Tax Saving Fixed Deposits: ತೆರಿಗೆ ಉಳಿತಾಯ ಎಫ್​ಡಿಗಳ ಮೇಲೆ ಅತ್ಯುತ್ತಮ ಬಡ್ಡಿ ನೀಡುವ ಬ್ಯಾಂಕ್​ಗಳಿವು

ತೆರಿಗೆ ಉಳಿತಾಯ ಎಫ್​ಡಿಗಳ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಬ್ಯಾಂಕ್​ಗಳ ವಿವರ ಇಲ್ಲಿದೆ. ಇವುಗಳಿಂದ ತೆರಿಗೆ ಉಳಿತಾಯ, ಹೆಚ್ಚಿನ ಬಡ್ಡಿ ಸಿಗುತ್ತದೆ.

Tax Saving Fixed Deposits: ತೆರಿಗೆ ಉಳಿತಾಯ ಎಫ್​ಡಿಗಳ ಮೇಲೆ ಅತ್ಯುತ್ತಮ ಬಡ್ಡಿ ನೀಡುವ ಬ್ಯಾಂಕ್​ಗಳಿವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 14, 2022 | 11:58 AM

ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳು (Fixed Deposits) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಾಡಲು ಮತ್ತು ತೆರಿಗೆಯನ್ನು ಉಳಿಸಲು ಅವಕಾಶ ನೀಡುತ್ತವೆ. ತೆರಿಗೆ ಉಳಿಸುವವರಲ್ಲಿ ಇದು ಅತ್ಯಂತ ಜನಪ್ರಿಯ ಆಯ್ಕೆಯ ಪೈಕಿ ಒಂದಾಗಿದೆ. ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳು ವಾರ್ಷಿಕ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುತ್ತವೆ, ಆದರೆ ಅದು ಒಂದೇ ಖಾತೆಯ ಸಂದರ್ಭದಲ್ಲಿ ಮಾತ್ರ. ತೆರಿಗೆ ಉಳಿತಾಯ ಎಫ್​ಡಿ ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಅಂದರೆ ಅಷ್ಟು ಸಮಯದವರೆಗೆ ಮುಂಚಿತವಾಗಿಯೇ ಆ ಹಣವನ್ನು ಹಿಂತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ತೆರಿಗೆ ಉಳಿತಾಯ ಠೇವಣಿಗಳ ಮೇಲೆ ಬರುವ ಬಡ್ಡಿಯು ತೆರಿಗೆದಾರರ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಆಧರಿಸಿ, ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ತೆರಿಗೆ ಉಳಿಸುವ ಎಫ್‌ಡಿಗಳಲ್ಲಿ ಪಡೆದ ಅಥವಾ ಮರುಹೂಡಿಕೆ ಮಾಡಿದ ಬಡ್ಡಿಯು ಒಂದು ಆರ್ಥಿಕ ವರ್ಷದಲ್ಲಿ ಸಾಮಾನ್ಯ ಗ್ರಾಹಕರಿಗೆ ರೂ. 40,000 ಮತ್ತು ಹಿರಿಯ ವ್ಯಕ್ತಿಗಳಿಗೆ ರೂ. 50,000 ತಲುಪಿದಾಗ TDS (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಅನ್ನು ಕಡಿತಗೊಳಿಸಲಾಗುತ್ತದೆ ಎಂದು ಹೂಡಿಕೆದಾರರು ಗಮನಿಸಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಎರಡು ಹಂತಗಳಲ್ಲಿ ಶೇ 4.90ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಬಡ್ಡಿದರಗಳು ಹೆಚ್ಚುತ್ತಲೇ ಇರುವುದರಿಂದ ದೀರ್ಘಾವಧಿಯ ಠೇವಣಿ ಮಾಡಲು ಸಿದ್ಧರಿರುವವರಿಗೆ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಇದರ ಜತೆಗೆ ತೆರಿಗೆ ಉಳಿಸಲು ನೋಡುತ್ತಿರುವಾಗ ಅಕಾಲಿಕವಾಗಿ ಹಿಂಪಡೆಯದೆ ಐದು ವರ್ಷಗಳು ಹಾಗೇ ಎಫ್​ಡಿ ಉಳಿಸಿರಬೇಕು. ಮೂರು ಖಾಸಗಿ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳ ಮೇಲೆ ಶೇ 7.10 ವರೆಗೆ ಆದಾಯವನ್ನು ನೀಡುತ್ತವೆ. ಅವು ಯಾವುವು ಎಂಬುದನ್ನು ನೋಡೋಣ.

ಡಿಸಿಬಿ ಬ್ಯಾಂಕ್

ಡಿಸಿಬಿ ಬ್ಯಾಂಕ್​ನ ತೆರಿಗೆ-ಉಳಿತಾಯ ನಿಶ್ಚಿತ ಠೇವಣಿ ಆಯ್ಕೆಯಲ್ಲಿ ಒಬ್ಬರು ಕನಿಷ್ಠ 1,000 ರೂಪಾಯಿ ಠೇವಣಿ ಮಾಡಬಹುದು ಮತ್ತು ಗರಿಷ್ಠ ರೂ. 1,50,000 ಹೂಡಿಕೆ ಮಾಡಬಹುದು. ಒಬ್ಬರು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಡಿಸಿಬಿ ಬ್ಯಾಂಕ್ ತೆರಿಗೆ ಉಳಿಸುವ ಎಫ್​ಡಿಯಲ್ಲಿ ಹಣವನ್ನು ಠೇವಣಿ ಮಾಡಬಹುದು ಮತ್ತು ಮಾರ್ಗಸೂಚಿಗಳ ಪ್ರಕಾರ, ಅವಧಿಗೆ ಮುಂಚಿತವಾಗಿ ಹಿಂಪಡೆಯುವುದನ್ನು ಅನುಮತಿಸಲಾಗುವುದಿಲ್ಲ. ಮೇ 21, 2022ರಂತೆ, ಡಿಸಿಬಿ ಬ್ಯಾಂಕ್ ಹಿರಿಯರಿಗೆ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ 7.10 ಬಡ್ಡಿದರವನ್ನು ನೀಡುತ್ತದೆ. ಆದರೆ ಸಾಮಾನ್ಯ ಗ್ರಾಹಕರು ಶೇ 6.60 ಬಡ್ಡಿದರವನ್ನು ಪಡೆಯುತ್ತಾರೆ. ಡಿಸಿಬಿ ಬ್ಯಾಂಕ್ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳ ಮೇಲೆ ಸ್ವಯಂ ನವೀಕರಣವನ್ನು (ಆಟೋ ರಿನೀವಲ್) ಅನುಮತಿಸುವುದಿಲ್ಲ ಮತ್ತು ಖಾತೆಯ ಮೇಲೆ ಯಾವುದೇ ಸಾಲವನ್ನು ತೆಗೆದುಕೊಳ್ಳಲು ಆಗುವುದಿಲ್ಲ.

ಯೆಸ್ ಬ್ಯಾಂಕ್

ಯೆಸ್ ಬ್ಯಾಂಕ್ ತೆರಿಗೆ-ಉಳಿತಾಯ ನಿಶ್ಚಿತ ಠೇವಣಿ ಕನಿಷ್ಠ ಮೊತ್ತ 1,000 ರೂ. ಮತ್ತು ಗರಿಷ್ಠ ಠೇವಣಿ ಮಿತಿ 1,50,000. ಇದು ಒಂದು ಆರ್ಥಿಕ ವರ್ಷಕ್ಕೆ ಅನ್ವಯಿಸುತ್ತದೆ. ಈ ತೆರಿಗೆ ಉಳಿತಾಯ ಠೇವಣಿ 5 ವರ್ಷಗಳ ಲಾಕ್-ಇನ್ ಅವಧಿ ಮತ್ತು ನಾಮಿನಿ ಸೌಲಭ್ಯವನ್ನು ಹೊಂದಿದೆ. ಯೆಸ್ ಬ್ಯಾಂಕ್ ಇಂಟರ್​ನೆಟ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಅಥವಾ ಸ್ಥಳೀಯ ಶಾಖೆಯಲ್ಲಿ ತೆರೆಯಬಹುದಾದ ತೆರಿಗೆ-ಉಳಿತಾಯ ನಿಶ್ಚಿತ ಠೇವಣಿ ಖಾತೆಗಳನ್ನು ನೀಡುತ್ತದೆ. ಯೆಸ್ ಬ್ಯಾಂಕ್ ಹಿರಿಯ ನಿವಾಸಿಗಳಿಗೆ ತೆರಿಗೆ ಉಳಿಸುವ ನಿಶ್ಚಿತ ಠೇವಣಿಗಳ ಮೇಲೆ ಶೇಕಡಾ 7ರಷ್ಟು ರಿಟರ್ನ್ ನೀಡುತ್ತದೆ. ಆದರೆ ಸಾಮಾನ್ಯ ಗ್ರಾಹಕರು ಜೂನ್ 6, 2022ರಿಂದ ಜಾರಿಗೆ ಬರುವಂತೆ ಶೇಕಡಾ 6.25ರಷ್ಟು ರಿಟರ್ನ್ ಪಡೆಯುತ್ತಾರೆ. ಈ ಬಡ್ಡಿದರಗಳು ಮಾಸಿಕ ಅಥವಾ ತ್ರೈಮಾಸಿಕ ಪಾವತಿ ಆಯ್ಕೆಗಳನ್ನು ಹೊಂದಿರುತ್ತವೆ ಮತ್ತು ಖಾತೆಯ ಬಾಕಿಯನ್ನು ಮೆಚ್ಯೂರಿಟಿ ಸಂದರ್ಭದಲ್ಲಿ ಮರುಹೂಡಿಕೆ ಮಾಡಬಹುದು.

RBL ಬ್ಯಾಂಕ್

ಆರ್​ಬಿಎಲ್​ ಬ್ಯಾಂಕ್ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಖಾತೆಗಳನ್ನು ರೂ. 100 ರಿಂದ ರೂ. 100ರ ಗುಣಕದಲ್ಲಿ ರೂ. 1,50,000 ವರೆಗಿನ ಮೊತ್ತದೊಂದಿಗೆ ತೆರೆಯಬಹುದು. ಈ ತೆರಿಗೆ ಉಳಿತಾಯ ಎಫ್​ಡಿ ಕೂಡ 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ ಮತ್ತು ನಾಮಿನಿ ಆಯ್ಕೆಯನ್ನು ಹೊಂದಿದೆ. ಹೆಸರೇ ಸೂಚಿಸುವಂತೆ, ಆರ್​ಬಿಐ ಬ್ಯಾಂಕ್ ತೆರಿಗೆ ಉಳಿತಾಯ ಠೇವಣಿ ಭಾಗಶಃ ಅಥವಾ ಅಕಾಲಿಕ ಹಿಂಪಡೆಯುವಿಕೆಗೆ ಅವಕಾಶ ನೀಡುವುದಿಲ್ಲ. ಮತ್ತು ಜಂಟಿ ಠೇವಣಿಗಳ ಸಂದರ್ಭದಲ್ಲಿ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳು ಪ್ರಾಥಮಿಕ ಠೇವಣಿದಾರರಿಗೆ ಮಾತ್ರ ಲಭ್ಯವಿರುತ್ತವೆ. ಆರ್​ಬಿಎಲ್​ ಬ್ಯಾಂಕ್ ಪ್ರಸ್ತುತ ತನ್ನ ತೆರಿಗೆ-ಉಳಿತಾಯ ಎಫ್​ಡಿ ಯೋಜನೆಯಲ್ಲಿ ಶೇ 6.80 ಆದಾಯವನ್ನು ಹಿರಿಯ ನಾಗರಿಕರಿಗೆ ಮತ್ತು ಶೇ 6.30 ರಿಟರ್ನ್ ಅನ್ನು ಸಾಮಾನ್ಯ ಗ್ರಾಹಕರಿಗೆ ನೀಡುತ್ತದೆ. ಈ ಬಡ್ಡಿದರಗಳು 8 ಜೂನ್ 2022ರಿಂದ ಜಾರಿಗೆ ಬಂದಿದೆ.

(ಗಮನಿಸಿ: ಬಡ್ಡಿದರಗಳ ಮಾಹಿತಿಯನ್ನು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಿಂದ ತೆಗೆದುಕೊಳ್ಳಲಾಗಿದೆ)

ಇದನ್ನೂ ಓದಿ: FD Interest Rate: ಕೊಟಕ್​ ಮಹೀಂದ್ರಾ, ಬಂಧನ್​ ಬ್ಯಾಂಕ್​ನಿಂದ ಎಫ್​ಡಿ ಬಡ್ಡಿ ದರ ಏರಿಕೆ; ಇದೇ ಮಾರ್ಗದಲ್ಲಿ ಇನ್ನಷ್ಟು ಬ್ಯಾಂಕ್​ಗಳು

Published On - 11:58 am, Tue, 14 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್