Reliance Jio: ಕೇವಲ 11 ರೂಗೆ 10 ಜಿಬಿ ಡಾಟಾ; ಜಿಯೋದಿಂದ ಹೊಸ ಪ್ಯಾಕ್ ಬಿಡುಗಡೆ

|

Updated on: Nov 15, 2024 | 11:35 AM

Reliance Jio Rs 11 pack: ರಿಲಾಯನ್ಸ್ ಜಿಯೋ ಹನ್ನೊಂದು ರುಪಾಯಿಗೆ ಬರೋಬ್ಬರಿ 10ಜಿಬಿ ಡಾಟಾ ಆಫರ್ ಮಾಡಿದೆ. ಆದರೆ, ಇದು ಒಂದು ಗಂಟೆ ಅವಧಿ ಮಾತ್ರವೇ ವ್ಯಾಲಿಡಿಟಿ ಹೊಂದಿರುತ್ತದೆ. ಅಲ್ಪಾವಧಿಗೆ ಇಂಟರ್ನೆಟ್ ಅವಶ್ಯಕತೆ ಇದ್ದವರಿಗೆ ಈ ಪ್ಲಾನ್ ಸೂಕ್ತವಾಗಿರುತ್ತದೆ. ಜಿಯೋದಲ್ಲಿ ಒಂದು ದಿನದಿಂದ ಹಿಡಿದು ಬೇಸ್ ಪ್ಲಾನ್ ಅವಧಿಯವರೆಗೆ ಬೇರೆ ಬೇರೆ ರಿಚಾರ್ಚ್ ಪ್ಲಾನ್​ಗಳಿವೆ.

Reliance Jio: ಕೇವಲ 11 ರೂಗೆ 10 ಜಿಬಿ ಡಾಟಾ; ಜಿಯೋದಿಂದ ಹೊಸ ಪ್ಯಾಕ್ ಬಿಡುಗಡೆ
ಜಿಯೋ
Follow us on

ನವದೆಹಲಿ, ಅಕ್ಟೋಬರ್ 15: ರಿಲಾಯನ್ಸ್ ಜಿಯೋ ಕೇವಲ 11 ರುಪಾಯಿಗೆ 10 ಜಿಬಿ ಡಾಟಾ ವೋಚರ್ ಆಫರ್ ಮಾಡುತ್ತಿದೆ. ಇದು 4ಜಿ ಹೈಸ್ಪೀಡ್ ಡಾಟಾ ಒದಗಿಸುತ್ತದೆ. ತಮ್ಮ ನಿತ್ಯದ ಡಾಟಾ ಮಿತಿ ದಾಟಿದ ಬಳಕೆದಾರರು ತಾತ್ಕಾಲಿಕವಾಗಿ ಇಂಟರ್ನೆಟ್ ಅವಶ್ಯಕತೆ ಇದೆ ಎನ್ನುವ ಸಂದರ್ಭಕ್ಕೆ ಈ ಡಾಟಾ ಪ್ಯಾಕ್ ಸಹಾಯವಾಗುತ್ತದೆ. ಬೇಸ್ ಪ್ಲಾನ್ ಇಲ್ಲದಿದ್ದರೂ ಈ 11 ರೂ ರೀಚಾರ್ಜ್ ವರ್ಕೌಟ್ ಆಗುತ್ತದೆ.

ಈ 11 ರೂ ರೀಚಾರ್ಜ್​ನಿಂದ ಜಿಯೋ ಗ್ರಾಹಕರು 10 ಜಿಬಿಯಷ್ಟು 4ಜಿ ಡಾಟಾ ಪಡೆಯುತ್ತಾರೆ. ಇದರ ಕಾಲಾವಧಿ ಒಂದು ಗಂಟೆ ಮಾತ್ರವೇ ಇರುತ್ತದೆ. ಇದರಲ್ಲಿ ಇಂಟರ್ನೆಟ್ ಮಾತ್ರವೇ ಲಭ್ಯ ಆಗುತ್ತದೆ. ಹೆಚ್ಚುವರಿ ಎಸ್ಸೆಮ್ಮೆಸ್ ಇತ್ಯಾದಿ ಅನುಕೂಲಗಳು ಇರುವುದಿಲ್ಲ. ಒಂದು ಗಂಟೆ ಅವಧಿ ಹೆಚ್ಚು ಇಂಟರ್ನೆಟ್ ಬಳಕೆಯ ಅವಶ್ಯಕತೆ ಇದ್ದವರಿಗೆ ಕಡಿಮೆ ಬೆಲೆಗೆ ಡಾಟಾ ಒದಗಿಸುವ ಒಳ್ಳೆಯ ಆಫರ್ ಇದಾಗಿದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಖತ್ ವಾಹನ ಸಂಚಾರ; ನಿರೀಕ್ಷೆಮೀರಿಸಿದ ಅಕ್ಟೋಬರ್ ಟೋಲ್ ಕಲೆಕ್ಷನ್

ಅಲ್ಪಾವಧಿಯಲ್ಲಿ ನಿಮ್ಮ ಇಂಟರ್ನೆಟ್ ಬಳಕೆ ಅನಿಶ್ಚಿತವಾಗಿದ್ದ ಪಕ್ಷದಲ್ಲಿ ಈ 11 ರೂ ಪ್ಲಾನ್ ಅಷ್ಟು ಉಪಯೋಗಕ್ಕೆ ಬಾರದೇ ಹೋಗಬಹುದು. ಅಂಥ ಸಂದರ್ಭದಲ್ಲಿ ಒಂದು ದಿನದ ವ್ಯಾಲಿಡಿಟಿ, ಅಥವಾ 30 ದಿನದ ವ್ಯಾಲಿಡಿಟಿ, ಅಥವಾ ಬೇಸ್ ಪ್ಲಾನ್​ನ ಅವಧಿಯವರೆಗೆ ವ್ಯಾಲಿಡಿಟಿ ಇರುವ ಡಾಟಾ ರೀಚಾರ್ಜ್ ವೋಚರ್​​ಗಳನ್ನು ಖರೀದಿಸಬಹುದು.

49 ರೂ ಡಾಟಾ ವೋಚರ್​ನಲ್ಲಿ ನೀವು ಎಷ್ಟು ಬೇಕಾದರೂ 4ಜಿ ಡಾಟಾ ಬಳಸಬಹುದು. ಆದರೆ, ವ್ಯಾಲಿಡಿಟಿ ಅವಧಿ ಒಂದು ದಿನ ಮಾತ್ರವೇ ಇರುತ್ತದೆ.

ಬೇಸ್ ಪ್ಲಾನ್ ಅವಧಿಯವರೆಗೆ ಸಿಂಧುವಾಗಿರುವಂತಹ ಬೂಸ್ಟರ್ ಪ್ಯಾಕ್ 19 ರೂನಿಂದ ಆರಂಭವಾಗಿ 139 ರೂವರೆಗೂ ಇದೆ. 19 ರುಪಾಯಿಗೆ ಒಂದು ಜಿಬಿ ಡಾಟಾ ಸಿಗುತ್ತದೆ. 139 ರುಪಾಯಿಗೆ 12 ಜಿಬಿ ಡಾಟಾ ಸಿಗುತ್ತದೆ.

ಇದನ್ನೂ ಓದಿ: Trade Deficit: ಅಕ್ಟೋಬರ್​ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 27.14 ಬಿಲಿಯನ್ ಡಾಲರ್​ಗೆ ಇಳಿಕೆ

ಜಿಯೋದಿಂದ ಇತರ ಪ್ಲಾನ್​ಗಳೂ ಇವೆ. 175 ರೂ ಪ್ಲಾನ್​ನಲ್ಲಿ 10ಜಿಬಿ ಡಾಟಾ ಸಿಗುತ್ತದೆ. ಇದು 28 ದಿನ ವ್ಯಾಲಿಡಿಟಿ ಹೊಂದಿರುತ್ತದೆ. ಇನ್ನು, 219 ರೂ ವೋಚರ್ ರೀಚಾರ್ಜ್ ಮಾಡಿದರೆ ಅದು 30 ದಿನ ವ್ಯಾಲಿಡಿಟಿ ಹೊಂದಿದ್ದು 30 ಜಿಬಿಯಷ್ಟು ಡಾಟಾ ಒದಗಿಸುತ್ತದೆ. ಇನ್ನೂ ಹೆಚ್ಚಿನ ಡಾಟಾ ಬೇಕೆಂದರೆ 359 ರೂ ರೀಚಾರ್ಜ್ ಬಳಸಬಹುದು. ಇದು 50ಜಿಬಿಯಷ್ಟು ಡಾಟಾ ಒದಗಿಸುತ್ತದೆ. 30 ದಿನ ವ್ಯಾಲಿಡಿಟಿ ಹೊಂದಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ