Gold Price Today: ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಳಿತವಿಲ್ಲ; ಬೆಳ್ಳಿ ದರ 500 ರೂ. ಕುಸಿತ
Silver Price Today: ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,000 ರೂ. ಇದ್ದುದು ಇಂದು 61,500 ರೂ. ಆಗಿದೆ. ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ.
ಬೆಂಗಳೂರು: ಭಾರತದಲ್ಲಿ ನಿನ್ನೆ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 500 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 2 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 48,350 ರೂ. ಇದ್ದುದು 48,360 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,750 ರೂ. ಇದ್ದುದು 52,760 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,430 ರೂ. ಮುಂಬೈ- 48,360 ರೂ, ದೆಹಲಿ- 48,360 ರೂ, ಕೊಲ್ಕತ್ತಾ- 48,360 ರೂ, ಬೆಂಗಳೂರು- 48,360 ರೂ, ಹೈದರಾಬಾದ್- 48,360 ರೂ, ಕೇರಳ- 48,360 ರೂ, ಪುಣೆ- 48,410 ರೂ, ಮಂಗಳೂರು- 48,360 ರೂ, ಮೈಸೂರು- 48,360 ರೂ. ಇದೆ. (Source)
ಇದನ್ನೂ ಓದಿ: Gold Price Today: ಭಾರತದಲ್ಲಿ ಚಿನ್ನದ ಬೆಲೆ 270 ರೂ. ಹೆಚ್ಚಳ; ಬೆಳ್ಳಿ ದರ ಕೊಂಚ ಏರಿಕೆ
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,830 ರೂ, ಮುಂಬೈ- 52,760 ರೂ, ದೆಹಲಿ- 52,760 ರೂ, ಕೊಲ್ಕತ್ತಾ- 52,760 ರೂ, ಬೆಂಗಳೂರು- 52,760 ರೂ, ಹೈದರಾಬಾದ್- 52,760 ರೂ, ಕೇರಳ- 52,760 ರೂ, ಪುಣೆ- 52,810 ರೂ, ಮಂಗಳೂರು- 52,760 ರೂ, ಮೈಸೂರು- 52,760 ರೂ. ಆಗಿದೆ.
ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆಯಲ್ಲಿ ಇಂದು 500 ರೂ. ಇಳಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,000 ರೂ. ಇದ್ದುದು ಇಂದು 61,500 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,300 ರೂ, ಮೈಸೂರು- 67,300 ರೂ., ಮಂಗಳೂರು- 67,300 ರೂ., ಮುಂಬೈ- 62,300 ರೂ, ಚೆನ್ನೈ- 67,300 ರೂ, ದೆಹಲಿ- 61,500 ರೂ, ಹೈದರಾಬಾದ್- 67,300 ರೂ, ಕೊಲ್ಕತ್ತಾ- 61,500 ರೂ. ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ