19 ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು ಆರ್​ಬಿಐನ ಅಲರ್ಟ್ ಪಟ್ಟಿಗೆ; ಒಟ್ಟು ಸಂಖ್ಯೆ 75ಕ್ಕೆ ಏರಿಕೆ

|

Updated on: Nov 25, 2023 | 11:05 AM

RBI Alert List: ಅನಧಿಕೃತ ಫಾರೆಕ್ಸ್ ಟ್ರೇಡಿಂಗ್ ಮಾಡುತ್ತಿರುವ ಮತ್ತು ಅಂಥವುಗಳನ್ನು ಶಿಫಾರಸು ಮಾಡುತ್ತಿರುವ ಸಂಸ್ಥೆಗಳನ್ನು ಆರ್​ಬಿಐ ಅಲರ್ಟ್ ಲಿಸ್ಟ್​ಗೆ ಸೇರಿಸಿದೆ. ಇದರಲ್ಲಿ ಎಫ್​ಎಕ್ಸ್ ಸ್ಮಾರ್ಟ್​ಬುಲ್, ಜಸ್ಟ್ ಮಾರ್ಕೆಟ್ಸ್, ಗೋಡೂ ಎಫ್​ಎಕ್ಸ್ ಮೊದಲಾದವು ಸೇರಿವೆ. ಈ ಅಲರ್ಟ್ ಪಟ್ಟಿಯಲ್ಲಿ ಇವೂ ಒಳಗೊಂಡಂತೆ ಒಟ್ಟು ಸಂಖ್ಯೆ 75 ಆಗಿದೆ. ಆದರೆ, ಪಟ್ಟಿಯಲ್ಲಿಲ್ಲದ ಸಂಸ್ಥೆಗಳು ಅಧಿಕೃತ ಎಂದು ಭಾವಿಸಬೇಕಿಲ್ಲ ಎಂದೂ ಆರ್​ಬಿಐ ಎಚ್ಚರಿಸಿದೆ.

19 ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು ಆರ್​ಬಿಐನ ಅಲರ್ಟ್ ಪಟ್ಟಿಗೆ; ಒಟ್ಟು ಸಂಖ್ಯೆ 75ಕ್ಕೆ ಏರಿಕೆ
ಟ್ರೇಡಿಂಗ್ ಪ್ಲಾಟ್​ಫಾರ್ಮ್​
Follow us on

ನವದೆಹಲಿ, ನವೆಂಬರ್ 25: ಎಫ್​ಎಕ್ಸ್ ಸ್ಮಾರ್ಟ್​ಬುಲ್ ಸೇರಿದಂತೆ 19 ಫಾರೆಕ್ಸ್ ಪ್ಲಾಟ್​ಫಾರ್ಮ್​ಗಳನ್ನು ಆರ್​ಬಿಐ ಅಲರ್ಟ್ ಲಿಸ್ಟ್​ಗೆ (RBI alert list) ಸೇರಿಸಿದೆ. ಈ 19 ವಿದೇಶ ವಿನಿಮಯ ಟ್ರೇಡಿಂಗ್ ಸೆಂಟರ್​ಗಳು (foreign exchange trading centers) ಅನಧಿಕೃತವಾಗಿವೆ. ಇದರೊಂದಿಗೆ ಆರ್​ಬಿಐ ಅಲರ್ಟ್ ಲಿಸ್ಟ್​ನಲ್ಲಿರುವ ಇಂಥ ಅನಧಿಕೃತ ಫಾರೆಕ್ಸ್ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳ ಸಂಖ್ಯೆ 75ಕ್ಕೆ ಏರಿದೆ. ಈ ಅಲರ್ಟ್ ಲಿಸ್ಟ್​ನಲ್ಲಿರುವ ಸಂಸ್ಥೆಗಳು 1999ರ ಫಾರೀನ್ ಎಕ್ಸ್​ಚೇಂಜ್ ಮ್ಯಾನೇಜ್ಮೆಂಟ್ ಆ್ಯಕ್ಟ್​ನ ಅಡಿಯಲ್ಲಿ ಯಾವುದೇ ಫಾರೆಕ್ಸ್ ಸರ್ವಿಸ್ ನೀಡಲು ಮಾನ್ಯತೆ ಹೊಂದಿರುವುದಿಲ್ಲ. ಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್​ಫಾರ್ಮ್ ನಿರ್ವಹಿಸುವುದಾಗಲೀ ಮಾಡುವಂತಿಲ್ಲ.

ಆರ್​ಬಿಐನ ಅಲರ್ಟ್ ಲಿಸ್ಟ್​ಗೆ ಸೇರ್ಪಡೆಯಾದ ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು

  1. ಎಫ್​ಎಕ್ಸ್ ಸ್ಮಾರ್ಟ್​ಬುಲ್
  2. ಜಸ್ಟ್ ಮಾರ್ಕೆಟ್ಸ್
  3. ಗೋಡೂ ಎಫ್​ಎಕ್ಸ್
  4. ಅಡ್ಮಿರಲ್ ಮಾರ್ಕೆಟ್
  5. ಬ್ಲ್ಯಾಕ್​ಬುಲ್
  6. ಈಸಿ ಮಾರ್ಕೆಟ್ಸ್
  7. ಎನ್​ಕ್ಲೇವ್ ಎಫ್​ಎಕ್ಸ್
  8. ಫಿನೋವಿಜ್ ಫಿನ್​ಟೆಕ್
  9. ಎಫ್​ಎಕ್ಸ್ ಟ್ರೇ ಮಾರ್ಕೆಟ್
  10. ಫೋರೆಕ್ಸ್4 ಯು
  11. ಗ್ರೋಯಿಂಗ್ ಕ್ಯಾಪಿಟಲ್ ಸರ್ವಿಸಸ್
  12. ಎಚ್​ಎಫ್ ಮಾರ್ಕೆಟ್ಸ್
  13. ಎಚ್​ವೈಸಿಎಂ ಕ್ಯಾಪಿಟಲ್ ಮಾರ್ಕೆಟ್ಸ್
  14. ಜೆಜಿಸಿಎಫ್​​ಎಕ್ಸ್
  15. ಪಿಯು ಪ್ರೈಮ್
  16. ರಿಯಲ್ ಗೋಲ್ಡ್ ಕ್ಯಾಪಿಟಲ್
  17. ಟಿಎನ್​ಎಫ್​ಎಕ್ಸ್
  18. ಯಾ ಮಾರ್ಕೆಟ್ಸ್
  19. ಗೇಟ್ ಟ್ರೇಡ್

ಇದನ್ನೂ ಓದಿ: ಮದುವೆಗೂ ಇದೆ ವಿಮಾ ಸುರಕ್ಷೆ; ವೆಡ್ಡಿಂಗ್ ಇನ್ಷೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರೇಜ್ ಇರುತ್ತದೆ?

ಅನಧಿಕೃತ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳನ್ನು ಶಿಫಾರಸು ಮಾಡುತ್ತಿರುವ ಕೆಲ ಸಂಸ್ಥೆಗಳೂ ಕೂಡ ಆರ್​ಬಿಯ ಈ ಅಲರ್ಟ್ ಪಟ್ಟಿಯಲ್ಲಿವೆ. ಈ ವೇಳೆ ಆರ್​ಬಿಐ ಒಂದು ಸಂಗತಿ ಸ್ಪಷ್ಟಪಡಿಸಿದೆ. ಈ ಅಲರ್ಟ್ ಲಿಸ್ಟ್ ಅಂತಿಮ ಅಥವಾ ಅಮೂಲಾಗ್ರವಲ್ಲ. ಈ ಪಟ್ಟಿಯಲ್ಲಿಲ್ಲದ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳು ಅಥವಾ ಸಂಸ್ಥೆಗಳು ಆರ್​ಬಿಐನ ಮಾನ್ಯತೆ ಪಡೆದಿವೆ ಎಂದರ್ಥವಲ್ಲ ಎಂದು ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ