Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ; ಕರ್ನಾಟಕದಲ್ಲೆಷ್ಟು ರಜೆ? ಇಲ್ಲಿದೆ ಪಟ್ಟಿ
Bank Holidays list for June: 2025ರ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟಾರೆ 13 ದಿನ ರಜೆ ಇದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಒಳಗೊಂಡಿವೆ. ಬಕ್ರೀದ್ ಇತ್ಯಾದಿ ಹಬ್ಬ ಮತ್ತಿತರ ದಿನಗಳು ಇವೆ. ಜೂನ್ 7ರಂದು ಇರುವ ಬಕ್ರೀದ್ಗೆ ಬಹುತೇಕ ಸಾರ್ವತ್ರಿಕ ರಜೆ ಇರುತ್ತದೆ. ಕರ್ನಾಟಕದಲ್ಲಿ ಭಾನುವಾರ, ಶನಿವಾರದ ರಜೆ ಜೊತೆಗೆ ಬಕ್ರೀದ್ಗೂ ರಜೆ ಇರುತ್ತದೆ.

ಬೆಂಗಳೂರು, ಮೇ 27: ಮುಂಬರುವ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 13 ರಜಾ ದಿನಗಳಿವೆ. ಇದರಲ್ಲಿ ಐದು ಭಾನುವಾರದ ರಜೆಗಳೇ ಸೇರಿವೆ. ವಿವಿಧ ಪ್ರದೇಶಗಳಿಗೆ ಸೀಮಿತವಾಗಿರುವ ರಜೆಗಳನ್ನೂ (Bank Holidays) ಇದರಲ್ಲಿ ಒಳಗೊಳ್ಳಲಾಗಿದೆ. ಇದೇ ಜೂನ್ ತಿಂಗಳಲ್ಲಿ ಬಕ್ರೀದ್ ಹಬ್ಬ (Bakrid), ಗುರುಗೋಬಿಂದ್ ಜಯಂತಿ ಇತ್ಯಾದಿ ಹಬ್ಬಗಳಿವೆ. ಬಕ್ರೀದ್ಗೆ ಬಹುತೇಕ ಎಲ್ಲೆಡೆ ರಜೆ ಇದೆ. ಕರ್ನಾಟಕದಲ್ಲಿ ಎಂಟು ರಜಾದಿನಗಳಿವೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಶನಿವಾರದ ರಜೆಗಳು ಇವೆ.
2025ರ ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು
- ಜೂನ್ 1: ಭಾನುವಾರದ ರಜೆ
- ಜೂನ್ 6, ಶುಕ್ರವಾರ: ಈದ್ ಉಲ್ ಅಧಾ – ಬಕ್ರೀದ್ (ಕೇರಳದಲ್ಲಿ ರಜೆ)
- ಜೂನ್ 7, ಶನಿವಾರ: ಬಕ್ರೀದ್ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಜೂನ್ 8: ಭಾನುವಾರ
- ಜೂನ್ 11, ಬುಧವಾರ: ಸಂತ ಗುರು ಕಬೀರ್ ಜಯಂತಿ ಮತ್ತು ಸಾಗಾ ದವಾ ಹಬ್ಬ (ಸಿಕ್ಕಿಂ ಮತ್ತು ಮೇಘಾಲಯದಲ್ಲಿ ರಜೆ)
- ಜೂನ್ 12, ಗುರುವಾರ: ಗುರು ಹರಗೋಬಿಂದ್ಜಿ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
- ಜೂನ್ 14: ಎರಡನೇ ಶನಿವಾರ
- ಜೂನ್ 15: ಭಾನುವಾರ
- ಜೂನ್ 22: ಭಾನುವಾರ
- ಜೂನ್ 27, ಶುಕ್ರವಾರ: ರಥಯಾತ್ರಾ ಮತ್ತು ಕಾಂಗ್ ಹಬ್ಬ (ಒಡಿಶಾ, ಮಣಿಪುರದಲ್ಲಿ ರಜೆ)
- ಜೂನ್ 28: ನಾಲ್ಕನೇ ಶನಿವಾರ
- ಜೂನ್ 29: ಭಾನುವಾರ
- ಜೂನ್ 30, ಸೋಮವಾರ: ರೆಮ್ನಾ ನೀ ಅಥವಾ ಶಾಂತಿ ದಿನಾಚರಣೆ (ಮಿಝೋರಾಂನಲ್ಲಿ ರಜೆ)
ಇದನ್ನೂ ಓದಿ: ಬ್ಯಾಂಕ್ ಬಿದ್ದರೂ ಮುಳಗಲ್ಲ ನಿಮ್ಮ ಹಣ; ಇನ್ಷೂರೆನ್ಸ್ ಗ್ಯಾರಂಟಿಯನ್ನು 10 ಲಕ್ಷ ರೂಗೆ ಏರಿಸಲಿದೆ ಸರ್ಕಾರ
ಕರ್ನಾಟಕದಲ್ಲಿ ಜೂನ್ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ
- ಜೂನ್ 1: ಭಾನುವಾರ
- ಜೂನ್ 7, ಶನಿವಾರ: ಬಕ್ರೀದ್
- ಜೂನ್ 8: ಭಾನುವಾರ
- ಜೂನ್ 14: ಎರಡನೇ ಶನಿವಾರ
- ಜೂನ್ 15: ಭಾನುವಾರ
- ಜೂನ್ 22: ಭಾನುವಾರ
- ಜೂನ್ 28: ನಾಲ್ಕನೇ ಶನಿವಾರ
- ಜೂನ್ 29: ಭಾನುವಾರ
ಬ್ಯಾಂಕುಗಳು ಬಂದ್ ಆಗಿದ್ದರೂ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ಅಡ್ಡಿ ಇರುವುದಿಲ್ಲ. ಕ್ಯಾಷ್ ಪಡೆಯಲು ಎಟಿಎಂಗಳು ಸದಾ ತೆರೆದಿರುತ್ತವೆ. ಆನ್ಲೈನ್ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸದಾ ಇರುತ್ತವೆ. ಹಣ ವರ್ಗಾವಣೆಗೆ ಯಾವ ಸಮಸ್ಯೆಯೂ ಇರುವುದಿಲ್ಲ. ಬ್ಯಾಂಕ್ ಕಚೇರಿಗೆ ಹೋಗಿಯೇ ಮಾತ್ರ ಮಾಡಬಹುದಾದ ಕೆಲಸಗಳಿಗೆ ರಜಾ ದಿನ ಅಡಚಣೆ ಆಗಬಹುದು. ಅಂಥವರು ಮುಂಚಿತವಾಗಿ ರಜಾ ದಿನಗಳನ್ನು ಗುರುತಿಟ್ಟುಕೊಂಡರೆ ಪ್ಲಾನ್ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








