SBI Vs Post Office Fixed Deposits: ಎಸ್‌ಬಿಐ ಅಥವಾ ಪೋಸ್ಟ್ ಆಫೀಸ್ ಯಾವ ಎಫ್ಡಿಗೆ ಹೆಚ್ಚಿನ ಬಡ್ಡಿ ದರ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರ್ಸಸ್ ಪೋಸ್ಟ್ ಆಫೀಸ್ ಎಫ್ಡಿ ಬಡ್ಡಿ ದರದ ಹೋಲಿಕೆ ನಿಮ್ಮೆದುರು ಇದ್ದು, ಯಾವುದು ಉತ್ತಮ ಎಂದಯ ಆರಿಸಿಕೊಳ್ಳುವುದಕ್ಕೆ ಅನುಕೂಲ ಆಗಲಿದೆ.
ಈಗಿನ ಸನ್ನಿವೇಶದಲ್ಲಿ ನಿಶ್ಚಿತ ಠೇವಣಿಗಳಲ್ಲಿ (Fixed Deposits) ಹೂಡಿಕೆ ಮಾಡುವುದು ಅನುಕೂಲಕರ. ಏಕೆಂದರೆ ಆರ್‌ಬಿಐ (RBI)ನಿಂದ ರೆಪೊ ದರದಲ್ಲಿ ಹೆಚ್ಚಳವನ್ನು ಘೋಷಿಸಿದಾಗಿನಿಂದ ಬಡ್ಡಿದರಗಳು ಹೆಚ್ಚುತ್ತಿವೆ. ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಸ್ಥಿರವಾದ ಬಡ್ಡಿದರವನ್ನು ಖಾತ್ರಿಪಡಿಸುತ್ತದೆ. ಆದರೆ ಭವಿಷ್ಯದ ಗುರಿಗಳಿಗಾಗಿ ಮುಂಚಿತವಾಗಿ ಯೋಜಿಸಲು ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಟರ್ಮ್ ಡೆಪಾಸಿಟ್ಗಳು 7 ದಿನಗಳಿಂದ 10 ವರ್ಷಗಳವರೆಗೆ ಹೊಂದಿಕೊಳ್ಳುವ ಮೆಚ್ಯೂರಿಟಿ ಅವಧಿಯನ್ನು ಹೊಂದಿರುತ್ತವೆ. ಆದ್ದರಿಂದ ನಿಶ್ಚಿತ ಠೇವಣಿ ಬಡ್ಡಿದರಗಳು ಮಾರುಕಟ್ಟೆ ಆಧಾರಿತವಾಗಿಲ್ಲ, ಹೂಡಿಕೆದಾರರು ತಮ್ಮ ಹೂಡಿಕೆ ಮೇಲೆ ಸುರಕ್ಷಿತ ಲಾಭವನ್ನು ಗಳಿಸಬಹುದು.
ಅಲ್ಲದೆ, ನಿಶ್ಚಿತ ಠೇವಣಿ ಖಾತೆಯಲ್ಲಿನ ಠೇವಣಿಗಳಿಗೆ ಡಿಐಸಿಜಿಸಿ ರೂ. 5 ಲಕ್ಷಗಳವರೆಗೆ ವಿಮೆ ಮಾಡುತ್ತದೆ. ಹೆಚ್ಚಿನ ಅಪಾಯ ಬೇಡ ಅಂದುಕೊಳ್ಳುವ ಹೂಡಿಕೆದಾರರಿಗೆ ನಿಶ್ಚಿತ ಠೇವಣಿ ಉತ್ತಮ. ಅಂದಹಾಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್‌ನ ಬಡ್ಡಿದರಗಳ ಹೋಲಿಕೆ ಈ ಲೇಖನದಲ್ಲಿದೆ. ಈ ಮೂಲಕವಾಗಿ ಒಂದನ್ನು ಆಯ್ಕೆ ಮಾಡಲು, ಉತ್ತಮವಾಗಿ ಯೋಜಿಸಲು ಸಹಾಯ ಮಾಡುತ್ತದೆ.
ಎಸ್‌ಬಿಐ ಎಫ್ಡಿ ದರಗಳು
ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 14ನೇ ಜೂನ್ 2022ರಂದು ರೂ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಆಯ್ದ ಅವಧಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಎಸ್‌ಬಿಐ 211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಶೇ 4.40ರಿಂದ ಶೇ 4.60ಗೆ ಹೆಚ್ಚಿಸಿದೆ. 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ 5.10ರಿಂದ ಶೇ 5.30ಗೆ ಹೆಚ್ಚಿಸಿದೆ. 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಗೆ ಶೇ 5.20 ರಿಂದ 5.35ಕ್ಕೆ ಜಾಸ್ತಿ ಮಾಡಿದೆ.
ಸಾಮಾನ್ಯವಾಗಿ, ಹೂಡಿಕೆದಾರರು ಒಂದರಿಂದ ಹತ್ತು ವರ್ಷಗಳವರೆಗೆ ನಿಶ್ಚಿತ ಠೇವಣಿ ಹೂಡಿಕೆ ಮಾಡುತ್ತಾರೆ. ಎಸ್‌ಬಿಐ ಒಂದು ವರ್ಷದ ಠೇವಣಿಗಳ ಮೇಲೆ ಶೇಕಡಾ 4.60 ಬಡ್ಡಿ, ಎರಡು ವರ್ಷಗಳ ಠೇವಣಿಗೆ ಶೇಕಡಾ 5.30 ಬಡ್ಡಿ, ಮೂರು ವರ್ಷಗಳ ಠೇವಣಿ ಮೇಲೆ ಶೇಕಡಾ 5.35 ಬಡ್ಡಿ, ಐದು ವರ್ಷಗಳ ಠೇವಣಿಗಳ ಮೇಲಿನ ಬಡ್ಡಿ ಶೇ 5.45 ಮತ್ತು ಹತ್ತು ವರ್ಷಗಳ ಠೇವಣಿಗಳ ಮೇಲೆ ಶೇಕಡಾ 5.50 ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ 7 ದಿನಗಳಿಂದ 5 ವರ್ಷಗಳ ಠೇವಣಿಗಳ ಮೇಲೆ ಶೇಕಡಾ 0.50 ರಷ್ಟು ಹೆಚ್ಚುವರಿ ದರವನ್ನು ನೀಡಲಾಗುತ್ತದೆ.
ಆದರೆ SBI ಎಫ್ಡಿಯ ಉತ್ತಮ ಭಾಗವೆಂದರೆ “SBI Wecare” ಠೇವಣಿ ಯೋಜನೆಯಡಿ, ಹಿರಿಯ ನಾಗರಿಕರಿಗೆ 30 ಬಿಪಿಎಸ್ ಆಧಾರದ ಹೆಚ್ಚುವರಿ ಪ್ರೀಮಿಯಂ ಅನ್ನು ಸಹ ನೀಡಲಾಗುತ್ತದೆ. 5 ವರ್ಷದಿಂದ 10 ವರ್ಷಗಳ ಠೇವಣಿಗಳ ಮೇಲೆ ಅಸ್ತಿತ್ವದಲ್ಲಿರುವ 50 ಬೇಸಿಸ್ ಪಾಯಿಂಟ್‌ಗಳಿಗಿಂತ ಹೆಚ್ಚಿನ ಬಡ್ಡಿ ಇದಾಗಿರುತ್ತದೆ. “SBI Wecare” ಠೇವಣಿ ಯೋಜನೆಯು ಸೆಪ್ಟೆಂಬರ್ 30, 2022ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಎಸ್‌ಬಿಐ ಈಗ ಈ ಯೋಜನೆಯ ಮೇಲೆ ಶೇ 6.30 ಬಡ್ಡಿದರದೊಂದಿಗೆ ಒದಗಿಸುತ್ತಿದೆ.
ಪೋಸ್ಟ್ ಆಫೀಸ್ ಎಫ್ಡಿ
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅಕೌಂಟ್ (ಟಿಡಿ) ಎಂಬುದು ಅಂಚೆ ಇಲಾಖೆಯು ನೀಡುವ ಸಣ್ಣ ಉಳಿತಾಯ ಖಾತೆಯಾಗಿದ್ದು, ಇದನ್ನು ಭಾರತ ಸರ್ಕಾರದ ಸಂವಹನ ಸಚಿವಾಲಯವು ನಿರ್ವಹಿಸುತ್ತದೆ. ಈ ಪೋಸ್ಟ್ ಆಫೀಸ್ ಯೋಜನೆಯು ಭಾರತ ಸರ್ಕಾರದಿಂದ ಬೆಂಬಲಿತವಾಗಿರುವ ಕಾರಣ ಬಡ್ಡಿ ಪಾವತಿ ಮತ್ತು ಠೇವಣಿಯ ವಿಚಾರದಲ್ಲಿ ಯಾವುದೇ ಅಪಾಯ ಇಲ್ಲ. ಒಬ್ಬ ವಯಸ್ಕ, ಮೂರು ಜನರವರೆಗೆ ಜಂಟಿ ಖಾತೆ, ಅಪ್ರಾಪ್ತ ವಯಸ್ಕರ ಪರವಾಗಿ ಪಾಲಕರು, ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪಾಲಕರು ಅಥವಾ 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ತಮ್ಮ ಹೆಸರಿನಲ್ಲಿ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅನ್ನು ತೆರೆಯಬಹುದು.
ಈ ಖಾತೆಯನ್ನು ಒಂದರಿಂದ ಐದು ವರ್ಷಗಳ ಅವಧಿಗೆ ಮಾಡಿಸಬಹುದು. ಕನಿಷ್ಠ ರೂ. 1000 ಠೇವಣಿ ಮತ್ತು ಹೆಚ್ಚಿನ ಮಿತಿ ಇಲ್ಲದೆ 100ರ ಗುಣಕಗಳಲ್ಲಿ ಠೇವಣಿ ಮಾಡಬಹುದು. 1 ರಿಂದ 3 ವರ್ಷಗಳ ಪೋಸ್ಟ್ ಆಫೀಸ್ ನಿಶ್ಚಿತ ಠೇವಣಿಗಳ ಮೇಲೆ ಒದಗಿಸಿದ ಬಡ್ಡಿದರವು ಎಸ್‌ಬಿಐ ಎಫ್ಡಿಗೆ ಹೋಲಿಸಿದರೆ ಶೇ 5.5ಕ್ಕಿಂತ ಹೆಚ್ಚು, ಮತ್ತು 5 ವರ್ಷಗಳ ಪೋಸ್ಟ್ ಆಫೀಸ್ ಎಫ್ಡಿಯಲ್ಲಿ ಅನ್ವಯಿಸುವ ಬಡ್ಡಿ ದರವು ಶೇ 6.7 ಆಗಿರುತ್ತದೆ. ಇದು ಎಸ್‌ಬಿಐ ಎಫ್ಡಿಯ ಬಡ್ಡಿದರಗಳಿಗಿಂತ ಹೆಚ್ಚಾಗಿದೆ.
ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಹೆಚ್ಚಿನ ಬಡ್ಡಿ ದರಗಳು ಸಾಮಾನ್ಯ ಗ್ರಾಹಕರಿಗೆ ಮಾತ್ರ. ಮತ್ತು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆಯಲ್ಲಿ (TD) ಹಿರಿಯ ನಾಗರಿಕರಿಗೆ ಯಾವುದೇ ಹೆಚ್ಚುವರಿ ಬಡ್ಡಿದರದ ಪ್ರಯೋಜನವನ್ನು ಒದಗಿಸುವುದಿಲ್ಲ, ಆದ್ದರಿಂದ ಹಿರಿಯ ನಾಗರಿಕರಲ್ಲದವರು ಮತ್ತು ಹಿರಿಯ ನಾಗರಿಕರು ಹೆಚ್ಚಿನದನ್ನು ಪಡೆಯುತ್ತಾರೆ. ಎಸ್‌ಬಿಐ ಮಾತ್ರವಲ್ಲದೆ ಎಚ್‌ಡಿಎಫ್‌ಸಿ, ಆಕ್ಸಿಸ್, ಐಸಿಐಸಿಐ ಬ್ಯಾಂಕ್, ಪಿಎನ್‌ಬಿ ಮತ್ತು ಇತರ ಪ್ರಮುಖ ಬ್ಯಾಂಕ್‌ಗಳ ಬಡ್ಡಿದರಗಳಿಗಿಂತ ಅವರ ಪೋಸ್ಟ್ ಆಫೀಸ್ ಎಫ್‌ಡಿಗಳ ಮೇಲಿನ ಬಡ್ಡಿ ದರವು ಶೇ 6.70ವರೆಗೆ ಹೆಚ್ಚು.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Tax Saving Fixed Deposits: ತೆರಿಗೆ ಉಳಿತಾಯ ಎಫ್‌ಡಿಗಳ ಮೇಲೆ ಅತ್ಯುತ್ತಮ ಬಡ್ಡಿ ನೀಡುವ ಬ್ಯಾಂಕ್ಗಳಿವು
Published On - 11:42 am, Tue, 21 June 22