ಭಾರತ-ರಷ್ಯಾ ಆರ್ಥಿಕ ಶೃಂಗದಲ್ಲಿ ರಿಲ್ಕೊ ಸಿಇಒ ಸತೀಶ್ ಸೀನಾಗೆ ಗೌರವ; ರಿಲ್ಕೋ ಕಂಪನಿ ಮಾಡಿದ ಸಾಧನೆಗಳೇನು?

Relcko CEO Satish Kumar Seena honoured with Global Leader Award:ಬ್ಲಾಕ್​​ಚೈನ್, ಡೀಫೈ, ಸ್ಮಾರ್ಟ್ ಕಾಂಟ್ರ್ಯಾಕ್ಟ್ ಇತ್ಯಾದಿ ತಂತ್ರಜ್ಞಾನದಲ್ಲಿ ಪರಿಣಿತಿ ಇರುವ ರಿಲ್ಕೋ ಹಾಗೂ ಅದರ ಸಿಇಒ ಸತೀಶ್ ಕುಮಾರ್ ಸೀನಾಗೆ ಮಾಸ್ಕೋದಲ್ಲಿ ಸನ್ಮಾನಿಸಲಾಗಿದೆ. ಭಾರತ-ರಷ್ಯಾ ಆರ್ಥಿಕ ಶೃಂಗದ ವೇಳೆ ಸೀನಾ ಅವರಿಗೆ ಗ್ಲೋಬಲ್ ಲೀಡರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಿಯಲ್ ಎಸ್ಟೇಟ್​​ನಂತಹ ರಿಯಲ್ ವರ್ಲ್ಡ್ ಆಸ್ತಿಗಳನ್ನು ಟೋಕನೈಸ್ ಮಾಡುವ ಮೂಲಕ ಹೊಸ ಕ್ರಾಂತಿಯನ್ನೇ ಮಾಡಿದ ಸಾಧನೆ ರಿಲ್ಕೋದ್ದು.

ಭಾರತ-ರಷ್ಯಾ ಆರ್ಥಿಕ ಶೃಂಗದಲ್ಲಿ ರಿಲ್ಕೊ ಸಿಇಒ ಸತೀಶ್ ಸೀನಾಗೆ ಗೌರವ; ರಿಲ್ಕೋ ಕಂಪನಿ ಮಾಡಿದ ಸಾಧನೆಗಳೇನು?
ಸತೀಶ್ ಕುಮಾರ್ ಸೀನಾ

Updated on: May 28, 2025 | 11:33 AM

ನವದೆಹಲಿ, ಮೇ 28: ಬ್ಲಾಕ್​​ಚೈನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾಗಿ ಇರುವ ಪ್ರಮುಖ ಕಂಪನಿಗಳಲ್ಲಿ ಒಂದಾದ ಭಾರತದ ರಿಲ್ಕೊ ಸಂಸ್ಥೆ ಹಾಗು ಅದರ ಸಿಇಒ ಡಾ. ಸತೀಶ್ ಕುಮಾರ್ ಸೀನಾ (Relcko CEO Dr. Satish Kumar Seena) ಅವರಿಗೆ ಮಾಸ್ಕೋದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಇತ್ತೀಚೆಗೆ ನಡೆದ ಭಾರತ ಮತ್ತು ರಷ್ಯಾ ಆರ್ಥಿಕ ಶೃಂಗಸಭೆಯಲ್ಲಿ ಸೀನಾ ಅವರಿಗೆ 2025ರ ಸಾಲಿನ ಗ್ಲೋಬಲ್ ಲೀಡರ್ ಪ್ರಶಸ್ತಿ ನೀಡಲಾಯಿತು. ಬ್ಲಾಕ್​​ಚೇನ್ ತಂತ್ರಜ್ಞಾನ ಮತ್ತು ಅಂತಾರಾಷ್ಟ್ರೀಯ ಬ್ಯುಸಿನೆಸ್ ನೆಟ್ವರ್ಕಿಂಗ್ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ರಷ್ಯಾ ಮತ್ತು ಸೇಂಟ್ ಪೀಟರ್ಸ್​​ಬರ್ಗ್​​ನಲ್ಲಿ ನಡೆದ ಭಾರತ-ರಷ್ಯಾ ಎಕನಾಮಿಕ್ ಸಮಿಟ್​​ನಲ್ಲಿ ಎರಡೂ ದೇಶಗಳ ಉದ್ಯಮ ಪರಿಣಿತರು, ನೀತಿರೂಪಕರು ಭಾಗವಹಿಸಿದ್ದರು. ರಷ್ಯಾದ ಮೊದಲ ಉಪ ಪ್ರಧಾನಿ ಡಾ. ಡೆನಿಸ್ ಮಾಂಟುರೋವ್, ಭಾರತಕ್ಕೆ ರಷ್ಯನ್ ರಾಯಭಾರಿಯಾದ ವಲೇರಿ ಖೋಡಝೇವ್, ರಷ್ಯಾ ಅಧ್ಯಕ್ಷರ ಉಖ್ಯ ಸಲಹೆಗಾರ ಆಂಟನ್ ಕೊಬ್ಯಾಕೊವ್ ಮೊದಲಾದ ರಷ್ಯನ್ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ; ಕರ್ನಾಟಕದಲ್ಲೆಷ್ಟು ರಜೆ? ಇಲ್ಲಿದೆ ಪಟ್ಟಿ

ರಿಲ್ಕೋ ಕಂಪನಿಯ ಸಾಧನೆಗಳೇನು?

ರಿಯಲ್ ಎಸ್ಟೇಟ್​​ನಂತಹ ನೈಜ ಜಗತ್ತಿನ ಆಸ್ತಿಗಳನ್ನು ರಿಲ್ಕೋ ಸಮರ್ಪಕ ರೀತಿಯಲ್ಲಿ ಟೋಕನೈಸ್ ಮಾಡುತ್ತಿದೆ. ಬ್ಲಾಕ್​​ಚೈನ್ ಟೆಕ್ನಾಲಜಿ ಅಳವಡಿಕೆ, ಡೀಫೈ, ಸ್ಮಾರ್ಟ್ ಕಾಂಟ್ರ್ಯಾಕ್ಟ್ಸ್ ಕಾರ್ಯಗಳಲ್ಲಿ ಪಳಗಿರುವ ರಿಲ್ಕೋ, ರಿಯಲ್ ಎಸ್ಟೇಟ್ ಆಸ್ತಿಗಳನ್ನು ಇದೇ ಬ್ಲಾಕ್​​ಚೈನ್ ಟೆಕ್ನಾಲಜಿ ಬಳಸಿ ಟೋಕನೈಸ್ ಮಾಡಲು ಯಶಸ್ವಿಯಾಗಿದೆ.

2030ರೊಳಗೆ ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಲಿದೆ ಆರ್​​ಡಬ್ಲ್ಯುಎ ಮಾರುಕಟ್ಟೆ

ರಿಯಲ್ ಎಸ್ಟೇಟ್​​ನಂತಹ ರಿಯಲ್ ವರ್ಲ್ಡ್ ಅಸೆಟ್​​ಗಳ ಮಾರುಕಟ್ಟೆ ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದ್ದು, ಒಂದು ಅಂದಾಜು ಪ್ರಕಾರ 2030ರೊಳಗೆ ಇದು ಒಂದು ಟ್ರಿಲಿಯನ್ ಡಾಲರ್ ಗಾತ್ರದ್ದಾಗಬಹುದು.

ಇದನ್ನೂ ಓದಿ: ಈ ವರ್ಷ ಭಾರತದ ರಫ್ತು 1 ಟ್ರಿಲಿಯನ್ ಡಾಲರ್ ಮುಟ್ಟುವ ನಿರೀಕ್ಷೆ; ಇಲ್ಲಿದೆ ಟಾಪ್-10 ಪಟ್ಟಿ

ಬ್ಲಾಕ್​ಚೈನ್ ಟೆಕ್ನಾಲಜಿ ಮೂಲಕ ರಿಲ್ಕೋ ಸಂಸ್ಥೆಯು ರಿಯಲ್ ಎಸ್ಟೇಟ್ ಆಸ್ತಿಯ ಟೋಕನೈಸ್ ಮಾಡುತ್ತದೆ. ರಿಯಲ್ ಎಸ್ಟೇಟ್ ಆಸ್ತಿಯ ವಹಿವಾಟು ಸಂಪೂರ್ಣ ಡಿಜಿಟಲೀಕರಣಗೊಳಿಸುತ್ತದೆ. ರಿಯಲ್ ಎಸ್ಟೇಟ್​​​ನಲ್ಲಿ ಹೂಡಿಕೆ ಮಾಡಬೇಕೆಂದರೆ ಈಗ ನಿವೇಶನ ಅಥವಾ ಫ್ಲಾಟ್ ಖರೀದಿಸುವ ಅವಶ್ಯಕತೆ ಇರುವುದಿಲ್ಲ. ಷೇರುಗಳ ರೀತಿ ರಿಯಲ್ ಎಸ್ಟೇಟ್ ಆಸ್ತಿಯನ್ನೂ ಭಾಗಶಃವಾಗಿ ಖರೀದಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ