ನವದೆಹಲಿ, ಜನವರಿ 19: ಅಯೋಧ್ಯೆಯ ರಾಮಜನ್ಮಭೂಮಿ ಎನ್ನಲಾದ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ (Ram Lalla Pran Pratishta) ಕಾರ್ಯಕ್ರಮ ಜನವರಿ 22ರಂದು ನೆರವೇರುತ್ತಿದೆ. ಅಂದು ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಿಗೆ ಅರ್ಧದಿನ ರಜೆ ನೀಡಲಾಗಿದೆ. ಮಧ್ಯಾಹ್ನ 2:30ರವರೆಗೂ ಕಚೇರಿಗಳು ಬಂದ್ ಆಗಿರುತ್ತವೆ. ಉತ್ತರಪ್ರದೇಶ ಸರ್ಕಾರ ಅಂದು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ರಜೆ ಘೋಷಿಸಿದೆ. ಆದರೆ, ಷೇರು ವಿನಿಮಯ ಮಾರುಕಟ್ಟೆಗಳಾದ ಬಿಎಸ್ಇ ಮತ್ತು ಎನ್ಎಸ್ಇ (stock markets) ಜನವರಿ 22ರಂದು ಕಾರ್ಯನಿರ್ವಹಿಸುತ್ತವಾ ಎಂಬ ಗೊಂದಲ ಬಹಳ ಮಂದಿಗೆ ಇದೆ. ಆದರೆ, ಜನವರಿ 22ರಂದು ಷೇರುಪೇಟೆಗೆ ರಜೆ ಇರುವುದಿಲ್ಲ. ಸೋಮವಾರ ಆಗಿರುವ ಅಂದು ಷೇರು ಮಾರುಕಟ್ಟೆಯಲ್ಲಿ ಯಥಾ ಪ್ರಕಾರ ಬಿಸಿನೆಸ್ ನಡೆಯುತ್ತದೆ.
ಷೇರು ಮಾರುಕಟ್ಟೆ ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ರಜೆ. ಆದರೆ, ಈ ಶನಿವಾರ, ಅಂದರೆ ನಾಳೆ (ಜ. 20) ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಎರಡು ಸ್ಪೆಷಲ್ ಲೈವ್ ಟ್ರೇಡಿಂಗ್ ಸೆಷನ್ಸ್ ನಡೆಸುತ್ತಿವೆ. ಈ ಲೈವ್ ಸೆಷನ್ಸ್ ಮೂಲಕ ಡಿಆರ್ ಸೈಟ್ಗೆ ವರ್ಗಾಯಿಸುವ ಉದ್ದೇಶ ಇದೆ.
ಮೊದಲ ಸೆಷನ್ ಬೆಳಗ್ಗೆ 9:15ಕ್ಕೆ ಆರಂಭವಾಗಿ 10 ಗಂಟೆಗೆ ಮುಗಿಯುತ್ತದೆ. ಎರಡನೇ ಸೆಷನನ್ 11:30ರಿಂದ 12:30ರವರೆಗೂ ಇರುತ್ತದೆ.
ಇದನ್ನೂ ಓದಿ: 10 Years of India: ಕಳೆದ 10 ವರ್ಷದಲ್ಲಿ ದೇಶದ ಆರ್ಥಿಕ, ಹಣಕಾಸು ವ್ಯವಸ್ಥೆಯಲ್ಲಿ ಆದ ಮಹತ್ವದ ಪರಿವರ್ತನೆಗಳಿವು…
ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆಗೆ ನಿಯಮಿತವಾಗಿ ರಜೆ ಇರುತ್ತದೆ. ಅದು ಬಿಟ್ಟು ಈ ವರ್ಷ ಇನ್ನೂ ಹಲವು ರಜೆಗಳಿವೆ. ಅವುಗಳ ಪಟ್ಟಿ ಇಲ್ಲಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ