AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR: ಡಿ. 31ರವರೆಗೂ 8.18 ಕೋಟಿ ಐಟಿಆರ್​ಗಳ ಸಲ್ಲಿಕೆ; ಇದು ಹೊಸ ದಾಖಲೆ

Income Tax Returns: 2023-24ರ ಅಸೆಸ್ಮೆಂಟ್ ವರ್ಷಕ್ಕೆ ಐಟಿ ರಿಟರ್ನ್ ಫೈಲ್ ಮಾಡಿರುವವರ ಸಂಖ್ಯೆ ಡಿಸೆಂಬರ್ 31ರವರೆಗೂ 8.18 ಕೋಟಿ ಆಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ. ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿರುವ ಇಲಾಖೆ, ಈ ಬಾರಿ ಐಟಿಆರ್ ಸಲ್ಲಿಕೆಯಲ್ಲಿ ದಾಖಲೆ ಆಗಿದೆ ಎಂದು ಹೇಳಿದೆ. ಹಾಗೆಯೇ, ಡಿಸೆಂಬರ್ 31ರವರೆಗೂ 1.60 ಕೋಟಿ ಆಡಿಟ್ ರಿಪೋರ್ಟ್ ಮತ್ತಿತರ ಫಾರ್ಮ್​​ಗಳನ್ನು ಫೈಲ್ ಮಾಡಲಾಗಿದೆ.

ITR: ಡಿ. 31ರವರೆಗೂ 8.18 ಕೋಟಿ ಐಟಿಆರ್​ಗಳ ಸಲ್ಲಿಕೆ; ಇದು ಹೊಸ ದಾಖಲೆ
ಐಟಿ ಇಲಾಖೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2024 | 5:52 PM

Share

ನವದೆಹಲಿ, ಜನವರಿ 2: ಕಳೆದ ಹಣಕಾಸು ವರ್ಷದ (2022-23 FY) ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ITR) ಸಲ್ಲಿಕೆ ಮಾಡಿದವರ ಸಂಖ್ಯೆ ಡಿಸೆಂಬರ್ 31ರವರೆಗೂ 8.18 ಕೋಟಿ. ಹಿಂದಿನ ವರ್ಷದ ಐಟಿಆರ್ ಫೈಲಿಂಗ್ ಅನ್ನು ಇದೇ ಅವಧಿಯಲ್ಲಿ 7.51 ಕೋಟಿ ಜನರು ಮಾಡಿದ್ದರು. ಈ ವರ್ಷ ಶೇ. 9ಕ್ಕೂ ಹೆಚ್ಚು ಮಂದಿ ಐಟಿ ರಿಟರ್ನ್ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

2022-23ರ ಹಣಕಾಸು ವರ್ಷಕ್ಕೆ ರಿಟರ್ನ್ ಫೈಲ್ ಮಾಡಲು ಈಗಲೂ ಅವಕಾಶ ಇದೆ. ಆದರೆ, ಹೆಚ್ಚು ಮೊತ್ತದ ದಂಡ ಪಾವತಿಸಬೇಕು. ಈ ಬಾರಿ ಐಟಿಆರ್ ಸಲ್ಲಿಸುವ ಪ್ರಕ್ರಿಯೆ ಹೆಚ್ಚು ಸರಳಗೊಳಿಸಲಾಗಿದೆ. ಎಐಎಸ್ ಸೌಲಭ್ಯವನ್ನು ಈ ಬಾರಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗಿದೆ. ಈ ಕಾರಣಕ್ಕೆ ಐಟಿಆರ್ ಸಲ್ಲಿಕೆ ಹೆಚ್ಚು ಸರಾಗವಾಗಿ ಆಗಲು ಸಾಧ್ಯವಾಗಿದೆ.

ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 8.18 ಕೋಟಿ ಐಟಿಆರ್​ಗಳ ಜೊತೆ 1.60 ಕೋಟಿ ಆಡಿಟ್ ರಿಪೋರ್ಟ್ ಮತ್ತಿತರ ಫಾರ್ಮ್​​ಗಳನ್ನು ಫೈಲ್ ಮಾಡಲಾಗಿದೆ. ಹಿಂದಿನ ವರ್ಷದಲ್ಲಿ (2022ರ ಡಿ. 31ರವರೆಗೂ) 1.43 ಕೋಟಿ ಆಡಿಟ್ ವರದಿಗಳು ಮತ್ತು ಫಾರ್ಮ್​ಗಳು ಸಲ್ಲಿಕೆ ಆಗಿದ್ದವು.

ಇದನ್ನೂ ಓದಿ: Gautam Adani: ಅದಾನಿ ಹಿತಾಸಕ್ತಿಗಳಿಗೆ ವಿರುದ್ಧವಾದ ಗುಂಪುಗಳ ದಾಳಿ ಎದುರಾದರೂ ಎದೆಗುಂದಲಿಲ್ಲ: ವಿಡಿಯೋ ಸಂದೇಶದಲ್ಲಿ ಗೌತಮ್ ಅದಾನಿ

ಹೆಚ್ಚಿನ ಜನರು ಎಐಎಸ್ ಅಥವಾ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ಮತ್ತು ಟ್ಯಾಕ್ಸ್​ಪೇಯರ್ ಇನ್ಫಾರ್ಮೇಶನ್ ಸಮ್ಮರಿಯನ್ನು (ಟಿಐಎಸ್) ಬಳಕೆ ಮಾಡಿದ್ದಾರೆ. ಎಐಎಸ್ ಮತ್ತು ಟಿಐಎಸ್​ನಲ್ಲಿ ನಮ್ಮ ಎಲ್ಲಾ ಹಣಕಾಸು ಸಂಬಂಧಿತ ವಹಿವಾಟುಗಳು ದಾಖಲಾಗಿರುತ್ತವೆ. ಸಂಬಳ, ಬಡ್ಡಿ, ಡಿವಿಡೆಂಡ್ ಇತ್ಯಾದಿ ಆದಾಯಗಳ ಮಾಹಿತಿ ಇರುತ್ತದೆ. ಪಾವತಿಸಲಾಗಿರುವ ತೆರಿಗೆ ಇತ್ಯಾದಿ ವಿವರವೂ ಇರುತ್ತದೆ.

ಎಐಎಸ್ ಮತ್ತು ಟಿಐಎಸ್ ಬಳಸಿದಾಗ ಐಟಿ ರಿಟರ್ನ್ ಫೈಲ್ ಮಾಡಬೇಕಾದ ಫಾರ್ಮ್​ನಲ್ಲಿ ಈ ಕೆಲ ಮಾಹಿತಿ ಮೊದಲೇ ಭರ್ತಿಯಾಗಿರುತ್ತದೆ. ಹೀಗಾಗಿ, ರಿಟರ್ನ್ ಫೈಲ್ ಮಾಡುವುದು ಸರಾಗವಾಗುತ್ತದೆ.

ಇದನ್ನೂ ಓದಿ: LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ

ಕೆಲ ವರ್ಷಗಳ ಹಿಂದಿನ ವ್ಯವಸ್ಥೆಗೆ ಹೋಲಿಸಿದರೆ ಈಗ ಐಟಿಆರ್ ಸಲ್ಲಿಕೆಯ ಪ್ರಕ್ರಿಯೆ ಬಹಳ ಸರಳವಾಗಿದೆ. ಈಗ ಆಡಿಟರ್ ಅಥವಾ ಅಕೌಂಟೆಂಟ್ ಬಳಿ ಹೋಗಿ ಐಟಿಆರ್ ಸಲ್ಲಿಕೆ ಮಾಡಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯ ತೆರಿಗೆ ಪಾವತಿದಾರನೇ ಹೆಚ್ಚಿನ ಗೋಜಲುಗಳಿಲ್ಲದೆ ಖುದ್ದಾಗಿ ರಿಟರ್ನ್ ಫೈಲ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ