AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಬಿಐ ಎಂಪಿಸಿ ಸಭೆ: ರೆಪೋ ದರ ಶೇ. 5.50 ಗೆ ಏರಿಕೆ

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ರೆಪೋ ದರವನ್ನು ಶೇ. 5.25ರಿಂದ ಶೇ. 5.50ಕ್ಕೆ ಏರಿಸಲು ಎಂಪಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇದನ್ನು ಘೋಷಿಸಿದ್ದಾರೆ. ಆರ್​ಬಿಐ ತನ್ನ ನೀತಿ ನಿಲುವನ್ನು ನ್ಯೂಟ್ರಲ್​ನಿಂದ ಕ್ಯಾಲಿಬ್ರೇಟೆಡ್ ಟೈಟನಿಂಗ್​ಗೆ ಬದಲಾಯಿಸಿದೆ.

ಆರ್​ಬಿಐ ಎಂಪಿಸಿ ಸಭೆ: ರೆಪೋ ದರ ಶೇ. 5.50 ಗೆ ಏರಿಕೆ
ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾImage Credit source: RBI Youtube
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 07, 2026 | 10:47 AM

Share

ನವದೆಹಲಿ, ಅಕ್ಟೋಬರ್ 7: ಹಲವು ಪರಿಣಿತರು ಮತ್ತು ಆರ್ಥಿಕ ತಜ್ಞರು ಅಂದಾಜಿಸಿದಂತೆ ಆರ್​ಬಿಐನ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು 25 ಮೂಲಾಂಕಗಳಷ್ಟು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಶೇ. 5.25ರಷ್ಟಿದ್ದ ರೆಪೋ ದರ ಈಗ ಶೇ. 5.50ಕ್ಕೆ ಏರಿದೆ. ಕಳೆದ ಮೂರು ಮೂರೂವರೆ ವರ್ಷದಲ್ಲೇ ಮೊದಲ ಬಾರಿಗೆ ಆರ್​ಬಿಐ ತನ್ನ ರೆಪೋ ದರ ಏರಿಸಿದಂತಾಗಿದೆ. ರೆಪೋ ದರ ಕೊನೆಯ ಬಾರಿ ಏರಿಕೆಯಾಗಿದ್ದು 2023ರ ಫೆಬ್ರುವರಿಯಲ್ಲಿ.

ಫೆಬ್ರುವರಿ 5ರಿಂದ ನಡೆದ ಆರ್​ಬಿಐನ ಆರು ಸದಸ್ಯರ ಎಂಪಿಸಿ ಸಭೆಯಲ್ಲಿ ರೆಪೋ ದರ ಹೆಚ್ಚಿಸಲು ಸರ್ವಸಮ್ಮತದ ಅನುಮೋದನೆ ಸಿಕ್ಕಿತು. ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಧಾರಗಳನ್ನು ತಿಳಿಸಿದರು.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಕ್ಷೇತ್ರದಲ್ಲಿ ಸುಧಾರಣೆಗಳಿಗೆ ಪ್ರಸ್ತಾಪ; ಬರಲಿದೆ ಕೋ-ಪೇಮೆಂಟ್ ನಿಯಮ; ಪ್ರೀಮಿಯಮ್ ದರವೂ ಇಳಿಕೆ ಸಾಧ್ಯತೆ

ಇದೇ ವೇಳೆ, ಆರ್​ಬಿಐ ತನ್ನ ನೀತಿ ನಿಲುವನ್ನು ನ್ಯೂಟ್ರಲ್​ನಿಂದ ಬಿಗಿ ನೀತಿಗೆ ಬದಲಾಯಿಸಿದೆ. ಕ್ಯಾಲಿಬ್ರೇಟೆಡ್ ಟೈಟನಿಂಗ್ ನಿಲುವು ಎಂದರೆ, ಸದ್ಯೋಭವಿಷ್ಯದಲ್ಲಿ ಬಡ್ಡಿದರ ಇಳಿಕೆಯ ಪ್ರಸ್ತಾಪ ಇರುವುದಿಲ್ಲ. ಅಗತ್ಯಬಿದ್ದರೆ ಎಚ್ಚರಿಕೆಯಿಂದ ರೆಪೋ ದರ ಏರಿಕೆ ಮಾಡಲು ಆರ್​ಬಿಐ ಮುಂದಾಗುತ್ತದೆ. ಇದು ಬ್ಯಾಂಕುಗಳಿಗೆ ಆರ್​ಬಿಐ ನೀಡಿರುವ ಸ್ಪಷ್ಟ ಸಂದೇಶವಾಗಿದೆ.

ಬ್ಯಾಂಕ್ ಬಡ್ಡಿದರಗಳೂ ಏರಿಕೆ ಸಾಧ್ಯತೆ

ಆರ್​ಬಿಐ ತನ್ನ ರೆಪೋ ದರ, ರಿವರ್ಸ್ ರೆಪೋ ದರಗಳನ್ನು ಏರಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳೂ ಕೂಡ ತಮ್ಮ ಬೆಂಚ್​ಮಾರ್ಕ್ ರೇಟ್​ಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಅಂದರೆ, ಸಾಲಗಳಿಗೆ ಬಡ್ಡಿದರ ಹೆಚ್ಚಲಿದೆ. ಇಎಂಐ ಮೊತ್ತ ಹೆಚ್ಚಲಿದೆ. ಹಾಗೆಯೇ, ಠೇವಣಿ ದರಗಳನ್ನೂ ಬ್ಯಾಂಕುಗಳು ಹೆಚ್ಚಿಸಬಹುದು. ಷೇರು ಮಾರುಕಟ್ಟೆ ಹಿನ್ನಡೆಯಲ್ಲಿರುವ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಸಣ್ಣ ಉದ್ದಿಮೆಗಳಿಗೆ ಸಿಗಲಿದೆ ದೊಡ್ಡ ಪುಷ್ಟಿ; ಸರ್ಕಾರದಿಂದ 10,000 ಕೋಟಿ ರೂ ‘ಎಸ್​ಎಂಇ ಗ್ರೋತ್ ಫಂಡ್’ ಸ್ಥಾಪನೆಗೆ ನಿರ್ಧಾರ

ಆರ್​ಬಿಐ ಬಡ್ಡಿದರ ಹೆಚ್ಚಿಸಲು ಏನು ಕಾರಣ?

ಜಾಗತಿಕ ವಿದ್ಯಮಾನಗಳು ಮತ್ತು ಅಧಿಕ ತೈಲಬೆಲೆಗಳ ಪರಿಸ್ಥಿತಿ ಸದ್ಯಕ್ಕೆ ತಹಬದಿಗೆ ಬರುವ ಲಕ್ಷಣಗಳು ಇಲ್ಲ. ಹೀಗಾಗಿ, ಹಣದುಬ್ಬರದ ಮೇಲೆ ಒತ್ತಡ ಹೆಚ್ಚುತ್ತಲೇ ಇರುವ ನಿರೀಕ್ಷೆ ಇದೆ. ಹೀಗಾಗಿ, ಆರ್​ಬಿಐ ರೆಪೋ ದರ ಏರಿಸುವ ಅತ್ಯವಶ್ಯಕತೆ ಇದೆ. ಇನ್ನೊಂದೆಡೆ, ಭಾರತದ ಆರ್ಥಿಕತೆ ಹೆಚ್ಚು ಪ್ರತಿರೋಧ ಶಕ್ತಿ ತೋರುತ್ತಿದೆ. ಅದರ ಬೆಳವಣಿಗೆ ಶೇ. 8ರ ಸಮೀಪ ಹೋಗಿದೆ. ಹೀಗಾಗಿ, ಬಡ್ಡಿದರ ಹೆಚ್ಚಳದ ಆಘಾತವನ್ನು ತಡೆದುಕೊಳ್ಳುವ ಕ್ಷಮತೆ ಆರ್ಥಿಕತೆಗೆ ಇದೆ ಎಂಬುದು ಆರ್​ಬಿಐನ ಭಾವನೆ. ಹೀಗಾಗಿ, ರೆಪೋ ದರ ಹೆಚ್ಚಿಸುವ ರಿಸ್ಕ್ ತೆಗೆದುಕೊಂಡಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Wed, 7 October 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತ: ಒಂದು ಅವಲೋಕನ
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ರಾಜ್ಯ ಸರ್ಕಾರಕ್ಕೆ 2000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್!
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿಯ ಸಾಧ್ಯತೆ
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು!
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಜನರಿಗೆ ಎರಡು ಶಾಕ್ ನೀಡಲಿದೆ ಸರ್ಕಾರ
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು