LIC: ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಷೇರಿನ ಪ್ರಮಾಣ ಹೆಚ್ಚಿಸಲು ಎಲ್​ಐಸಿಗೆ ಅನುಮತಿಸಿದ ಆರ್​ಬಿಐ

| Updated By: Srinivas Mata

Updated on: Dec 11, 2021 | 8:25 AM

ಇಂಡಸ್​ಇಂಡ್​ ಬ್ಯಾಂಕ್​ನಲ್ಲಿ ಷೇರಿನ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಜೀವ ವಿಮಾ ನಿಗಮಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅನುಮತಿ ನೀಡಿದೆ.

LIC: ಇಂಡಸ್​ಇಂಡ್ ಬ್ಯಾಂಕ್​ನಲ್ಲಿ ಷೇರಿನ ಪ್ರಮಾಣ ಹೆಚ್ಚಿಸಲು ಎಲ್​ಐಸಿಗೆ ಅನುಮತಿಸಿದ ಆರ್​ಬಿಐ
ಪ್ರಾತಿನಿಧಿಕ ಚಿತ್ರ
Follow us on

ಇಂಡಸ್​ಇಂಡ್ ಬ್ಯಾಂಕ್​ ಶುಕ್ರವಾರದಂದು ಹೇಳಿರುವ ಪ್ರಕಾರ, ಬ್ಯಾಂಕ್‌ನಲ್ಲಿನ ಷೇರುಗಳ ಪ್ರಮಾಣವನ್ನು ಸುಮಾರು ಶೇ 10ಕ್ಕೆ ಹೆಚ್ಚಿಸಲು ಜೀವ ವಿಮಾ ನಿಗಮಕ್ಕೆ (LIC) ಆರ್‌ಬಿಐ ಅನುಮೋದನೆ ನೀಡಿದೆ. ಖಾಸಗಿ ಬ್ಯಾಂಕ್ ಡಿಸೆಂಬರ್ 9, 2021ರಂದು ಆರ್‌ಬಿಐನಿಂದ ಸೂಚನೆಯನ್ನು ಸ್ವೀಕರಿಸಿದೆ. ಇದು ಬ್ಯಾಂಕ್​ನ ಷೇರುದಾರ ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ)ಗೆ ತನ್ನ ಅನುಮೋದನೆಯನ್ನು ನೀಡಿದ್ದು, ಒಟ್ಟು ನೀಡಲಾದ ಮತ್ತು ಪಾವತಿಸಿದ ಬಂಡವಾಳದ ಶೇ 9.99ರ ವರೆಗೆ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಿದೆ. ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಿದೆ.

ಅನುಮೋದನೆಯು ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ
ಇಂಡಸ್​ಇಂಡ್ ಬ್ಯಾಂಕ್‌ನ ಒಟ್ಟು ವಿತರಿಸಿದ ಮತ್ತು ಪಾವತಿಸಿದ ಬಂಡವಾಳದ ಶೇ 4.95ರಷ್ಟನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿಯು ಹೊಂದಿದೆ. ಆರ್‌ಬಿಐನಿಂದ ಅನುಮೋದನೆಯು ‘ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳ ಸ್ವಾಧೀನಕ್ಕೆ ಪೂರ್ವ ಅನುಮೋದನೆ’ ಹಾಗೂ ಸೆಬಿಯ ನಿಯಮಗಳು ಮತ್ತು ಯಾವುದೇ ಮಾರ್ಗಸೂಚಿಗಳು ಅಥವಾ ನಿಯಮಾವಳಿಗಳ ನಿರ್ದೇಶನಕ್ಕೆ ಒಳಪಟ್ಟಿರುತ್ತದೆ.

ಮೊದಲ ಐದು ವರ್ಷಗಳ ಕಾರ್ಯಾಚರಣೆಗಳಲ್ಲಿ ಅನಿಯಂತ್ರಿತ ಪ್ರವರ್ತಕ ಷೇರುಗಳನ್ನು ಅನುಮತಿಸುವ ಮೂಲಕ ರಿಸರ್ವ್ ಬ್ಯಾಂಕ್ ಕಳೆದ ತಿಂಗಳು ಖಾಸಗಿ ವಲಯದ ಬ್ಯಾಂಕ್‌ಗಳ ಕಾರ್ಪೊರೇಟ್ ಮಾಲೀಕತ್ವದ ಬಗ್ಗೆ ತನ್ನ ಕಾರ್ಯನಿರತ ಗುಂಪಿನ ಹೆಚ್ಚಿನ ಶಿಫಾರಸುಗಳನ್ನು ಸ್ವೀಕರಿಸಿದೆ. 15 ವರ್ಷಗಳ ನಂತರ ಶೇ 15ರಷ್ಟು ಮತ್ತು ಹೊಸ ಬಂಡವಾಳದ ಅಗತ್ಯಗಳನ್ನು ಶೇ 26ಕ್ಕೆ ಏರಿಸಲು ಶಿಫಾರಸು ಮಾಡಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ನಂತಹ ಬ್ಯಾಂಕ್‌ಗಳಿಗೆ ಇದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಅನುಮೋದನೆಯು ಡಿಸೆಂಬರ್ 8, 2022 ರವರೆಗಿನ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಮಧ್ಯಾಹ್ನದ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ 947 ರೂಪಾಯಿ ಇತ್ತು.

ಇದನ್ನೂ ಓದಿ: LIC Policyholders: ಐಪಿಒಗಾಗಿ ಪಾಲಿಸಿ ಜತೆಗೆ ಆಧಾರ್ ಜೋಡಣೆ ಮಾಡಲು ಪಾಲಿಸಿದಾರರಿಗೆ ಎಲ್​ಐಸಿ ಸೂಚನೆ