Cloudflare Outage: ಕ್ಲೌಡ್ಫ್ಲೇರ್ನಲ್ಲಿ ಮತ್ತೆ ಸಮಸ್ಯೆ: ಝೆರೊಧಾ, ಅಪ್ಸ್ಟಾಕ್ಸ್, ಕ್ಯಾನ್ವಾ ಸೇರಿ ಹಲವು ವೆಬ್ಸೈಟ್ಗಳು ಡೌನ್
ವೆಬ್ಸೈಟ್ಗಳು ಲೋಡ್ ಆಗುವ ಹಂತದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಗ್ರಾಹಕರು ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಪ್ರಮುಖ ಷೇರು ಬ್ರೋಕರೇಜ್ ಕಂಪನಿಗಳಾದ ಝೆರೋಧಾ, ಅಪ್ಸ್ಟಾಕ್ಸ್ ಹಾಗೂ ಡಿಸೈನಿಂಗ್ ಕಂಪನಿ ಕ್ಯಾನ್ವಾ ಸೇರಿದಂತೆ ಹಲವು ವೆಬ್ಸೈಟ್ಗಳು (Websites) ಮಂಗಳವಾರ ಮುಂಜಾನೆಯಿಂದ ಡೌನ್ ಆಗಿವೆ. ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಸಾವಿರಾರು ಮಂದಿ ತಮ್ಮ ಸಮಸ್ಯೆಗಳನ್ನು ವಿವರಿಸಿದ್ದು, ಇದಕ್ಕೆ ಕ್ಲೌಡ್ಫ್ಲೇರ್ ಸರ್ವರ್ಗಳ ವೈಫಲ್ಯ ಕಾರಣ ಎಂದು ಝೆರೋಧಾ ತನ್ನ ಗ್ರಾಹಕರಿಗೆ ನೋಟಿಫಿಕೇಶನ್ ಮೂಲಕ ಅಲರ್ಟ್ ಕಳಿಸಿದೆ. ಕಳೆದ ವಾರವು ಕ್ಲೌಡ್ಫ್ಲೇರ್ ವ್ಯವಸ್ಥೆಯಲ್ಲಿ (Directed Denial of Service – DDoS) ಸಮಸ್ಯೆ ಕಾಣಿಸಿಕೊಂಡಿತ್ತು. 2.6 ಕೋಟಿ ರಿಕ್ವೆಸ್ಟ್ಗಳು ಒಂದು ಸೆಕೆಂಡ್ಗೆ ಬಂದ ನಂತರ ಇಡೀ ವ್ಯವಸ್ಥೆ ಕುಸಿದುಬಿದ್ದಿತ್ತು. ಒಂದೇ ದಿನದಲ್ಲಿ ಸಮಸ್ಯೆ ಸರಿಪಡಿಸಲಾಗಿತ್ತು, ಆದರೆ ಮತ್ತೆ ಜೂನ್ 15ರಂದು ಕ್ಲೌಡ್ಫ್ಲೇರ್ ಡೌನ್ ಆಯಿತು. ಗಿಟ್ಲ್ಯಾಬ್, ಶಾಪಿಫೈನಂಥ ಜನಪ್ರಿಯ ವೆಬ್ಸೈಟ್ಗಳು ಆಗ ಬಿಸಿ ಅನುಭವಿಸಿದ್ದವು.
ಇಂದು (ಜೂನ್ 21) ಕಾಣಿಸಿಕೊಂಡಿರುವ ಸಮಸ್ಯೆಯಿಂದ ಕ್ಲೌಡ್ಫ್ಲೇರ್ ಸೇವೆ ಪಡೆಯುವ ಝಿರೋಧಾ, ಕ್ಯಾನ್ವಾ, ಕೈಟ್, ಪಿಕ್ಸಾಬೇ, ಅಪ್ಸ್ಟಾಕ್ಸ್, ಡಿಸ್ಕಾರ್ಡ್ ಸೇರಿದಂತೆ ಹಲವು ವೆಬ್ಸೈಟ್ಗಳು ಡೌನ್ ಆಗಿವೆ. ವೆಬ್ಸೈಟ್ಗಳು ಲೋಡ್ ಆಗುವ ಹಂತದಲ್ಲಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಗ್ರಾಹಕರು ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡಿದ ನಂತರ ಝಿರೋಧಾ ಮತ್ತಿತರ ಕಂಪನಿಗಳು ತಾಂತ್ರಿಕ ಸಮಸ್ಯೆಯ ಬಗ್ಗೆ ಸ್ಪಷ್ಟನೆ ನೀಡಿವೆ.
‘ಕ್ಲೌಡ್ಫ್ಲೇರ್ ವ್ಯವಸ್ಥೆಯ ಮೂಲಕ ಸಂಪರ್ಕ ಸಾಧಿಸಲು ಯತ್ನಿಸುವ ಸಂದರ್ಭದಲ್ಲಿ ಕೆಲ ಐಎಸ್ಪಿಗಳಲ್ಲಿ ತೊಂದರೆ ಎದುರಾಗಿದೆ. ಈ ವಿಚಾರವನ್ನು ಕ್ಲೌಡ್ಫ್ಲೇರ್ ಕಂಪನಿಯ ಗಮನಕ್ಕೆ ತಂದಿದ್ದೇವೆ. ಪರ್ಯಾಯ ಇಂಟರ್ನೆಟ್ ಸಂಪರ್ಕಗಳನ್ನು ಪ್ರಯತ್ನಿಸಿ’ ಎಂದು ಝೆರೊಧಾ ಟ್ವೀಟ್ ಮಾಡಿದೆ.
Cloudflare (network transit, proxy, security provider) used by most of the internet businesses around the world, is having a global outage. If you are unable to use our websites or apps, please try switching to a different ISP as a different route may work. pic.twitter.com/5NYsDJw6Vv
— Zerodha (@zerodhaonline) June 21, 2022
ಸಮಸ್ಯೆ ಎದುರಾಗಿರುವುದನ್ನು ಒಪ್ಪಿಕೊಂಡಿರುವ ಕ್ಲೌಡ್ಫ್ಲೇರ್ ತನ್ನ ಡ್ಯಾಶ್ಬೋರ್ಡ್ನಲ್ಲಿ ಮಾಹಿತಿ ಪ್ರದರ್ಶಿಸಿದೆ. ಹಲವು ಗ್ರಾಹಕರಿಗೆ ವೆಬ್ಸೈಟ್ಗಳನ್ನು ಸಂಪರ್ಕಿಸಲು ಆಗುತ್ತಿಲ್ಲ. ಟೈಮ್ಔಟ್ ಮೆಸೇಜ್ ಬರುತ್ತಿವೆ. ಸಮಸ್ಯೆಯ ಮೂಲ ಗುರುತಿಸಿದ್ದು, ಸರಿಪಡಿಸುವ ಪ್ರಯತ್ನಗಳು ಶುರುವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.
The Cloudflare team is aware of the current service issues and is working to resolve as quickly as possible. Updates can be followed here. https://t.co/22Yiyu3lKJ
— Cloudflare (@Cloudflare) June 21, 2022
ಏನಿದು ಕ್ಲೌಡ್ಫ್ಲೇರ್? ಇಂಟರ್ನೆಟ್ನಲ್ಲಿ ದತ್ತಾಂಶ ಮತ್ತು ವಹಿವಾಟು ಸುರಕ್ಷೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಕ್ಲೌಡ್ಫ್ಲೇರ್ ನಿರ್ವಹಿಸುತ್ತದೆ. ಇದು ವೆಬ್ಸೈಟ್ಗೆ ಭೇಟಿ ನೀಡುವವರು ಮತ್ತು ಕಸ್ಟಮರ್ ಹೋಸ್ಟಿಂಗ್ ಪ್ರೊವೈಡರ್ ನಡುವೆ ರಿವರ್ಸ್ ಪ್ರಾಕ್ಸಿ ರೀತಿಯಲ್ಲಿ ಕೆಲಸ ಮಾಡುತ್ತದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Tue, 21 June 22