Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI ಚಿನ್ನದ ಮೀಸಲು: ಜುಲೈ ತ್ರೈಮಾಸಿಕದಲ್ಲಿ ಆರ್‌ಬಿಐ ಎಷ್ಟು ಚಿನ್ನ ಖರೀದಿಸಿದೆ ಗೊತ್ತಾ? ವಿವರ ಇಲ್ಲಿದೆ

ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್‌ಬಿಐ 9 ಟನ್ ಚಿನ್ನವನ್ನು ಖರೀದಿಸಿದೆ. ಹಾಗೆಯೇ, ಗ್ಲೋಬಲ್ ಸೆಂಟ್ರಲ್ ಬ್ಯಾಂಕ್ ಒಟ್ಟು 337 ಟನ್ ಬಂಗಾರವನ್ನು ಖರೀದಿಸಿದೆ. ಈ ಕಾರಣದಿಂದಾಗಿ, ಕಳೆದ ತ್ರೈಮಾಸಿಕದಲ್ಲಿ ಅಂದರೆ ಜುಲೈ-ಸೆಪ್ಟೆಂಬರ್‌ನಲ್ಲಿ ಆ ದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಗಮನಾರ್ಹವಾಗಿ ಹೆಚ್ಚಾಗಿದೆ.

RBI ಚಿನ್ನದ ಮೀಸಲು: ಜುಲೈ ತ್ರೈಮಾಸಿಕದಲ್ಲಿ ಆರ್‌ಬಿಐ ಎಷ್ಟು ಚಿನ್ನ ಖರೀದಿಸಿದೆ ಗೊತ್ತಾ? ವಿವರ ಇಲ್ಲಿದೆ
ಜುಲೈ ತ್ರೈಮಾಸಿಕದಲ್ಲಿ ಆರ್‌ಬಿಐ ಎಷ್ಟು ಚಿನ್ನ ಖರೀದಿಸಿದೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on:Nov 24, 2023 | 3:05 PM

ನಮ್ಮ ದೇಶದ ಜನರಷ್ಟೇ ಅಲ್ಲ; ಪ್ರಪಂಚದಲ್ಲಿ ಚಿನ್ನ ಎಂದರೆ ಎಲ್ಲರಿಗೂ ಇಷ್ಟ ಇಷ್ಟ. ಯಾವುದೇ ಶುಭ ಸಮಾರಂಭ ಅಥವಾ ಹಬ್ಬ ಬಂದಾಗ ನಮ್ಮ ಮನಸ್ಸಿಗೆ ಬರುವ ಮೊದಲ ಆಲೋಚನೆಯೇ ಚಿನ್ನ. ಕೆಲವು ಹಬ್ಬಗಳು ಚಿನ್ನವನ್ನು ಖರೀದಿಸುವುದಕ್ಕಾಗಿಯೇ (gold purchase) ಇದೆ. ಆದ್ದರಿಂದ ನಾವು ಈ ಹಳದಿ ಲೋಹದ ಬಗ್ಗೆ ಎಷ್ಟು ಮೌಲ್ಯ, ವ್ಯಾಮೋಹವನ್ನು ಹೊಂದಿದ್ದೇವೆ ಎಂಬುದು ನಾವು ಅರ್ಥಮಾಡಿಕೊಳ್ಳಬಹುದು. ಇನ್ನು ನಮ್ಮ ದೇಶದಲ್ಲಿ ಚಿನ್ನದ ಮೇಲಿನ ವ್ಯಾಮೋಹ ಕೇವಲ ಜನರಿಗೆ ಮಾತ್ರವೇ ಸೀಮಿತವಾಗಿಲ್ಲ. ಚಿನ್ನದ ಪ್ರೇಮಿಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI  ಆರ್‌ಬಿಐ) ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತೆ ಎಂದರೆ ಸ್ವಲ್ಪ ಉತ್ಪ್ರೇಕ್ಷೆಯಂತೆ ತೋರುತ್ತದೆ. ಆದರೆ ಇದು ವಾಸ್ತವ. ಆರ್‌ಬಿಐ ಏಕಕಾಲದಲ್ಲಿ ಟನ್‌ಗಳಷ್ಟು ಬಂಗಾರವನ್ನು ಖರೀದಿಸಿ, ತನ್ನಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಈಗ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೋಡೋಣ.

RBI ನಿಂದ ಚಿನ್ನ ಖರೀದಿ ಎಂದರೆ ಎಷ್ಟು.. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್‌ಬಿಐ 9 ಟನ್ ಚಿನ್ನವನ್ನು ಖರೀದಿಸಿದೆ. ಹಾಗೆಯೇ, ಗ್ಲೋಬಲ್ ಸೆಂಟ್ರಲ್ ಬ್ಯಾಂಕ್ ಒಟ್ಟು 337 ಟನ್ ಬಂಗಾರವನ್ನು ಖರೀದಿಸಿದೆ. ಈ ಕಾರಣದಿಂದಾಗಿ, ಕಳೆದ ತ್ರೈಮಾಸಿಕದಲ್ಲಿ ಅಂದರೆ ಜುಲೈ-ಸೆಪ್ಟೆಂಬರ್‌ನಲ್ಲಿ ಆ ದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಗಮನಾರ್ಹವಾಗಿ ಹೆಚ್ಚಾಗಿದೆ. ವಿಶ್ವ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ, ಸೆಪ್ಟೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಅಧಿಕೃತವಾಗಿ 806.7 ಟನ್ ಚಿನ್ನದ ನಿಕ್ಷೇಪ ಇದೆ. ಈ ವರ್ಷ ಇದುವರೆಗೆ 19.3 ಟನ್ ಚಿನ್ನ ಉತ್ಪಾದನೆಯಾಗಿದೆ. ಆರ್‌ಬಿಐ 2017 ರಿಂದ ಚಿನ್ನ ಖರೀದಿ ಮೇಲೆ ತನ್ನ ಆಸಕ್ತಿಯನ್ನು ಹೆಚ್ಚಿಸಿದೆ. ಅಂದಿನಿಂದ ಪ್ರಸಕ್ತ ವರ್ಷದವರೆಗೆ 248.9 ಟನ್ ಬಂಗಾರವನ್ನು ಖರೀದಿಸಿದೆ ಎಂದು WGCC ಬಹಿರಂಗಪಡಿಸಿದೆ.

ಸೆಪ್ಟೆಂಬರ್ 29 ರ ಹೊತ್ತಿಗೆ ಭಾರತದ ಒಟ್ಟು ವಿದೇಶಿ ವಿನಿಮಯ ಸಂಗ್ರಹವು ಪ್ರಸ್ತುತ $586.9 ಬಿಲಿಯನ್ ಆಗಿದೆ. ಇವುಗಳಲ್ಲಿ ಚಿನ್ನದ ಮೌಲ್ಯವು $43.7 ಶತಕೋಟಿ ಅಥವಾ ಒಟ್ಟು ಮೀಸಲುಗಳ 7.44% ಎಂದು ಅಕ್ಟೋಬರ್ 6 ರಂದು ಆರ್‌ಬಿಐ ಸಾಪ್ತಾಹಿಕ ಅಂಕಿಅಂಶ ಸಪ್ಲಿಮೆಂಟ್ ಹೇಳಿದೆ. ನವೆಂಬರ್ 10 ರ ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಒಟ್ಟು ಮೀಸಲು 590 ಶತಕೋಟಿ ಡಾಲರ್ ಮತ್ತು ಅವುಗಳಲ್ಲಿ ಚಿನ್ನದ ಮೌಲ್ಯವು 45.5 ಶತಕೋಟಿ ಡಾಲರ್ ಅಥವಾ ಒಟ್ಟು 7.7% ಆಗಿದೆ. ಉಳಿದ ತೊಂಬತ್ತೆಂಟು ಪ್ರತಿಶತ ಮೀಸಲು ವಿದೇಶಿ ಕರೆನ್ಸಿ ರೂಪದಲ್ಲಿದೆ.

ತಜ್ಞರು ಹೇಳುವುದೇನು? ಆರ್‌ಬಿಐ ಎಷ್ಟು ಪ್ರಮಾಣದ ಚಿನ್ನವನ್ನು ಖರೀದಿಸಿದೆ ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸದಿದ್ದರೂ, ಇತ್ತೀಚಿನ ಅಂದಾಜುಗಳ ಪ್ರಕಾರ ಯುಎಸ್ ಖಜಾನೆಗಳು ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿನ ಏರಿಳಿತದ ನಡುವೆ ಸಮತೋಲನವನ್ನು ನೋಡಿದಾಗ ಈ ಪ್ರಮಾಣ ಪ್ರತಿಬಿಂಬಿಸುತ್ತವೆ ಎಂದು ಆನಂದ್ ರಾಠಿ ಗ್ರೂಪ್ ಮುಖ್ಯ ಅರ್ಥಶಾಸ್ತ್ರಜ್ಞ ಸುಜನ್ ಹಜ್ರಾ ಹೇಳಿದ್ದಾರೆ. ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಮಾತನಾಡಿ ನಾವು ಎಷ್ಟು ಕರೆನ್ಸಿ ಹೊಂದಿರಬೇಕು? ಎಷ್ಟು ಮೊತ್ತವನ್ನು ಇಡಬೇಕು? ಎಂಬ ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಂತರಿಕ ನೀತಿಯನ್ನು ಹೊಂದಿರುತ್ತದೆ. ಹಾಗಾಗಿ ಯುಎಸ್ ಟಿ-ಬಿಲ್ ಇಳಿಜಾರಿದಾಗ ಅಥವಾ ಡಾಲರ್ ಕುಸಿಯಲು ಪ್ರಾರಂಭಿಸಿದಾಗ ಚಿನ್ನವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Fri, 24 November 23

ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ