Jio Offer: ಜಿಯೋದಿಂದ ದೀಪಾವಳಿ ಧಮಾಕ ಆಫರ್; ಒಂದು ವರ್ಷ ಉಚಿತವಾಗಿ ಜಿಯೋ ಏರ್​ಫೈಬರ್ ಪಡೆಯಿರಿ

|

Updated on: Sep 18, 2024 | 12:51 PM

Jio deepavali festive offer for AirFiber: ರಿಲಾಯನ್ಸ್ ಜಿಯೋ ಸಂಸ್ಥೆ ದೀಪಾವಳಿ ಧಮಾಕ ಘೋಷಿಸಿದೆ. ರಿಲಾಯನ್ಸ್ ಡಿಜಿಟಲ್​ನಲ್ಲಿ ಕನಿಷ್ಠ 20,000 ರೂ ಶಾಪಿಂಗ್ ಮಾಡಿದರೆ ಒಂದು ವರ್ಷ ಜಿಯೋ ಏರ್​ಫೈಬರ್ ಸರ್ವಿಸ್ ಉಚಿತವಾಗಿ ಪಡೆಯಬಹುದು. 50 ರೂ ಪಾವತಿಸಿದರೆ ಉಚಿತವಾಗಿ ಜಿಯೋ ಏರ್​ಫೈಬರ್ ಕನೆಕ್ಷನ್ ಪಡೆಯಬಹುದು.

Jio Offer: ಜಿಯೋದಿಂದ ದೀಪಾವಳಿ ಧಮಾಕ ಆಫರ್; ಒಂದು ವರ್ಷ ಉಚಿತವಾಗಿ ಜಿಯೋ ಏರ್​ಫೈಬರ್ ಪಡೆಯಿರಿ
ಜಿಯೋ ಏರ್​ಫೈಬರ್
Follow us on

ನವದೆಹಲಿ, ಸೆಪ್ಟೆಂಬರ್ 18: ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಇದೀಗ ದೀಪಾವಳಿ ಧಮಾಕ ಆಫರ್ ಬಿಡುಗಡೆ ಮಾಡಿದೆ. ಬಹಳ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಜಿಯೋ ಏರ್​ಫೈಬರ್ ಸರ್ವಿಸ್ ಅನ್ನು ಉಚಿತವಾಗಿ ಪಡೆಯುವ ಅವಕಾಶ ಕಲ್ಪಿಸಿದೆ. ಇವತ್ತಿನಿಂದ ಈ ಆಫರ್ ಚಾಲನೆಗೆ ಬಂದಿದ್ದು, ನವೆಂಬರ್ 3ರವರೆಗೂ ಲಭ್ಯ ಇರುತ್ತದೆ. ಹೊಸ ಗ್ರಾಹಕರನ್ನು ಸೆಳೆಯಲು ಜಿಯೋ ಈ ತಂತ್ರ ಮಾಡಿದೆ. ಹಾಗೆಯೇ, ಹಾಲಿ ಜಿಯೋ ಫೈಬರ್ ಮತ್ತು ಜಿಯೊ ಏರ್​ಫೈಬರ್ ಗ್ರಾಹಕರೂ ಕೂಡ ಒಂದು ವರ್ಷ ಉಚಿತ ಸೇವೆಯ ಅವಕಾಶ ಪಡೆಯಬಹುದು.

ಜಿಯೋ ಏರ್​ಫೈಬರ್ ಸೇವೆ ಒಂದು ವರ್ಷ ಉಚಿತವಾಗಿ ಪಡೆಯುವುದು ಹೇಗೆ?

ಯಾವುದೇ ರಿಲಾಯನ್ಸ್ ಡಿಜಿಟಲ್ ಅಥವಾ ಮೈ ಜಿಯೋ ಸ್ಟೋರ್​ನಲ್ಲಿ ನೀವು ಕನಿಷ್ಠ 20,000 ರೂ ಮೌಲ್ಯದ ವಸ್ತುಗಳನ್ನು ಖರೀದಿಸುವುದು ಒಂದು ಮಾರ್ಗ. ಟಿವಿ, ಮೊಬೈಲ್, ಲ್ಯಾಪ್​ಟಾಪ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಇತ್ಯಾದಿ ನಾನಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ರಿಲಾಯನ್ಸ್ ಡಿಜಿಟಲ್​ನಲ್ಲಿ ಲಭ್ಯ ಇವೆ. ಇಲ್ಲಿ ನೀವು 20,000 ರೂಗೂ ಹೆಚ್ಚು ಶಾಪಿಂಗ್ ಮಾಡಿದರೆ ಒಂದು ವರ್ಷ ನಿಮಗೆ ಜಿಯೋ ಏರ್​ಫೈಬರ್ ಸರ್ವಿಸ್ ಉಚಿತವಾಗಿ ಸಿಗುತ್ತದೆ.

ಇನ್ನು, ಈಗಾಗಲೇ ಜಿಯೋ ಏರ್​ಫೈಬರ್ ಕನೆಕ್ಷನ್ ಹೊಂದಿರುವವರೂ ಕೂಡ ಒಂದು ವರ್ಷದ ಉಚಿತ ಸರ್ವಿಸ್ ಅನ್ನು ಪಡೆಯಲು ಅವಕಾಶ ಇದೆ. 2,222 ರೂ ಮೌಲ್ಯದ 3 ತಿಂಗಳ ದೀಪಾವಳಿ ಪ್ಲಾನ್ ಅನ್ನು ಖರೀದಿಸಿದಲ್ಲಿ ಒಂದು ವರ್ಷ ಪ್ರೀ ಸರ್ವಿಸ್ ಸಿಗುತ್ತದೆ.

ಇದನ್ನೂ ಓದಿ: ಇಪಿಎಫ್ ಬದಲಾವಣೆ ಗಮನಿಸಿ; ಪಿಎಫ್ ವಿತ್​ಡ್ರಾಯಲ್ ಮಿತಿ ಹೆಚ್ಚಳ; ಒಮ್ಮೆಗೆ 1 ಲಕ್ಷ ರೂವರೆಗೆ ಹಣ ಹಿಂಪಡೆಯಲು ಅವಕಾಶ

ಜಿಯೋ ಫೈಬರ್ ಬಳಕೆದಾರರು ಈಗಿರುವ ತಮ್ಮ ಪ್ಲಾನ್​ಗೆ ಒನ್ ಟೈಮ್ ಅಡ್ವಾನ್ಸ್ ರೀಚಾರ್ಜ್ ಮಾಡಿದರೆ ಒಂದು ವರ್ಷ ಫ್ರೀ ಸರ್ವಿಸ್ ಪಡೆಯಬಹುದು.

50 ರೂ ಪಾವತಿಸಿದರೆ ಉಚಿತ ಕನೆಕ್ಷನ್

ನೀವು ರಿಲಾಯನ್ಸ್ ಜಿಯೋ ವೆಬ್​ಸೈಟ್ ಮೂಲಕ ಉಚಿತ ಜಿಯೋ ಏರ್​ಫೈಬರ್ ಕನೆಕ್ಷನ್ ಪಡೆಯಬಹುದು. 50 ರೂ ಪಾವತಿಸಿದರೆ ಫ್ರೀ ಕನೆಕ್ಷನ್ ಸಿಗುತ್ತದೆ. ಇಲ್ಲಿ ರೂಟರ್​ನಿಂದ ಹಿಡಿದು ಎಲ್ಲವನ್ನೂ ಉಚಿತವಾಗಿ ಇನ್ಸ್​ಟಾಲ್ ಮಾಡಲಾಗುತ್ತದೆ. ಅದಾದ ಬಳಿಕ ನೀವು ಯಾವುದಾದರೂ ಪ್ಲಾನ್ ಖರೀದಿಸಬೇಕು. ಇಲ್ಲಿ ಪ್ಲಾನ್​ಗಳು ಮಾಸಿಕ 599 ರೂನಿಂದ ಆರಂಭವಾಗುತ್ತದೆ. ಬೇಸಿಕ್ ಪ್ಲಾನ್​ನಲ್ಲಿ 800ಕ್ಕೂ ಹೆಚ್ಚು ಟಿವಿ ವಾಹಿನಿ, 30 ಎಂಬಿಪಿಎಸ್​ವರೆಗೆ ಇಂಟರ್ನೆಟ್ ಸ್ಪೀಡ್, 13 ಒಟಿಟಿ ಇತ್ಯಾದಿಗಳು ಲಭ್ಯ ಇರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ