರ್​ನಿಂದ ಈ ಕೇಸ್​ಗಾಗಿ 90 ಮಿಲಿಯನ್ ಡಾಲರ್ ಶುಲ್ಕ ಪಡೆದಿರುವುದಕ್ಕಾಗಿ. ಯಾಕೆಂದರೆ, ವಾಚ್​ಟೆಲ್ ಸಂಸ್ಥೆ ತನ್ನ ಹಿಂದಿನ ಮೊಕದ್ದಮೆಯೊಂದರಲ್ಲಿ ಕಡಿಮೆ ಶುಲ್ಕ ಪಡೆದಿತ್ತು. ಆದರೆ, ಟ್ವಿಟ್ಟರ್ ಪ್ರಕರಣದಲ್ಲಿ ಅಷ್ಟೊಂದು ಶುಲ್ಕ ಹೇಗೆ ಪಡೆಯಿತು ಎಂಬುದು ಮಸ್ಕ್ ಪ್ರಶ್ನೆ. ಹೆಚ್ಚುವರಿ ಶುಲ್ಕವನ್ನು ವಾಪಸ್ ಕೊಡಿಸುವಂತೆ ಅವರು ಈಗ ಸ್ಯಾನ್ ಫ್ರಾನ್ಸಿಸ್ಕೋದ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ.

ಇದನ್ನೂ ಓದಿTelecom vs Whatsapp: ಭಾರತೀಯ ಟೆಲಿಕಾಂ ಕಂಪನಿಗಳ ಆದಾಯ ನುಂಗಿದ ವಾಟ್ಸಾಪ್ ಇತ್ಯಾದಿ ಆ್ಯಪ್​ಗಳು

ಟ್ವಿಟ್ಟರ್ ಸಹವಾಸ ಬೇಡ ಎಂದು ಹಿಂದಕ್ಕೆ ಸರಿಯುತ್ತಿದ್ದ ಇಲಾನ್ ಮಸ್ಕ್ ಆ ಕೇಸ್ ಬಳಿಕ ಖರೀದಿಸುವುದು ಅನಿವಾರ್ಯ ಆಗಿತ್ತು. ಟ್ವಿಟ್ಟರ್ ಖರೀದಿ ಬಳಿಕ ಮುಕ್ಕಾಲು ಪಾಲು ಉದ್ಯೋಗಿಗಳನ್ನು ಮಸ್ಕ್ ಲೇ ಆಫ್ ಮಾಡಿದ್ದರು. ಟ್ವಿಟ್ಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್, ಕಾನೂನು ವಿಭಾಗದ ಮುಖ್ಯಸ್ಥೆಯಾಗಿದ್ದ ವಿಜಯಾ ಗದ್ದೆ ಮೊದಲಾದ ಟಾಪ್ ಎಕ್ಸಿಕ್ಯೂಟಿವ್​ಗಳು ಕೆಲಸ ತೊರೆಯಬೇಕಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ