ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಸ ನಿಯಮ: ಟೋಕನೈಜೇಶನ್ಗೆ ಅಂತಿಮ ದಿನಾಂಕ ನಿಗದಿಪಡಿಸಿದ ಆರ್‌ಬಿಐ
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು ಸೆಪ್ಟೆಂಬರ್ 30, 2022 ರೊಳಗೆ ಕಾರ್ಡಗಳನ್ನು ಟೋಕನೈಜೇಶನ್ಗೆ ಬದಲಾಯಿಸಿಕೊಳ್ಳಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗಡುವು ನೀಡಿದೆ.
ನವದೆಹಲಿ: ಕ್ರೆಡಿಟ್ (Credit Card) ಮತ್ತು ಡೆಬಿಟ್ ಕಾರ್ಡ್ (Debit Card) ಬಳಕೆದಾರರು ಸೆಪ್ಟೆಂಬರ್ 30, 2022 ರೊಳಗೆ ಕಾರ್ಡಗಳನ್ನು ಟೋಕನೈಜೇಶನ್ಗೆ ಬದಲಾಯಿಸಿಕೊಳ್ಳಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗಡುವು ನೀಡಿದೆ. ಗ್ರಾಹಕರ ವಹಿವಾಟುಗಳನ್ನು ಸುರಕ್ಷಿತವಾಗಿಡಲು ಆರ್‌ಬಿಐ ಹೊಸ ವ್ಯವಸ್ಥೆಯನ್ನು ಆರಂಭಿಸಿದೆ. ಟೋಕನೈಜೇಶನ್ನಿಂದ ಕಾರ್ಡ್ ವಿವರಗಳನ್ನು ಎನ್‌ಕ್ರಿಪ್ಟ್ ಮಾಡಿ ಟೋಕನ್ಆಗಿ ಸಂಗ್ರಹಿಸಲಾಗುತ್ತದೆ.
ಇದರಿಂದ ಗ್ರಾಹಕರು ವಿವರಗಳನ್ನು ಬಹಿರಂಗಪಡಿಸದೆ ಪಾವತಿ ಮಾಡಬಹುದಾಗಿದೆ. ಆರ್‌ಬಿಐ ಮಾರ್ಗಸೂಚಿ ಪ್ರಕಾರ ಕಾರ್ಡ್ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿದ ಡಿಜಿಟಲ್ ಟೋಕನ್‌ನೊಂದಿಗೆ ಬದಲಾಯಿಸುವುದನ್ನು ಕಡ್ಡಾಯಗೊಳಿಸಿದೆ.
ಹೆಚ್ಚಾಗಿ ಇದು ಕಾರ್ಡ್‌ದಾರರ ಆನ್‌ಲೈನ್ ವಹಿವಾಟಿನ ಅನುಭವಗಳನ್ನು ಸುಧಾರಿಸುತ್ತದೆ ಮತ್ತು ಆನ್‌ಲೈನ್ ವಂಚಕರಿಂದ ನಿಮ್ಮ ಕಾರ್ಡ್ ಮಾಹಿತಿಯನ್ನು ರಕ್ಷಿಸುತ್ತದೆ. ಅಸುರಕ್ಷಿತ ಆನ್‌ಲೈನ್ ಅಭ್ಯಾಸಗಳಿಗೆ ಪ್ರತಿಕ್ರಿಯೆಯಾಗಿ ಗ್ರಾಹಕರನ್ನು ರಕ್ಷಿಸಲು ಆರ್‌ಬಿಐ ಹೊಸ ನಿಯಮಗಳನ್ನು ಆರ್‌ಬಿಐ ರಚಿಸಿದೆ.
ಟೋಕನೈಜೇಶನ್ ಎಂದರೆ ನಿಮ್ಮ ಕಾರ್ಡ್ ವಿವರಗಳನ್ನು ಟೋಕನೊಂದಿಗೆ ಬದಲಾಯಿಸಿಕೊಳ್ಳುವುದೇ ಟೋಕನೈಜೇಶನ್. ಇದರಿಂದ ಇನ್ನೂ ಮುಂದೆ ಸಂಪರ್ಕರಹಿತ ಬ್ಯಾಂಕಿಂಗ್ಗೆ ಸಿವಿವಿ ನೀಡಬೇಕಾಗಿಲ್ಲ. ಇದು ಸಂಪೂರ್ಣವಾಗಿ ನೆಟ್ವರ್ಕ ಮೂಲಕ ಕಾರ್ಯನಿರ್ವಹಿಸುತ್ತದೆ. ಟೋಕನೈಜೇಶನ್ನಿಂದ ಡೇಟಾ ಕಳ್ಳತನವನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಆರ್‌ಬಿಐ ನೀಡಿರುವ ಮಾರ್ಗಸೂಚಿಗಳ ಪ್ರಕಾರ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕಾರ್ಡ್ ವಿತರಕರು ಅಥವಾ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ ಯಾವುದೇ ಘಟಕದಿಂದ ಸಂಗ್ರಹಿಸುವಹಾಗಿಲ್ಲ. ಈಗಾಗಲೇ ಸಂಗ್ರಹವಾಗಿರುವ ಯಾವುದೇ ಡೇಟಾವನ್ನು ಅಳಿಸುವುದು ಅವಶ್ಯಕ.
ಟೋಕನೈಸೇಶನ್ ವ್ಯವಸ್ಥೆಯು ಸಂಪೂರ್ಣವಾಗಿ ಉಚಿತವಾಗಿದೆ. ಟೋಕನೈಸೇಶನ್ ದೇಶೀಯ ಆನ್‌ಲೈನ್ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ.