Interest Rate: ಬ್ಯಾಂಕ್​ ಫಿಕ್ಸೆಡ್​ಡೆಪಾಸಿಟ್​​ಗಿಂತ ಉತ್ತಮ ಬಡ್ಡಿ ದರ ದೊರೆಯುವ ಯೋಜನೆ ಇದು

ಪೋಸ್ಟ್ ಆಫೀಸ್​ನ ಈ ಹೂಡಿಕೆ ಯೋಜನೆಯಲ್ಲಿ ಬ್ಯಾಂಕ್​ಗಳಲ್ಲಿನ ಎಫ್​ಡಿ ಬಡ್ಡಿ ದರಕ್ಕಿಂತ ಹೆಚ್ಚು ದೊರೆಯುತ್ತದೆ. ಯಾವುದು ಆ ಸ್ಕೀಮ್ ಎಂಬ ವಿವರಣೆ ಇಲ್ಲಿದೆ.

Interest Rate: ಬ್ಯಾಂಕ್​ ಫಿಕ್ಸೆಡ್​ಡೆಪಾಸಿಟ್​​ಗಿಂತ ಉತ್ತಮ ಬಡ್ಡಿ ದರ ದೊರೆಯುವ ಯೋಜನೆ ಇದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 21, 2022 | 12:52 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಐಸಿಐಸಿಐ ಬ್ಯಾಂಕ್ (ICICI Bank), ಎಚ್​ಡಿಎಫ್​ಸಿ (HDFC), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BoB) ಇತ್ತೀಚೆಗೆ ನಿಶ್ಚಿತ ಠೇವಣಿ ಬಡ್ಡಿದರಗಳನ್ನು ಹೆಚ್ಚಿಸಿವೆ. ಈಗಿನ ಸನ್ನಿವೇಶದಲ್ಲಿ ನೀವು ಈ ಯಾವುದೇ ಬ್ಯಾಂಕ್‌ಗಳಲ್ಲಿ ಎಫ್‌ಡಿ (ಠೇವಣಿ) ಮಾಡಲು ಯೋಜಿಸುತ್ತಿದ್ದರೆ ನೀವು ಮೊದಲು ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಟರ್ಮ್ ಡೆಪಾಸಿಟ್ ಖಾತೆಯ ಬಡ್ಡಿದರಗಳ ಬಗ್ಗೆ ತಿಳಿದುಕೊಳ್ಳಬೇಕು. ಅಂಚೆ ಕಚೇರಿಯ ಈ ಯೋಜನೆಯಲ್ಲಿ ಬಡ್ಡಿ ದರವು ಬ್ಯಾಂಕ್ ಎಫ್​ಡಿಗಿಂತ ಇನ್ನೂ ಹೆಚ್ಚಾಗಿರುತ್ತದೆ. ಈ ನಿಶ್ಚಿತ ಠೇವಣಿ ಮತ್ತು ಟರ್ಮ್ ಡೆಪಾಸಿಟ್ ಖಾತೆಗಳ ಬಡ್ಡಿದರಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ. ಇದರಿಂದ ನೀವು ಸರಿಯಾದ ಕಡೆ ಹೂಡಿಕೆ ಮಾಡಬಹುದು.

ರಾಷ್ಟ್ರೀಯ ಉಳಿತಾಯ ಟರ್ಮ್ ಡೆಪಾಸಿಟ್ ಖಾತೆಯಲ್ಲಿ ಶೇ 6.7ರ ವರೆಗೆ ಬಡ್ಡಿ ಲಭ್ಯ

ಇದು ಒಂದು ರೀತಿಯ ಫಿಕ್ಸೆಡ್ ಡೆಪಾಸಿಟ್ ಮಾತ್ರ. ನಿಗದಿತ ಅವಧಿಗೆ ಹೂಡಿಕೆ ಮಾಡುವ ಮೂಲಕ ನೀವು ನಿಶ್ಚಿತ ಆದಾಯವನ್ನು ಪಡೆಯಬಹುದು. ಟರ್ಮ್ ಡೆಪಾಸಿಟ್​ ಖಾತೆಯು 1 ರಿಂದ 5 ವರ್ಷಗಳವರೆಗಿನ ಅವಧಿಗೆ ಶೇ 5.5ರಿಂದ ಶೇ 6.7ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಇದರಲ್ಲಿ ಕನಿಷ್ಠ 1000 ರೂ. ಗರಿಷ್ಠ ಹೂಡಿಕೆ ಮಿತಿ ಇಲ್ಲ.

ಎಫ್‌ಡಿಯಿಂದ ಗಳಿಸಿದ ಬಡ್ಡಿಯ ಮೇಲೂ ತೆರಿಗೆ ಪಾವತಿ

ಒಂದು ಹಣಕಾಸು ವರ್ಷದಲ್ಲಿ ಬ್ಯಾಂಕ್ ಎಫ್‌ಡಿಯಲ್ಲಿ ಪಡೆದ ಬಡ್ಡಿಯು 40 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ ಅದರ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಈ ಮಿತಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ. ಅದೇ ಸಮಯದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಎಫ್​ಡಿಯಿಂದ 50 ಸಾವಿರ ರೂಪಾಯಿಗಳವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಇದಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇ 10ರ ಟಿಡಿಎಸ್​ ಅನ್ನು ಕಡಿತಗೊಳಿಸಲಾಗುತ್ತದೆ.

5 ವರ್ಷಗಳ ಹೂಡಿಕೆಗೆ ತೆರಿಗೆ ವಿನಾಯಿತಿ ಲಾಭ

ಈ ಟರ್ಮ್ ಡೆಪಾಸಿಟ್ ಯೋಜನೆ ಮತ್ತು 5 ವರ್ಷಗಳ ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಇದರ ಅಡಿಯಲ್ಲಿ ನೀವು ರೂ. 1.50 ಲಕ್ಷದವರೆಗಿನ ಹೂಡಿಕೆ ಮೇಲೆ ಆದಾಯ ತೆರಿಗೆ ವಿನಾಯಿತಿ ಲಾಭವನ್ನು ಪಡೆಯಬಹುದು. ಅದೇ ಸಮಯದಲ್ಲಿ ತೆರಿಗೆ ವಿನಾಯಿತಿಯ ಪ್ರಯೋಜನವು 5 ವರ್ಷಗಳವರೆಗೆ ಬ್ಯಾಂಕ್‌ಗಳ ಎಫ್‌ಡಿಗಳಲ್ಲಿ ಲಭ್ಯವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI Vs Post Office Fixed Deposits: ಎಸ್​ಬಿಐ ಅಥವಾ ಪೋಸ್ಟ್ ಆಫೀಸ್ ಯಾವ ಎಫ್​ಡಿಗೆ ಹೆಚ್ಚಿನ ಬಡ್ಡಿ ದರ?

Published On - 12:52 pm, Tue, 21 June 22

ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಮುಖವಾಡ ಕಳಚಿದ ಮೇಲೆ ಭವ್ಯಾ ಗೌಡ ಬಗ್ಗೆ ತ್ರಿವಿಕ್ರಮ್​ಗೆ ಜ್ಞಾನೋದಯ
ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ
ಕಂಬಳ ಓಟವನ್ನು ಬೆರುಗಣ್ಣಿನಿಂದ ನೋಡಿದ ನಟಿ ಶಾನ್ವಿ