Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ ಸಂಸ್ಥೆಗೆ ಟಾಟಾ ಹೂಡಿಕೆ

ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ "ಗುಡ್ ಫೆಲ್ಲೋಸ್" ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ.

Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ  ಸಂಸ್ಥೆಗೆ ಟಾಟಾ ಹೂಡಿಕೆ
Ratan Tata
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 18, 2022 | 11:06 AM

ಮುಂಬೈ: ಹಿರಿಯ ನಾಗರಿಕರಿಗರಿಗೆಂದೇ ಆರಂಭಿಸಿರುವ “ಗುಡ್ ಫೆಲ್ಲೋಸ್” ಸಂಸ್ಥೆಯ ನೆರವಿಗೆ ಉದ್ಯಮಿ ರತನ್ ಟಾಟಾ ನಿಂತಿದ್ದಾರೆ. ಮಾದರಿ ಸಾಮಾಜಿಕ ಕೆಲಸದ ಮೂಲಕವೇ ಖ್ಯಾತಿ ಗಳಿಸಿಕೊಂಡಿರುವ ಟಾಟಾ ಮತ್ತೊಂದು ಮಾದರಿ ಹೆಜ್ಜೆ ಇಟ್ಟಿದ್ದಾರೆ. ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಕಗೆ ಈ ಸಂಸ್ಥೆ ಕಂಪಾನಿಯನ್ ಗಳನ್ನು ನೀಡುತ್ತದೆ. ಅಂದರೆ ಅವರಿಗೆ ಆತ್ಮೀಯರನ್ನು ನೇಮಿಸಿಕೊಡಲಾಗುತ್ತದೆ.

ಈ ಯುವಕರ ತಂಡ ಹಿರಿಯ ನಾಗರಿಕರನ್ನು ವಾರಕ್ಕೆ ಮೂರು ಸಾರಿ ಭೇಟಿ ಮಾಡುತ್ತಾರೆ. ಪ್ರತಿ ಸಾರಿ ಭೇಟಿಯಾದಾಗ 4 ಗಂಟೆ ಕಳೆಯುತ್ತಾರೆ. ಹಿರಿಯರ ನೋವು ಆಲಿಸುವುದು. ಅವರೊಂದಿಗೆ ಮಾತು-ಕತೆ, ಆಟ ಆಡುವುವುದು, ಸಾಂತ್ವನ ಹೇಳುವ ಕೆಲಸ ಈ ಸಮಯದಲ್ಲಿ ಮಾಡುತ್ತಾರೆ.

ಟಾಟಾ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿರುವ 25 ವರ್ಷದ ಶಂತನು ನಾಯ್ಡು ಸ್ಥಾಪನೆ ಮಾಡಿರುವ ಸಂಸ್ಥೆಗೆ ಟಾಟಾ ಸಂಸ್ಥೆ ಹಣ ಹೂಡಿದೆ. ರತನ್ ಟಾಟಾ ಅವರ ಕಚೇರಿಯಲ್ಲಿ 2018 ರಿಂದ ಕಾರ್ಯನಿರ್ವಹಿಸುತ್ತಿರುವ ಶಂತನು ಹೊಸ ಆಲೋಚನೆಗೆ ಟಾಟಾ ಬೆಂಬಲ ನೀಡಿದ್ದಾರೆ. ಶಂತನು ಟಾಟಾ ಗ್ರೂಪ್ ನ ಜನರಲ್ ಮ್ಯಾನೇಜರ್ ಆಗಿದ್ದು ರತನ್ ಟಾಟಾ ಅವರೊಂದಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.

50 ಮಿಲಿಯನ್ ಗೂ ಅಧಿಕ ಹಿರಿಯರು ಒಬ್ಬಂಟಿಯಾಗಿ ಜೀವನ ಕಳೆಯುವಂತಹ ಸ್ಥಿತಿ ಇದೆ. ಇದೆ ಮಾಹಿತಿ ಆಧಾರವಾಗಿಟ್ಟುಕೊಂಡು ಸಂಸ್ಥೆ ಹುಟ್ಟುಹಾಕಿದ್ದೇನೆ ಎಂದು ಶಂತನು ತಿಳಿಸಿದ್ದಾರೆ.

ವಯಸ್ಸಾದ ಮೇಲೆ ಒಬ್ಬಂಟಿಯಾಗಿರುವುದು ಎಷ್ಟು ಕಷ್ಟವೆಂದು ಹೇಳಲಾಗದು. ಹಾಗಾಗಿ ಇದರಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ರತನ್ ಟಾಟಾ ತಿಳಿಸಿದರು. ಗುಡ್‌ಫೆಲೋಸ್ ಸಂಸ್ಥೆ ಎರಡು ತಲೆಮಾರುಗಳನ್ನು ಒಂದು ಮಾಡುತ್ತಿದೆ. ಆಧುನಿಕ ಜಗತ್ತಿನ ಪರಿಣಾಮ ಹುಟ್ಟಿಕೊಂಡ ಸಾಮಾಜಿಕ ಸಮಸ್ಯೆಯ ಪರಿಹಾರಕ್ಕೆ ಇದು ನೆರವಾಗಬಲ್ಲದು. ಅಂಗವೈಕಲ್ಯ ಇರುವ ಜನರ ನೆರವಿಗೂ ಮುಂದಿನ ದಿನಗಳಲ್ಲಿ ನಿಲ್ಲಲಿದ್ದೇವೆ ಎಂದು ಟಾಟಾ ಇದೇ ಸಂದರ್ಭದಲ್ಲಿ ಹೇಳಿದರು.

Published On - 11:05 am, Thu, 18 August 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್