Agnipath Scheme: ಅಗ್ನಿ ಪಥ್ ಯೋಜನೆ ವೇತನ, ಅರ್ಹತೆ ಮತ್ತಿತರ ಸವಲತ್ತಿನ ವಿವರ ಇಲ್ಲಿದೆ
ಕೇಂದ್ರ ಸರ್ಕಾರದಿಂದ ಅಗ್ನಿಪಥ್ ಯೋಜನೆ ಅನಾವರಣ ಮಾಡಲಾಗಿದೆ. ಅದರ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಹೆಚ್ಚುತ್ತಿರುವ ಸಂಬಳ, ಪಿಂಚಣಿಗಳ (Pension) ಬಿಲ್ ಅನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೈನಿಕರ ನೇಮಕಾತಿಗಾಗಿ ‘ಅಗ್ನಿಪಥ್’ ಎಂಬ ಹೊಸ ಯೋಜನೆಯನ್ನು ಅನಾವರಣಗೊಳಿಸಲಾಯಿತು. ಇದರಲ್ಲಿ ಹೆಚ್ಚಾಗಿ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಎರಡು ವರ್ಷಗಳಿಂದ ಈ ಬಗ್ಗೆ ವ್ಯಾಪಕವಾದ ಚರ್ಚೆಯ ನಂತರ ಹೊಸ ಯೋಜನೆಯನ್ನು ಘೋಷಿಸಲಾಗಿದೆ. ಯೋಜನೆಯಡಿ ನೇಮಕಗೊಳ್ಳುವ ಸೈನಿಕರನ್ನು “ಅಗ್ನಿವೀರ್” ಎಂದು ಕರೆಯಲಾಗುತ್ತದೆ. ಸದ್ಯಕ್ಕೆ, ಸೇನೆಯು 10 ವರ್ಷಗಳ ಆರಂಭಿಕ ಅವಧಿಗೆ ಶಾರ್ಟ್ ಸರ್ವೀಸ್ ಕಮಿಷನ್ ಅಡಿಯಲ್ಲಿ ಯುವಜನರನ್ನು ನೇಮಿಸಿಕೊಳ್ಳುತ್ತದೆ, ಇದನ್ನು 14 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಅರ್ಹತೆ, ಪರಿಹಾರ ಮತ್ತು ಇತರ ವಿವರಗಳನ್ನು ಇಲ್ಲಿ ನೋಡೋಣ:
ಅರ್ಹತೆ: ಅರ್ಜಿದಾರರ ವಯೋಮಿತಿ ಹದಿನೇಳೂವರೆ ವರ್ಷದಿಂದ 21 ವರ್ಷ
ನೇಮಕಾತಿ:
– ಅಭ್ಯರ್ಥಿಗಳು ಈ ಸೇವಾ ಕಾಯ್ದೆ ಅಡಿಯಲ್ಲಿ ಸೇರ್ಪಡೆ ಆಗುವಾಗ ಸೇವಾ ಅವಧಿ 4 ವರ್ಷಗಳು.
– ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
– ಸೇವೆ ಅವಧಿಯಲ್ಲಿ ತೋರಿದ ಪ್ರದರ್ಶನದಲ್ಲಿ ಮೆರಿಟ್ ಮತ್ತು ಪ್ರದರ್ಶನದ ಆಧಾರಿತವಾಗಿ ಕೇಂದ್ರೀಕೃತ ಪಾರದರ್ಶಕ ಸ್ಕ್ರೀನಿಂಗ್ ಅಸೆಸ್ಮೆಂಟ್ ಮಾಡಲಾಗುವುದು.
– ಶೇ 100ರಷ್ಟು ಅಭ್ಯರ್ಥಿಗಳು ಸ್ವಯಂಪ್ರೇರಿತ ಆಧಾರವಾಗಿ ಮಾಮೂಲು ಕೇಡರ್ನಲ್ಲಿ ನೋಂದಣಿಗೆ ಅಪ್ಲೈ ಮಾಡಬಹುದು.
ಅಗ್ನಿಪಥ್ ಯೋಜನೆ: ಅಗ್ನಿವೀರ್‌ನ ಸಂಬಳ ಎಷ್ಟು?
ಒಮ್ಮೆ ಅಗ್ನಿವೀರ್ 4 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದರೆ, ಅವರಿಗೆ ಒಂದು ಬಾರಿ ಒಂದು ಬಾರಿ ‘ಸೇವಾನಿಧಿ’ ಪ್ಯಾಕೇಜ್ ಪಾವತಿಸಲಾಗುತ್ತದೆ. ಸೇವಾ ನಿಧಿಯು ಅದರ ಮೇಲಿನ ಸಂಚಿತ ಬಡ್ಡಿಯನ್ನು ಒಳಗೊಂಡಂತೆ ಅವರ ಕೊಡುಗೆಯನ್ನು ಒಳಗೊಂಡಿರುತ್ತದೆ ಮತ್ತು ಕೆಳಗೆ ಸೂಚಿಸಲಾದ ಬಡ್ಡಿಯನ್ನು ಒಳಗೊಂಡಂತೆ ಅವರ ಕೊಡುಗೆಯ ಸಂಚಿತ ಮೊತ್ತಕ್ಕೆ ಸಮಾನವಾದ ಸರ್ಕಾರದಿಂದ ಹೊಂದಾಣಿಕೆಯ ಕೊಡುಗೆಯನ್ನು ಒಳಗೊಂಡಿರುತ್ತದೆ:
– ಅಗ್ನಿವೀರ್ಗೆ ಆಕರ್ಷಕ ವೇತನ ಪ್ಯಾಕೇಜ್ ಇರುತ್ತದೆ.
– ಅಗ್ನಿವೀರ್ 4 ವರ್ಷದ ಸೇವೆ ಪೂರ್ಣಗೊಳಿಸಿದ ಮೇಲೆ ಒಂದು ಸಲದ “ಸೇವಾನಿಧಿ” ಪ್ಯಾಕೇಜ್ ನೀಡಲಾಗುತ್ತದೆ.
– ಸೇವಾ ನಿಧಿಯಲ್ಲಿ ಅವರ ಕೊಡುಗೆ, ಅದರಲ್ಲಿ ಸಂಚಿತ ಬಡ್ಡಿ ಹಾಗೂ ಅದಕ್ಕೆ ಸರಿಸಮನಾಗಿ ಸರ್ಕಾರದಿಂದ ಮೊತ್ತವನ್ನು ನೀಡಲಾಗುತ್ತದೆ. ಅದರ ವಿವರ ಹೀಗಿದೆ:
ಕಸ್ಟಮೈಸ್ಡ್ ಪ್ಯಾಕೇಜ್ (ತಿಂಗಳಿಗೆ)
ಮೊದಲ ವರ್ಷ- 30,000 ರೂ.
ಎರಡನೇ ವರ್ಷ- 33,000 ರೂ.
ಮೂರನೇ ವರ್ಷ- 36,500 ರೂ.
ನಾಲ್ಕನೇ ವರ್ಷ- 40,000 ರೂ.
ಕೈಗೆ ಬರುವುದು (ಶೇ 70ರಷ್ಟು) (ತಿಂಗಳಿಗೆ)
ಮೊದಲ ವರ್ಷ- 21,000 ರೂ.
ಎರಡನೇ ವರ್ಷ- 23,100 ರೂ.
ಮೂರನೇ ವರ್ಷ- 25,580 ರೂ.
ನಾಲ್ಕನೇ ವರ್ಷ- 28,000 ರೂ.
ಅಗ್ನಿವೀರ್ ನಿವೃತ್ತಿ ನಿಧಿಗೆ ಕೊಡುಗೆ (ತಿಂಗಳಿಗೆ)
ಮೊದಲ ವರ್ಷ- 9,000 ರೂ.
ಎರಡನೇ ವರ್ಷ- 9,900 ರೂ.
ಮೂರನೇ ವರ್ಷ- 10,950 ರೂ.
ನಾಲ್ಕನೇ ವರ್ಷ- 12,000 ರೂ.
ಒಟ್ಟು- 5.02 ಲಕ್ಷ ರೂಪಾಯಿ
ಅಗ್ನಿವೀರ್ ನಿವೃತ್ತಿ ನಿಧಿಗೆ ಸರ್ಕಾರದ ಕೊಡುಗೆ (ತಿಂಗಳಿಗೆ)
ಮೊದಲ ವರ್ಷ- 9,000 ರೂ.
ಎರಡನೇ ವರ್ಷ- 9,900 ರೂ.
ಮೂರನೇ ವರ್ಷ- 10,950 ರೂ.
ನಾಲ್ಕನೇ ವರ್ಷ- 12,000 ರೂ.
ಒಟ್ಟು- 5.02 ಲಕ್ಷ ರೂಪಾಯಿ
4 ವರ್ಷದ ನಂತರ ನಿರ್ಗಮಿಸುವಾಗ 11.71 ಲಕ್ಷ ರೂಪಾಯಿ ನಿವೃತ್ತಿ ನಿಧಿಯಾಗಿ ದೊರೆಯುತ್ತದೆ (ಬಡ್ಡಿ ಮೊತ್ತವೂ ಒಳಗೊಂಡಂತೆ ಅನ್ವಯಿತ ದರದಲ್ಲಿ ಪಾವತಿಸಲಾಗುತ್ತದೆ).
ಅಗ್ನಿಪಥ ಯೋಜನೆ: ಸಾವು, ಅಂಗವೈಕಲ್ಯ ಪರಿಹಾರ
– ನಾನ್ ಕಾಂಟ್ರಿಬ್ಯೂಟರಿ ಜೀವ ವಿಮೆ ರೂ. 48 ಲಕ್ಷ.
– ಸೇವಾ ಸಂದರ್ಭದಲ್ಲಿ ಮೃತಪಟ್ಟಲ್ಲಿ ಹೆಚ್ಚುವರಿ ಎಕ್ಸ್ಗ್ರೇಷಿಯಾ 44 ಲಕ್ಷ ರೂಪಾಯಿ.
– ಬಾಕಿ ಉಳಿದ 4 ವರ್ಷದ ಅವಧಿಗೆ ಸೇವಾ ನಿಧಿಯ ಭಾಗದ ಕೊಡುಗೆ ಪಾವತಿ
ಅಂಗವೈಕಲ್ಯ ಪರಿಹಾರ
– ವೈದ್ಯಕೀಯ ಸಂಸ್ಥೆಗಳ ನಿರ್ಧಾರದಂತೆ ವೈಕಲ್ಯದ ಪ್ರಮಾಣ ಎಷ್ಟು ಎಂಬ ಆಧಾರದಲ್ಲಿ ಪರಿಹಾರ
– ಒಂದು ಸಲದ ಎಕ್ಸ್ಗ್ರೇಷಿಯಾ 44, 25 ಹಾಗೂ 15 ಲಕ್ಷ ರೂಪಾಯಿ ಕ್ರಮವಾಗಿ ಶೇ 100, ಶೇ 75 ಹಾಗೂ ಶೇ 50ರಷ್ಟು ಅಂಗವೈಕಲ್ಯಕ್ಕೆ.
ಅಗ್ನಿಪಥ್ ಯೋಜನೆ: ಹಣಕಾಸಿನ ಪ್ಯಾಕೇಜ್, ಭತ್ಯೆಗಳು
– ಸೇವಾ ನಿಧಿ: ವೈಯಕ್ತಿಕವಾಗು ಶೇ 30ರಷ್ಟನ್ನು ಪ್ರತಿ ತಿಂಗಳು ಕೊಡುಗೆಯಾಗಿ ನೀಡಬೇಕು.
– ಅಷ್ಟೇ ಮೊತ್ತವನ್ನು ಸರ್ಕಾರದಿಂದ ಕೊಡು್ಎಯಾಗಿ ನೀಡಲಾಗುತ್ತದೆ.
– ನಿವೃತ್ತಿ ನಿಧಿ 10.04 ಲಕ್ಷ ಹಾಗೂ ಸಂಚಿತ ಬಡ್ಡಿಯು ನಾಲ್ಕು ವರ್ಷದ ನಂತರ ಆದಾಯ ತೆರಿಗೆ ನಂತರ ವಿನಾಯಿತಿ.
ಅವಧಿ ಪೂರ್ಣಗೊಂಡ ನಂತರ
– ಸೇವಾ ಅವಧಿ 4 ವರ್ಷ ಪೂರ್ಣಗೊಂಡ ನಂತರ ಎಲ್ಲ ಅಭ್ಯರ್ಥಿಗಳು ಸೇವಾನಿಧಿಗೆ ಅರ್ಹರು
– ಕೌಶಲ ಪಡೆದ ಪ್ರಮಾಣಪತ್ರ ಮತ್ರ ಉನ್ನತ ಶಿಕ್ಷಣ ಕ್ರೆಡಿಟ್.
2022-23ರ ರಕ್ಷಣಾ ಬಜೆಟ್‌ನಲ್ಲಿ 5,25,166 ಕೋಟಿ ರೂ. ರಕ್ಷಣಾ ಪಿಂಚಣಿಗಾಗಿ, 1,19,696 ಕೋಟಿ ರೂ. ರಾಜಸ್ವ ವೆಚ್ಚಕ್ಕೆ, 2,33,000 ಕೋಟಿ ರೂ. ಆದಾಯದ ವೆಚ್ಚವು ವೇತನ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆ ಮೇಲಿನ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Tue, 14 June 22