ಉತ್ತಮ ಹಣಕಾಸಿನ ಹರಿವು ಇರುವ ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಹೊಡೆತ ಎಂಬಂಥ ಸುದ್ದಿಯೊಂದು ಬಂದಿದೆ. ಅದರ ಪ್ರಕಾರವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 20ರಂದು ಸ್ಪಷ್ಟನೆಯೊಂದನ್ನು ನೀಡಿದೆ. ಅದರಂತೆ, ವ್ಯಾಲೆಟ್‌ಗಳು ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳಂತಹ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್‌ಗಳ (ಪಿಪಿಐ) ಕುರಿತು ಸ್ಪಷ್ಟೀಕರಣವನ್ನು ನೀಡಿದ್ದು, ಈ ಇನ್ಸ್ಟ್ರುಮೆಂಟ್ಗಳಲ್ಲಿ ಬ್ಯಾಂಕೇತರ ಸಂಸ್ಥೆಗಳು ಕ್ರೆಡಿಟ್ ಲೈನ್ ಲೋಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಈ ಅಧಿಸೂಚನೆಯು “ಎಲ್ಲ ಅಧಿಕೃತ ನಾನ್-ಬ್ಯಾಂಕ್ ಪ್ರಿಪೇಯ್ಡ್ ಪಾವತಿ ಸಾಧನ (PPI) ವಿತರಕರಿಗೆ” ಎಂದು ತಿಳಿಸಲಾಗಿದೆ. ಹಲವು ಮೂಲಗಳ ಪ್ರಕಾರ, ಫಿನ್‌ಟೆಕ್ ಕಂಪೆನಿಗಳು ಸೇರಿದಂತೆ ನಾನ್ಬ್ಯಾಂಕ್ PPI ವಿತರಕರಿಗೆ ಅಧಿಸೂಚನೆ ಕಳುಹಿಸಲಾಗಿದೆ. ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸುವುದನ್ನು ನಿರೀಕ್ಷಿಸಲಾಗುತ್ತಿದೆ.
ಆರ್‌ಬಿಐನ ಸ್ಪಷ್ಟೀಕರಣವನ್ನು ಮನಿಕಂಟ್ರೋಲ್ ಪರಿಶೀಲಿಸಿದಂತೆ, “ಪಿಪಿಐ-ಎಮ್‌ಡಿ ಕ್ರೆಡಿಟ್ ಲೈನ್‌ಗಳಿಂದ ಪಿಪಿಐಗಳನ್ನು ಲೋಡ್ ಮಾಡಲು ಅನುಮತಿಸುವುದಿಲ್ಲ. ಅಂತಹ ಪದ್ಧತಿಯನ್ನು ಅನುಸರಿಸಿದರೆ ತಕ್ಷಣವೇ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ನಿಯಮಾವಳಿಯ ಅನುಸರಿಸದಿದ್ದಲ್ಲಿ ಪೇಮೆಂಟ್ ಅಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007ರ ನಿಬಂಧನೆಗಳ ಅಡಿಯಲ್ಲಿ ದಂಡ ಹಾಕುವ ಕ್ರಮವನ್ನು ಕೈಗೊಳ್ಳಬಹುದು.” PPI-MD ಈ ಇನ್ಸ್ಟ್ರುಮೆಂಟ್ಗಳಲ್ಲಿನ ಮಾಸ್ಟರ್ ನಿರ್ದೇಶನವನ್ನು ಉಲ್ಲೇಖಿಸುತ್ತದೆ. ಇದು ನಿಯಮಗಳು ಮತ್ತು ನಿಬಂಧನೆಗಳ ಮೇಲಿನ ಸೂಚನೆಗಳನ್ನು ಕ್ರೋಡೀಕರಿಸುವ ದಾಖಲೆಯಾಗಿದೆ.
ಈ ಸ್ಪಷ್ಟೀಕರಣದ ತಕ್ಷಣದ ಪರಿಣಾಮವು ಏನು ಎಂಬುದು ಅಸ್ಪಷ್ಟವಾಗಿದೆ; ಆದರೆ ಸ್ಲೈಸ್, ಯುನಿ, PayUನ LazyPay, KreditBee ಮುಂತಾದ ಫಿನ್‌ಟೆಕ್‌ಗಳು ಸಹ ಪ್ರಿಪೇಯ್ಡ್ ಸಹ-ಬ್ರಾಂಡೆಡ್ ಕಾರ್ಡ್‌ಗಳ ಮೂಲಕ ಕ್ರೆಡಿಟ್ ಅನ್ನು ವಿಸ್ತರಿಸುತ್ತವೆ. ಆದರೆ ಈ ಕಾರ್ಡ್‌ಗಳ ಪ್ರಮುಖ ವಿತರಕರು ಎಸ್‌ಬಿಎಂ ಬ್ಯಾಂಕ್ ಇಂಡಿಯಾ, ಆರ್‌ಬಿಎಲ್ ಬ್ಯಾಂಕ್ ಮುಂತಾದ ಬ್ಯಾಂಕ್‌ಗಳು. ಕೆಲವು ಸಂದರ್ಭಗಳಲ್ಲಿ, ಕಾರ್ಡ್ ವಿತರಕರು ಬ್ಯಾಂಕ್ ಆಗಿರುವಾಗ ಫಿನ್ಟೆಕ್ನ ಎನ್ಬಿಎಫ್ಸಿ ಪಾಲುದಾರರಿಂದ ಕ್ರೆಡಿಟ್ ಲೈನ್ ಅನ್ನು ವಿಸ್ತರಿಸಲಾಗುತ್ತದೆ. ಈ ಕಂಪೆನಿಗಳ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ.
ನಾನ್ ಬ್ಯಾಂಕ್ಗಳಿಂದ ಕ್ರೆಡಿಟ್ ಲೈನ್ ಅನ್ನು ವಿಸ್ತರಿಸಿದರೆ ಈ ಉತ್ಪನ್ನಗಳನ್ನು ಇನ್ನು ಮುಂದೆ ವಿಸ್ತರಿಸಲಾಗುವುದಿಲ್ಲ ಎಂದು ಈ ಕ್ರಮವು ಅರ್ಥೈಸಬಹುದು. ಮನಿಕಂಟ್ರೋಲ್‌ಗೆ ಪ್ರತಿಕ್ರಿಯೆಯಾಗಿ ಸ್ಲೈಸ್ ಸಂಸ್ಥಾಪಕ ಮತ್ತು ಸಿಇಒ ರಾಜನ್ ಬಜಾಜ್ ಮಾತನಾಡಿ, “ನಾವು ಈ ನಿಯಂತ್ರಣವನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ. ಸ್ಫೂರ್ತಿಯುತವಾಗಿ ನಿಯಂತ್ರಣದ ಸರಿಯಾದ ಕಡೆ ಇರಲು ಬದ್ಧರಾಗಿದ್ದೇವೆ. ನಮ್ಮ ಪಾಲುದಾರ ಬ್ಯಾಂಕ್‌ನೊಂದಿಗೆ ಈ ಬಗ್ಗೆ ಕೆಲಸ ಮಾಡುತ್ತಿದ್ದೇವೆ,” ಎಂದಿದ್ದಾರೆ.
ಪಿಪಿಐ ಮಾಸ್ಟರ್ ನಿರ್ದೇಶನವು ಈ ಸಾಧನಗಳನ್ನು “ನಗದು, ಬ್ಯಾಂಕ್ ಖಾತೆಗೆ ಡೆಬಿಟ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು, ಪಿಪಿಐಗಳು (ಕಾಲಕಾಲಕ್ಕೆ ಅನುಮತಿಸಿದಂತೆ) ಮತ್ತು ಭಾರತದಲ್ಲಿನ ನಿಯಂತ್ರಿತ ಸಂಸ್ಥೆ ಮೂಲಕ ನೀಡಲಾದ ಇತರ ಪಾವತಿ ಸಾಧನಗಳ ಮೂಲಕ ಲೋಡ್ ಮಾಡಲು/ಮರುಲೋಡ್ ಮಾಡಲು ಮಾತ್ರ ಅನುಮತಿಸುತ್ತದೆ ಮತ್ತು ಅದು ಭಾರತದ ಕರೆನ್ಸಿಯಾದ ರೂಪಾಯಿಯಲ್ಲೇ ಇರಬೇಕು ಎಂದು ಸ್ಪಷ್ಟೀಕರಣವು ಉಲ್ಲೇಖಿಸಿದೆ.”
ಈ ಮಧ್ಯೆ ಡಿಜಿಟಲ್ ಸಾಲದ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ ಮತ್ತು ಆರ್‌ಬಿಐ ಶೀಘ್ರದಲ್ಲೇ ಅವುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆರ್‌ಬಿಐ ಹಲವಾರು ಇತರ ವಿಧಾನಗಳ ಮೂಲಕ ಫಿನ್‌ಟೆಕ್‌ಗಳನ್ನು ನಿಯಂತ್ರಿಸುತ್ತಿದೆ, ಅವುಗಳಲ್ಲಿ ಒಂದು ಕ್ರೆಡಿಟ್, ಡೆಬಿಟ್ ಮತ್ತು ಸಹ-ಬ್ರಾಂಡೆಡ್ ಕಾರ್ಡ್‌ಗಳಲ್ಲಿನದು ಇತ್ತೀಚಿನ ಬೆಳವಣಿಗೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Tue, 21 June 22