AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICICI Prudential: ಐಸಿಐಸಿಐ ಪ್ರುಡೆನ್ಷಿಯಲ್​ನಿಂದ ಹಣಕಾಸು ವರ್ಷ 2022ಕ್ಕೆ ರೂ. 968.8 ಕೋಟಿ ವಾರ್ಷಿಕ ಬೋನಸ್ ಘೋಷಣೆ

ಹಣಕಾಸು ವರ್ಷ 2022ಕ್ಕೆ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಷೂರೆನ್ಸ್​ನಿಂದ ದಾಖಲೆಯ 968.8 ಕೋಟಿ ರೂಪಾಯಿಯ ಬೋನಸ್ ಘೋಷಣೆ ಮಾಡಲಾಗಿದೆ.

ICICI Prudential: ಐಸಿಐಸಿಐ ಪ್ರುಡೆನ್ಷಿಯಲ್​ನಿಂದ ಹಣಕಾಸು ವರ್ಷ 2022ಕ್ಕೆ ರೂ. 968.8 ಕೋಟಿ ವಾರ್ಷಿಕ ಬೋನಸ್ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 20, 2022 | 6:40 PM

ಐಸಿಐಸಿಐ ಬ್ಯಾಂಕಿನ (ICICI Bank) ಜೀವ ವಿಮಾ ಅಂಗವಾದ ಐಸಿಐಸಿಐ ಪ್ರುಡೆನ್ಷಿಯಲ್ ಸೋಮವಾರ ಎಲ್ಲ ಅರ್ಹ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ಹಣಕಾಸು ವರ್ಷ 2022ಕ್ಕೆ ರೂ. 968.8 ಕೋಟಿ ವಾರ್ಷಿಕ ಬೋನಸ್ ಅನ್ನು ಘೋಷಿಸಿದೆ. ಇದು ಸತತ ಹದಿನಾರನೇ ವರ್ಷದ ಬೋನಸ್ ಪಾವತಿಯಾಗಿದೆ ಮತ್ತು ಕಂಪೆನಿಯು ಇಲ್ಲಿಯವರೆಗಿನ ಅತಿ ಹೆಚ್ಚು, ಹಣಕಾಸು ವರ್ಷ 2021ರ ಬೋನಸ್ ಅನ್ನು ಶೇ 12ರಷ್ಟು ಮೀರಿದೆ. ಮಾರ್ಚ್ 31, 2022ರಿಂದ ಜಾರಿಯಲ್ಲಿರುವ ಎಲ್ಲ ಪಾರ್ಟಿಸಿಪೇಟಿಂಗ್ ಪಾಲಿಸಿಗಳು ಈ ವಾರ್ಷಿಕ ಬೋನಸ್ ಅನ್ನು ಸ್ವೀಕರಿಸಲು ಅರ್ಹವಾಗಿದ್ದು, ಇದನ್ನು ಪಾಲಿಸಿದಾರರ ಪ್ರಯೋಜನಗಳಿಗೆ ಸೇರಿಸಲಾಗುತ್ತದೆ. ಈ ಬಗ್ಗೆ ನೀಡಿದ ಒಂದು ಹೇಳಿಕೆಯಲ್ಲಿ, ಐಸಿಐಸಿಐ ಪ್ರುಡೆನ್ಷಿಯಲ್​ನ ಸುಮಾರು ಒಂದು ಮಿಲಿಯನ್ ಪಾರ್ಟಿಸಿಪೇಟಿಂಗ್ ಪಾಲಿಸಿದಾರರು ಇದರಿಂದ ಪ್ರಯೋಜನ ಪಡೆಯುತ್ತಾರೆ.

ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎನ್‌ಎಸ್ ಕಣ್ಣನ್ ಮಾತನಾಡಿ, “ಹಣಕಾಸು ವರ್ಷ 2022ಕ್ಕೆ ವಾರ್ಷಿಕ 968.8 ಕೋಟಿ ಬೋನಸ್ ಅನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಕಂಪೆನಿಯು ಪ್ರಾರಂಭದಿಂದಲೂ ಇದುವರೆಗೆ ಘೋಷಿಸಿದ ಅತ್ಯಧಿಕ ಪ್ರಮಾಣವಾಗಿದೆ. ಜೊತೆಗೆ ಹಣಕಾಸು ವರ್ಷ 2021ಕ್ಕೆ ಹೋಲಿಸಿದರೆ ಇದು ಶೇ 12ಕ್ಕೂ ಹೆಚ್ಚಾಗಿದೆ. ಗ್ರಾಹಕರು ತಮ್ಮ ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಸಾಧಿಸಲು ತಮ್ಮ ಜೀವನದ ಉಳಿತಾಯವನ್ನು ನಮಗೆ ಒಪ್ಪಿಸುತ್ತಾರೆ ಮತ್ತು ಈ ಬೋನಸ್ ನಮ್ಮ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ಅವರ ಹಣಕಾಸಿನ ಗುರಿಗಳತ್ತ ಒಂದು ಹೆಜ್ಜೆ ಹತ್ತಿರ ಹೋಗಲು ಅನುವು ಮಾಡಿಕೊಡುತ್ತದೆ ಎಂದು ನಾವು ನಂಬುತ್ತೇವೆ,” ಎಂದಿದ್ದಾರೆ

ಐಸಿಐಸಿಐ ಪ್ರುಡೆನ್ಷಿಯಲ್ ಹೇಳಿಕೆಯಲ್ಲಿ, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ನೀಡುವ ಹೊಸ ಪಾರ್ಟಿಸಿಪೇಟಿಂಗ್ ಉತ್ಪನ್ನಗಳ ಶ್ರೇಣಿಯು ಗ್ರಾಹಕರಿಗೆ ಬಂಡವಾಳ ಖಾತರಿಯ ಸೌಕರ್ಯ ಮತ್ತು ಘೋಷಿತ ಬೋನಸ್‌ಗಳ ರೂಪದಲ್ಲಿ ಬೆಳವಣಿಗೆಯನ್ನು ಒದಗಿಸುತ್ತದೆ. ಇದು ಜೀವನ ರಕ್ಷಣೆಯ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದಲ್ಲದೆ ದೃಢವಾದ ಅಪಾಯ ನಿರ್ವಹಣೆ ಅಭ್ಯಾಸಗಳೊಂದಿಗೆ ಬಲವಾದ ನಿಧಿ ನಿರ್ವಹಣಾ ಸಾಮರ್ಥ್ಯಗಳು ಕಂಪೆನಿಯು ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ಖರೀದಿಯ ಸಮಯದಲ್ಲಿ ಲಾಭದ ವಿವರಣೆಯಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಬೋನಸ್‌ನೊಂದಿಗೆ ಸ್ಥಿರವಾಗಿ ಪ್ರತಿಫಲವನ್ನು ನೀಡಲು ಅನುವು ಮಾಡಿಕೊಟ್ಟಿದೆ ಎಂದು ಜೀವ ವಿಮಾದಾರರು ಹೇಳಿದ್ದಾರೆ.

ಗ್ರಾಹಕರು ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವಲ್ಲಿ ಪಾರ್ಟಿಸಿಪೇಟಿಂಗ್ ಉತ್ಪನ್ನಗಳು ಎಷ್ಟು ಪರಿಣಾಮಕಾರಿ ಎಂಬುದನ್ನು ಇದು ಪ್ರದರ್ಶಿಸುತ್ತದೆ ಎಂದು ಅದು ಸೇರಿಸಿದೆ. ಕಣ್ಣನ್ ಅವರು ಮಾತನಾಡಿ, “ವಾರ್ಷಿಕ ಬೋನಸ್ ಘೋಷಣೆಯು ಕಂಪೆನಿ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಮತ್ತು ನಮ್ಮ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ ನೀಡಿದ ಭರವಸೆಗಳನ್ನು ಪೂರೈಸುತ್ತದೆ. ಗ್ರಾಹಕರ ರಕ್ಷಣೆ ಮತ್ತು ದೀರ್ಘಾವಧಿ ಉಳಿತಾಯ ಅಗತ್ಯಗಳನ್ನು ಪೂರೈಸುವ ನಿರಂತರ ಸಂಸ್ಥೆಯನ್ನು ನಿರ್ಮಿಸುವುದು ನಮ್ಮ ದೃಷ್ಟಿ. ಈ ಸೂಕ್ಷ್ಮತೆಯು ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ,” ಎಂದಿದ್ದಾರೆ

“ಗ್ರಾಹಕ ಕೇಂದ್ರಿತತೆ ಮತ್ತು ನಾವೀನ್ಯತೆಗೆ ಬಲವಾದ ಒತ್ತು ನೀಡುವುದರೊಂದಿಗೆ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಲು ಮತ್ತು ಕುಟುಂಬಗಳು ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ನಾವು ಉತ್ತಮ ಸ್ಥಾನದಲ್ಲಿರುತ್ತೇವೆ.” ಎಂದು ಕಣ್ಣನ್ ಹೇಳಿದ್ದಾರೆ. ಬಿಎಸ್‌ಇಯಲ್ಲಿ ಐಸಿಐಸಿಐ ಪ್ರುಡೆನ್ಷಿಯಲ್ ಷೇರುಗಳು ಶೇ 1.4ರಷ್ಟು ಕುಸಿದು, ರೂ. 501.30ಕ್ಕೆ ವ್ಯವಹಾರ ಮುಗಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ICICI Bank: ಕಸ್ಟಮ್ಸ್ ಸುಂಕ ಆನ್​ಲೈನ್ ಪಾವತಿ ಐಸಿಐಸಿಐ ಬ್ಯಾಂಕ್​ನಿಂದ ಇನ್ನು ಸುಲಭ

Published On - 6:40 pm, Mon, 20 June 22

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್