ಜಿಯೋಭಾರತ್ ಸರಣಿಯ ಎರಡು ಫೋನ್ ಬಿಡುಗಡೆ; ಬೆಲೆ 1,099 ರೂ; ರೀಚಾರ್ಜ್ ಪ್ಲಾನ್ 123 ರೂ ಮಾತ್ರ

|

Updated on: Oct 15, 2024 | 5:32 PM

Reliance Jio launches Jiobharat v3 and v4 series feature phones: 4ಜಿ ಶಕ್ತವಾಗಿರುವ ಜಿಯೋಭಾರತ್ ವಿ3 ಮತ್ತು ವಿ4 ಫೀಚರ್ ಫೋನ್​ಗಳನ್ನು ರಿಲಾಯನ್ಸ್ ಜಿಯೋ ಇಂದು (ಅ. 15) ಅನಾವರಣಗೊಳಿಸಿದೆ. ಸ್ಮಾರ್ಟ್​ಫೋನ್​ನ ಕೆಲ ಫೀಚರ್​ಗಳು ಈ ಜಿಯೋಭಾರತ್ ಫೋನ್​ನಲ್ಲಿ ಕಾಣಬಹುದು. ಲೈವ್ ಟಿವಿ, ವಿಡಿಯೋ ಸ್ಟ್ರೀಮಿಂಗ್, ಯುಪಿಐ ಪೇಮೆಂಟ್ ಮೊದಲಾದವನ್ನು ಬಳಸಬಹುದು.

ಜಿಯೋಭಾರತ್ ಸರಣಿಯ ಎರಡು ಫೋನ್ ಬಿಡುಗಡೆ; ಬೆಲೆ 1,099 ರೂ; ರೀಚಾರ್ಜ್ ಪ್ಲಾನ್ 123 ರೂ ಮಾತ್ರ
ಜಿಯೋಭಾರತ್
Follow us on

ನವದೆಹಲಿ, ಅಕ್ಟೋಬರ್ 15: ಬಿಎಸ್ಸೆನ್ಎಲ್​ನಿಂದ ನಿರ್ದಿಷ್ಟ ಮಟ್ಟದಲ್ಲಿ ಪೈಪೋಟಿ ಎದುರಿಸುತ್ತಿರುವ ರಿಲಾಯನ್ಸ್ ಜಿಯೋ ಎರಡು ಹೊಸ ಫೀಚರ್ ಫೋನ್​ಗಳನ್ನು ಬಿಡುಗಡೆ ಮಾಡಿದೆ. ಇಂಡಿಯನ್ ಮೊಬೈಲ್ ಕಾಂಗ್ರೆಸ್ 2024 ಸಮಾವೇಶದಲ್ಲಿ ಜಿಯೋ ಸಂಸ್ಥೆ ಜಿಯೋಭಾರತ್ ಸರಣಿಯ ವಿ3 ಮತ್ತು ವಿ4 ಫೋನ್​ಗಳನ್ನು ಅನಾವರಣಗೊಳಿಸಿದೆ. 4ಜಿ ಟೆಕ್ನಾಲಜಿ ಸಕ್ರಿಯವಾಗಿರುವ ಈ ಫೋನ್​ನ ಬೆಲೆ ಕೇವಲ 1,099 ರೂ ಇದೆ. ಇದರ ಮಾಸಿಕ ರೀಚಾರ್ಜ್ ದರ ಕೇವಲ 123 ರೂ ಇದೆ. ಕಳೆದ ವರ್ಷ ಜಿಯೋಭಾರತ್ ವಿ2 ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ ಈಗ ಇನ್ನೆರಡು ಹೊಸ ಫೋನ್​ಗಳನ್ನು ಜಿಯೋ ಹೊರತಂದಿದೆ.

ವಿ3 ಮತ್ತು ವಿ4 ಜಿಯೋಭಾರತ್ ಫೀಚರ್ ಫೋನ್​ಗಳಾದರೂ ಸ್ಮಾರ್ಟ್​ಫೋನ್​ನ ಕೆಲ ಪ್ರಮುಖ ಫೀಚರ್​ಗಳು ಇವುಗಳಲ್ಲಿವೆ. ಯುಪಿಐ ಪಾವತಿ ಮಾಡಬಹುದು. ಲೈವ್ ಟಿವಿ ನೋಡಬಹುದು. ಜಿಯೋ ಟಿವಿ, ಜಿಯೋಪೇ, ಜಿಯೋ ಸಿನಿಮಾ ಇತ್ಯಾದಿ ಆ್ಯಪ್​ಗಳ ಮೂಲಕ ವಿಡಿಯೋ ಸ್ಟ್ರೀಮಿಂಗ್ ಪಡೆಯಬಹುದು.

ಇದನ್ನೂ ಓದಿ: ಕಸ ಗುಡಿಸುವ ಕಾಯಕ; ಸಾಯುವಾಗ ಹೊಂದಿದ್ದ ಆಸ್ತಿ 60 ಕೋಟಿ ರೂ; ಮಾದರಿಯಾಗುವ ರೊನಾಲ್ಡ್ ರೀಡ್ ಕಥೆ

ಜಿಯೋ ಭಾರತ್ ವಿ3 ಮತ್ತು ವಿ4 ಫೋನ್​ಗಳ ವಿನ್ಯಾಸ ಆಕರ್ಷಕವಾಗಿರುವಂತೆ ರೂಪಿಸಲಾಗಿದೆ. ಈ ಎರಡೂ ಫೋನ್​ಗಳ ಬ್ಯಾಟರಿ 1,000 ಎಂಎಎಚ್​ನಷ್ಟಿದೆ. ಮೆಮೋರಿ ಸ್ಟೋರೇಜ್ 128 ಜಿಬಿಯವರೆಗೂ ವಿಸ್ತರಿಸಬಹುದು. ಕನ್ನಡವೂ ಸೇರಿದಂತೆ 23 ಭಾರತೀಯ ಭಾಷೆಗಳಲ್ಲಿ ಯೂಸರ್ ಇಂಟರ್​ಫೇಸ್ ಅನ್ನು ಸಿದ್ಧಪಡಿಸಲಾಗಿದೆ.

ಮಾಸಿಕ ರೀಚಾರ್ಜ್ ಕೇವಲ 123 ರೂ

ಜಿಯೋಭಾರತ್ ವಿ3 ಮತ್ತು ವಿ4 ಫೋನ್​ಗಳು 4ಜಿ ಶಕ್ತವಿವೆ. ಬೆಲೆ 1,099 ರೂ ನಿಗದಿಯಾಗಿದೆ. ವಿಶೇಷವೆಂದರೆ ಮಾಸಿಕ ರೀಚಾರ್ಜ್ ಪ್ಲಾನ್ ಕೇವಲ 123 ರೂ ಇದೆ. ಈ ಪ್ಲಾನ್​ಗೆ ಅನ್​ಲಿಮಿಟೆಡ್ ಕರೆ, ಮತ್ತು 14ಜಿಬಿ ಡಾಟಾ ಕೂಡ ಸಿಗುತ್ತದೆ. ಬೇರೆ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್​ಗಿಂತ ಜಿಯೋದ ಈ 123 ರೂ ಪ್ಲಾನ್ ಹೆಚ್ಚು ಅಗ್ಗವಾಗಿದೆ.

ಇದನ್ನೂ ಓದಿ: ಸಾಮಾನ್ಯ ಬಳಕೆಯ 11 ಔಷಧಗಳ ಗರಿಷ್ಠ ಬೆಲೆ ಹೆಚ್ಚಿಸಿದ ಸರ್ಕಾರ; ಯಾವುವು ಈ ಔಷಧಗಳು?

ಜಿಯೋಭಾರತ್ ವಿ3 ಮತ್ತು ವಿ4 ಫೋನ್​ಗಳು ಜಿಯೋಮಾರ್ಟ್ ಮತ್ತು ಅಮೇಜಾನ್​ನಲ್ಲಿ ಲಭ್ಯ ಇವೆ. ಹಾಗೆಯೇ, ಮೊಬೈಲ್ ಶಾಪ್​ಗಳಲ್ಲೂ ಅದನ್ನು ಖರೀದಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ